ಟಿಕ್​ಟಾಕ್ ಸಹಿತ 59 ಚೀನಾ ಅಪ್ಲಿಕೇಷನ್​ಗಳಿಗೆ ಶಾಶ್ವತ ನಿರ್ಬಂಧ ಹೇರಲು ಭಾರತ ನಿರ್ಧಾರ

ಅಪ್ಲಿಕೇಷನ್​ಗಳನ್ನು ನಿರ್ಬಂಧಿಸುವ ಬಗ್ಗೆ ಚೀನಾ ಆಪ್​ಗಳು ನೀಡಿದ ಉತ್ತರ ಮತ್ತು ಸ್ಪಷ್ಟೀಕರಣಗಳು ಅಸಮರ್ಪಕ ಹಾಗೂ ಅಪೂರ್ಣವಾಗಿವೆ. ಹಾಗಾಗಿ, 59 ಚೀನಾ ಅಪ್ಲಿಕೇಷನ್​ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ನೋಟೀಸ್ ನೀಡಲಾಗಿದೆ.

  • TV9 Web Team
  • Published On - 14:25 PM, 26 Jan 2021
ಟಿಕ್​ಟಾಕ್ ಸಹಿತ 59 ಚೀನಾ ಅಪ್ಲಿಕೇಷನ್​ಗಳಿಗೆ ಶಾಶ್ವತ ನಿರ್ಬಂಧ ಹೇರಲು ಭಾರತ ನಿರ್ಧಾರ
ಟಿಕ್​ಟಾಕ್

ದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬಳಿಕ, ಸುಮಾರು 59 ಚೀನಾ ಅಪ್ಲಿಕೇಷನ್​ಗಳಿಗೆ ಭಾರತ ಶೋ ಕಾಸ್ ನೋಟೀಸ್ ನೀಡಿತ್ತು. ಅದಾದ ಏಳು ತಿಂಗಳ ನಂತರ, ಈಗ ಭಾರತ ಸರ್ಕಾರ ಚೀನಾದ ಅಪ್ಲಿಕೇಷನ್​ಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಬಗ್ಗೆ ಹೊಸ ನೋಟೀಸು ಜಾರಿಗೊಳಿಸಿದೆ. ಈ ಮೂಲಕ ಟಿಕ್​ಟಾಕ್ ಸಹಿತ 59 ಚೀನಾ ಆಪ್​ಗಳು ಶಾಶ್ವತವಾಗಿ ಬ್ಯಾನ್ ಆಗಲಿವೆ.

ಅಪ್ಲಿಕೇಷನ್​ಗಳನ್ನು ನಿರ್ಬಂಧಿಸುವ ಬಗ್ಗೆ ಚೀನಾ ಆಪ್​ಗಳು ನೀಡಿದ ಉತ್ತರ ಮತ್ತು ಸ್ಪಷ್ಟೀಕರಣಗಳು ಅಸಮರ್ಪಕ,  ಅಪೂರ್ಣವಾಗಿವೆ. ಹಾಗಾಗಿ, 59 ಚೀನಾ ಅಪ್ಲಿಕೇಷನ್​ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ನೋಟೀಸ್ ನೀಡಲಾಗಿದೆ ಎಂದು ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ 59 ಚೀನಾ ಅಪ್ಲಿಕೇಷನ್​ಗಳ ಮೇಲೆ ಭಾರತ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಅವುಗಳು ಭಾರತದ ಸಾರ್ವಭೌಮತ್ವ, ಏಕತೆ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಪೂರ್ವಾಗ್ರಹ ಹೊಂದಿವೆ ಎಂದು ಆರೋಪಿಸಲಾಗಿತ್ತು. ಟಿಕ್​ಟಾಕ್, ಹೆಲೋ, ವಿ ಚಾಟ್, ಅಲಿಬಾಬಾ ಕಂಪೆನಿಯ ಯುಸಿ ಬ್ರೌಸರ್, ಯುಸಿ ನ್ಯೂಸ್, ಶೈನ್, ಕಲ್ಬ್ ಫ್ಯಾಕ್ಟರಿ, ಲೈಕೀ, ಬಿಗೊ ಲೈವ್, ಕ್ವಾಯ್, ಕ್ಲಾಷ್ ಆಫ್ ಕಿಂಗ್ಸ್ ಹಾಗೂ ಕ್ಯಾಮ್ ಸ್ಕಾನರ್ ಸಹಿತ 59 ಆಪ್​ಗಳ ಮೇಲೆ ಭಾರತ ನಿರ್ಬಂಧ ಹೇರಿತ್ತು.

ತೀವ್ರ ಸ್ವರೂಪ ಪಡೆದ ಪ್ರತಿಭಟನೆ.. ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್‌, ಜಲಫಿರಂಗಿ ಪ್ರಯೋಗ

ಕೇಂದ್ರ ಬಜೆಟ್ 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?