Tech Tips: ರೈಲಿನಲ್ಲಿ ಹೋಗುವಾಗ ಮೊಬೈಲ್ ಅಥವಾ ಪರ್ಸ್ ಹೊರ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ
ಬ್ಯಾಂಕಿಂಗ್ ವಿವರಗಳಿಂದ ಹಿಡಿದು ಪ್ರಮುಖ ಐಡಿಗಳವರೆಗೆ ಎಲ್ಲಾ ಮಾಹಿತಿಯನ್ನು ನಾವು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಟ್ಟುಕೊಡಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ರೈಲಿನಲ್ಲಿ ಹೋಗುತ್ತಿರುವಾಗ ಫೋನ್ ಎಲ್ಲೋ ಬಿದ್ದರೆ ಅಥವಾ ಕಳೆದುಹೋದರೆ, ಅದು ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು, ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ.

ಬೆಂಗಳೂರು (ಮಾ. 14): ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಯಾವಾಗಲೂ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮ ಫೋನ್ ಬಳಸುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ, ಪ್ರಯಾಣ ಮಾಡುವಾಗ ಮೊಬೈಲ್, ಪರ್ಸ್ ಅಥವಾ ವಾಚ್ನಂತಹ ಬೆಲೆಬಾಳುವ ವಸ್ತುಗಳು ರೈಲಿನಿಂದ ಹೊರಗೆ ಬೀಳುತ್ತವೆ. ಅಂತಹ ಸಂದರ್ಭಗಳಲ್ಲಿ, ಜನರು ತುಂಬಾ ಚಿಂತಿತರಾಗುತ್ತಾರೆ.
ಬ್ಯಾಂಕಿಂಗ್ ವಿವರಗಳಿಂದ ಹಿಡಿದು ಪ್ರಮುಖ ಐಡಿಗಳವರೆಗೆ ಎಲ್ಲಾ ಮಾಹಿತಿಯನ್ನು ನಾವು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಟ್ಟುಕೊಡಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಎಲ್ಲೋ ಬಿದ್ದರೆ ಅಥವಾ ಕಳೆದುಹೋದರೆ, ಅದು ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು, ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ಅದರ ಸಹಾಯದಿಂದ ನೀವು ಕಳೆದುಹೋದ ವಸ್ತುವನ್ನು ಮರಳಿ ಪಡೆಯಬಹುದು. ನಿಮ್ಮ ವಸ್ತುಗಳನ್ನು ಮರಳಿ ಪಡೆಯಲು ಇಲ್ಲಿದೆ ನೋಡಿ ಮಾಹಿತಿ.
ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ:
ಚಲಿಸುವ ರೈಲಿನಿಂದ ಫೋನ್ ಅಥವಾ ಪರ್ಸ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್‌ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.
ಹೀಗೆ ಮಾಡಿದರೆ ರೈಲ್ವೆ ಪೊಲೀಸರಿಗೆ ನಿಮ್ಮ ಫೋನ್ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆಯ ನಂತರ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು.
Holi Gift: ಹೋಳಿ ಹಬ್ಬದಂದು ಗಿಫ್ಟ್ ಮಾಡಿ 6000mAh ಬ್ಯಾಟರಿಯ ಶಕ್ತಿಶಾಲಿ ಸ್ಮಾರ್ಟ್ಫೋನ್: ಬೆಲೆ ಕೂಡ ಕಡಿಮೆ
ಈ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಂಪರ್ಕಿಸಬಹುದು:
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದೆ. ನೀವು ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಸಬಹುದು. ಅದೇ ರೀತಿ, GRP ಯ ಸಹಾಯವಾಣಿ ಸಂಖ್ಯೆ 1512 ಆಗಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು. ರೈಲ್ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.
ರೈಲಿನ ಚೈನ್ ಎಳೆಯುವುದು ಒಳ್ಳೆಯದೇ?:
ರೈಲಿನ ಸರಪಳಿ ಎಳೆಯುವುದು ಅಪರಾಧವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ನೀವು ಚೈನ್ ಎಳೆಯುವುದನ್ನು ಮಾಡಬಹುದು. ನಿಮ್ಮೊಂದಿಗೆ ಪ್ರಯಾಣಿಸುತ್ತಿರುವ ಮಗು ಅಥವಾ ವೃದ್ಧ ವ್ಯಕ್ತಿ ರೈಲ್ವೆ ನಿಲ್ದಾಣದಲ್ಲೇ ಬಾಕಿಯಾದರೆ, ನೀವು ಸರಪಳಿಯನ್ನು ಎಳೆಯಬಹುದು. ಅದೇ ಸಮಯದಲ್ಲಿ, ಅಂಗವಿಕಲ ವ್ಯಕ್ತಿಯನ್ನು ನಿಲ್ದಾಣದಲ್ಲಿ ಬಿಟ್ಟು ರೈಲು ಚಲಿಸಲು ಪ್ರಾರಂಭಿಸಿದರೆ, ಅಂತಹ ಪರಿಸ್ಥಿತಿಯಲ್ಲಿಯೂ ಸಹ ಚೈನ್ ಎಳೆಯಬಹುದು. ಇದೆಲ್ಲದರ ಹೊರತಾಗಿ, ರೈಲಿನಲ್ಲಿ ಬೆಂಕಿ ಅವಘಡ, ದರೋಡೆ ಅಥವಾ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನೀವು ಚೈನ್ ಅನ್ನು ಎಳೆಯಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ