Tecno Pova Neo 5G: ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಯಾವುದು?, ಬೆಲೆ ಎಷ್ಟು?

ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

Tecno Pova Neo 5G: ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಯಾವುದು?, ಬೆಲೆ ಎಷ್ಟು?
Tecno Pova Neo 5G
TV9kannada Web Team

| Edited By: Vinay Bhat

Sep 26, 2022 | 6:32 AM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್‌ ಜೊತೆಗೆ ಭಾರತದಲ್ಲಿ ತನ್ನ ಮೊಟ್ಟಮೊದಲ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಕಂಪನಿ ಕಳೆದ ವಾರ ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಫೋನ್‌ ಅನಾವರಣ ಮಾಡಿತ್ತು. ಇದೊಂದು ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ.

ಇದನ್ನೂ ಓದಿ

  • ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ ಕೇವಲ 15,499ರೂ. ನಿಗದಿ ಮಾಡಲಾಗಿದೆ.
  • ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಕೂಡ ಸೇರ್ಪಡೆಯಾಗಿದೆ. ಇಂದು ಸೆಪ್ಟೆಂಬರ್ 26 ರಿಂದ ಮಾರಾಟವಾಗಲಿದೆ.
  • ಈ ಸ್ಮಾರ್ಟ್‌ಫೋನ್‌ 1,080×2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPS ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ.
  • ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ Hi OS 8.6 ನಲ್ಲಿ ರನ್‌ ಆಗಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 GPU ಸಪೋರ್ಟ್‌ ಕೂಡ ಪಡೆದಿದೆ.
  • ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಕ್ವಾಡ್ ಫ್ಲ್ಯಾಷ್‌ ಬೆಂಬಲಿಸುವ AI ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  • ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಬಲಿಷ್ಠವಾದ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
  • ಜೊತೆಗೆ 2.4GHz ಮತ್ತು 5GHz ಡ್ಯುಯಲ್ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ v5.0 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತಿರುವುದು ವಿಶೇಷ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada