ಅಣು ಸಮ್ಮಿಲನ ಕ್ರಿಯೆ ಪ್ರಯೋಗ ದಶಕಗಳ ನಂತರ ಯಶ ಕಂಡರೂ ಅದರಿಂದ ವಿದ್ಯುಚ್ಛಕ್ತಿ ಉತ್ಪಾದನೆ ಗುರಿ ಈಡೇರದು ಅನ್ನುತ್ತಾರೆ ವಿಜ್ಞಾನಿಗಳು!
ಅಣು ಸಮ್ಮಿಲನದಿಂದ ನಿವ್ವಳ ಶಕ್ತಿಯನ್ನು ಪಡೆಯುವುದು ಸುಲಭಸಾಧ್ಯ ಅಲ್ಲವಾದರೂ ವಿದ್ಯುಚ್ಛಕ್ತಿ ಗ್ರಿಡ್ ಮತ್ತು ಕಟ್ಟಡಗಳಿಗೆ ಶಾಖ ಒದಗಿಸಲು ಅವಶ್ಯವಿರುವ ಇಂಧನ ಮೂಲವಾಗಿ ಬಹಳ ಚಿಕ್ಕ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ.
ಇದೇ ಮೊಟ್ಟಮೊದಲ ಬಾರಿಗೆ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಲಾರೆನ್ಸ್ ಲಿವರ್ಮೋರ್ ನ್ಯಾಷನಲ್ ಲ್ಯಾಬೊರೇಟರಿಯಲ್ಲಿನ ನ್ಯಾಷನಲ್ ಇಗ್ನಿಷನ್ ಫೆಸಿಲಿಟಿಯ (National Ignition Facility) ವಿಜ್ಞಾನಿಗಳು ನಿವ್ವಳ ಶಕ್ತಿಯಲ್ಲಿ (net energy) ಪರಿವರ್ತನೆಗೊಂಡ ನ್ಯೂಕ್ಲಿಯರ್ ಸಮ್ಮಿಳನ (nuclear fusion) ಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎನ್ನುವುದನ್ನು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಮೂಲವೊಂದು ಸಿಎನ್‌ಎನ್ ಸುದ್ದಿಸಂಸ್ಥೆಗೆ ದೃಢೀಕರಿಸಿದೆ. ಅಮೆರಿಕದ ಇಂಧನ ಇಲಾಖೆಯು ಈ ಸಾಧನೆ ಬಗ್ಗೆ ಇಂದು (ಮಂಗಳವಾರ) ಅಧಿಕೃತವಾಗಿ ಹೇಳಿಕೆ ನೀಡುವ ನಿರೀಕ್ಷೆಯಿದೆ.
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಇಲ್ಲವಾಗಿಸಿ ಶುದ್ಧ ಶಕ್ತಿಯ ಮೂಲವನ್ನು ಸಡಲಿಸುವ ದಿಶೆಯಲ್ಲಿ ದಶಕಗಳಿಂದ ನಡೆಯುತ್ತಿದ್ದ ಪ್ರಯೋಗಳಿಗೆ ಇತಿಶ್ರೀ ಹೇಳಲು ಪರಮಾಣು ಸಮ್ಮಿಲನ ಕ್ರಿಯೆಯ ಫಲಿತಾಂಶ ಒಂದು ಮಹತ್ತರ ಬೆಳವಣಿಗೆಯಾಗಿ ಕಾಣುತ್ತಿದೆ. ಸೂರ್ಯನಿಗೆ ಶಕ್ತಿ ನೀಡುವ ಸಮ್ಮಿಳನವನ್ನು ಕ್ರಿಯೆಯನ್ನು ಅನುಕರಿಸಲು ಸಂಶೋಧಕರು ದಶಕಗಳಿಂದ ಪರಮಾಣು ಸಮ್ಮಿಳನವನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದರು.
ಇಂದು ಘೋಷಣೆ
ಅತ್ಯಂತ ಪ್ರಮುಖ ವೈಜ್ಞಾನಿಕ ಸಾಧನೆ ಎಂದು ಬಣ್ಣಿಸಲಾಗುತ್ತಿರುವ ಈ ಯೋಜನೆಯ ಯಶಸ್ಸಿನ ಬಗ್ಗೆ ಅಮೆರಿಕ ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರ್ಯಾನ್ಹೋಮ್ ಮಂಗಳವಾರ ಘೋಷಣೆ ಮಾಡಲಿದ್ದಾರೆಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚು ಪರಮಾಣುಗಳನ್ನು ಒಂದೇ ದೊಡ್ಡ ಪರಮಾಣುವಾಗಿ ಕೂಡಿಸಿದಾಗ ಅಣು ಸಮ್ಮಿಲನ ಸಂಭವಿಸುತ್ತದೆ. ಈ ಪ್ರಕ್ರಿಯೆ ಶಾಖದ ರೂಪದಲ್ಲಿ ಭಾರಿ ಪ್ರಮಾಣದ ಶಕ್ತಿ ಉತ್ಪಾದನೆಗೆ ಕಾರಣವಾಗುತ್ತದೆ. ಅಣುಗಳ ವಿಭಜನೆಯಿಂದ ವಿದ್ಯುಚ್ಛಕ್ತಿ ಉತ್ಪತ್ತಿಯಾಗುವ ಪ್ರಕ್ತಿಯೆಗೆ ವಿರುದ್ಧವಾಗಿ ಅಣು ಸಮ್ಮಿಲನ ಪ್ರಕ್ರಿಯೆಯಲ್ಲಿ ದೀರ್ಘ ಕಾಲ ಉಳಿದುಬಿಡುವ ವಿಕರಣಶೀಲ ತ್ಯಾಜ್ಯ ಜನರೇಟ್ ಆಗುವುದಿಲ್ಲ. ಅಣು ಸಮ್ಮಿಲನ ಪ್ರಕ್ರಿಯೆಯನ್ನು ಸಾಫಲ್ಯಗೊಳಿಸಲು ವಿಶ್ವದಾದ್ಯಂತ ವಿಜ್ಞಾನಿಗಳು ಬೇರೆ ಬೇರೆ ವಿಧಾನ ಅಳವಡಿಸಿ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.
ಶಾಖದ ಮೂಲಕ ಶಕ್ತಿ
ದಿ ನ್ಯಾಶನಲ್ ಇಗ್ನಿಷನ್ ಫೆಸಿಲಿಟಿಯು ಥರ್ಮೊನ್ಯೂಕ್ಲಿಯರ್ ಇನರ್ಟಿಯಲ್ ಫ್ಯೂಷನ್ ಎಂದು ಕರೆಯಲಾಗುವ ಇಂಧನವನ್ನು ಅಣು ಸಮ್ಮಿಲನದ ಮೂಲಕ ಸೃಷ್ಟಿಸುತ್ತದೆ. ವಾಸ್ತವದಲ್ಲಿ ಅಮೆರಿಕದ ವಿಜ್ಞಾನಿಗಳು ಹೈಡ್ರೋಜನ್ ಅನಿಲ ಹೊಂದಿರುವ ಗುಂಡುಗಳನ್ನು 200 ಲೇಸರ್ ಕಿರಣಗಳನ್ನಾಗಿ ಫೈರ್ ಮಾಡುತ್ತಾರೆ. ಇದರಿಂದ ಪ್ರತಿ ಸೆಕೆಂಡಿಗೆ 50 ಸಲದಷ್ಟು ಸರಣಿ ಸ್ಪೋಟಗಳು ಮೇಲಿಂದ ಮೇಲೆ ನಡೆಯುತ್ತವೆ. ನ್ಯೂಟ್ರಾನ್ ಮತ್ತು ಅಲ್ಫಾ ಕಣಗಳಿಂದ ಸಂಗ್ರಹಿಸಲಾಗುವ ಶಕ್ತಿಯನ್ನು ಶಾಖದ ಮೂಲಕ ಹೊರತೆಗೆಯಲಾಗುತ್ತದೆ, ಇದೇ ಶಾಖವು ಶಕ್ತಿ ಉತ್ಪಾದನೆಗೆ ಕಾರಣವಾಗುತ್ತದೆ.
ಅಣು ಸಮ್ಮಿಲನದಿಂದ ನಿವ್ವಳ ಶಕ್ತಿಯನ್ನು ಪಡೆಯುವುದು ಸುಲಭಸಾಧ್ಯ ಅಲ್ಲವಾದರೂ ವಿದ್ಯುಚ್ಛಕ್ತಿ ಗ್ರಿಡ್ ಮತ್ತು ಕಟ್ಟಡಗಳಿಗೆ ಶಾಖ ಒದಗಿಸಲು ಅವಶ್ಯವಿರುವ ಇಂಧನ ಮೂಲವಾಗಿ ಬಹಳ ಚಿಕ್ಕ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ.
ಟೋಕಾಮ್ಯಾಕ್ ತಂತ್ರಜ್ಞಾನ
ಯುಕೆಯಲ್ಲಿನ ವಿಜ್ಞಾನಿಗಳು ಅಣು ಸಮ್ಮಿಲನದಿಂದ ಶಕ್ತಿಯನ್ನು ಜನರೇಟ್ ಮಾಡಲು ಟೋಕಾಮ್ಯಾಕ್ ಎಂದು ಕರೆಯಾಲಾಗುವ ಬೃಹತ್ ಗಾತ್ರದ ಆಯಸ್ಕಾಂತಗಳನ್ನು ಅಳವಡಿಸಿಕೊಂಡಿರುವ ಡುನಟ್-ಆಕಾರದ ಮಶೀನ್ ಗಳನ್ನು ಬಳಸಿ ಪ್ರಯತ್ನಶೀಲರಾಗಿದ್ದಾರೆ.
ಚಿಕ್ಕ ಪ್ರಮಾಣದಷ್ಟು ಅನಿಲವನನ್ನು ಟೋಕಾಮ್ಯಾಕ್ ನಲ್ಲಿ ಇಂಜೆಕ್ಟ್ ಮಾಡಿದ ಬಳಿಕ ಬೃಹತ್ ಗಾತ್ರದ ಆಯಸ್ಕಾಂತಗಳು ಸಕ್ರಿಯಗೊಂಡು ಪ್ಲಾಸ್ಮಾವನ್ನು ಸೃಷ್ಟಿಸುತ್ತವೆ. ಸೂರ್ಯನ ಕೇಂದ್ರಭಾಗದಲ್ಲಿರುವ ಶಾಖದ ಹತ್ತು ಪಟ್ಟುಗಳಷ್ಟು ಶಾಖಕ್ಕೆ ಸಮನಾದ 150 ಮಿಲಿಯನ್ ಡಿಗ್ರಿ ಸೆಲ್ಲಿಯಸ್ ನಷ್ಟು ಶಾಖದ ಪ್ರಮಾಣವನ್ನು ಪ್ಲಾಸ್ಮಾ ತಲುಪಬೇಕಾಗುತ್ತದೆ. ಇದು ಅನಿಲದಲ್ಲಿರುವ ಕಣಗಳನ್ನು ಒಂದುಗೂಡಲು ನೇರವಾಗುತ್ತದೆ. ಅಣು ಸಮ್ಮಿಳನದಲ್ಲಿ ಏಕೀಕೃತಗೊಂಡ ಉತ್ಪಾದನೆಯು ಮೂಲ ಪರಮಾಣುಗಳಿಗಿಂತ ಕಡಿಮೆ ದ್ರವ್ಯರಾಶಿ ಹೊಂದಿರುತ್ತದೆ. ಇಲ್ಲಿ ಕಣ್ಮರೆಯಾಗಿರುವ ದ್ರವ್ಯರಾಶಿಯೇ ಭಾರಿಪ್ರಮಾಣದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಉತ್ಪತ್ತಿಯಾಗುವ ಶಾಖದ ಬಳಕೆ
ಪ್ಲಾಸ್ಮಾದಿಂದ ತಪ್ಪಿಸಿಕೊಳ್ಳುವ ನ್ಯೂಟ್ರಾನ್ ಗಳು ಟೋಕಾಮ್ಯಾಕ್ ಗೋಡೆಗಳ ಮೇಲಿನ ಬ್ಲ್ಯಾಂಕೆಟ್ ಗೆ ಅಪ್ಪಳಿಸುತ್ತವೆ ಮತ್ತು ಅವುಗಳ ಚಲನಶಕ್ತಿ ಶಾಖವಾಗಿ ಪರಿವರ್ತನೆಯಾಗುತ್ತದೆ. ಈ ಶಾಖವನ್ನು ನೀರು ಬಿಸಿಮಾಡಲು, ಆವಿಯನ್ನು ಸೃಷ್ಟಿಸಲು ಹಾಗೂ ವಿದ್ಯುಚ್ಛಕ್ತಿ ಉತ್ಪಾದಿಸಲು ಟರ್ಬೈನ್ ಗಳಲ್ಲಿ ಬಳಸಬಹುದು.
ಕಳೆದ ವರ್ಷ ಅಕ್ಸ್ಫರ್ಡ್ ಬಳಿ ಕಾರ್ಯನಿರತರಾಗಿದ್ದ ವಿಜ್ಞಾನಿಗಳು ದಾಖಲೆ ಪ್ರಮಾಣದ ನಿರಂತರ ಶಕ್ತಿ ಉತ್ಪಾದಿಸುವಲ್ಲಿ ಯಶಕಂಡಿದ್ದರು. ಆದರೆ ಅದು 5-ಸೆಕೆಂಡ್ ಅವಧಿಗೆ ಮಾತ್ರ ಸೀಮಿತವಾಗಿತ್ತು. ಆಯಸ್ಕಾಂತಗಳನ್ನು ಬಳಸುವುದಾಗಲೀ ಅಥವಾ ಗುಂಡುಗಳನ್ನು ಲೇಸರ್ ಗಳಿಂದ ಶೂಟ್ ಮಾಡುವುದಾಗಿರಲಿ, ಅಂತಿಮ ರಿಸಲ್ಟ್ ಮಾತ್ರ ಒಂದೇ ಆಗಿರುತ್ತದೆ: ಶಕ್ತಿಯನ್ನು ಉತ್ಪಾದಿಸಲು ಪರಮಾಣುಗಳ ಸಮ್ಮಿಲನದಿಂದ ಉತ್ಪತ್ತಿಯಾಗುವ ಶಾಖವು ಶಕ್ತಿಯನ್ನು ಉತ್ಪಾದಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.
ವೆಚ್ಚ ಕಡಿಮೆ ಮಾಡಬೇಕು!
ಸಿಎನ್ಎನ್ ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಲಂಡನ್ ಇಂಪೀರಿಯಲ್ ಕಾಲೇಜಿನ ಸೆಂಟರ್ ಫಾರ್ ಇನರ್ಷಿಯಲ್ ಫ್ಯೂಷನ್ ಸ್ಟಡೀಸ್ ಸಹ-ನಿರ್ದೇಶಕರಾಗಿರುವ ಜೆರೆಮಿ ಚಿಟ್ಟೆನ್ ಡೆನ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ಇಂಜಿನೀಯರಿಂಗ್ ಡಿಪಾರ್ಟ್ ಮೆಂಟ್ ನ ಫ್ಯೂಷನ್ ಪರಿಣಿತ ಟೋನಿ ರೌಲ್ ಸ್ಟೋನ್, ಜಾಗತಿಕವಾಗಿ ವಿಜ್ಞಾನಿಗಳು ತಮ್ಮ ಅಣು ಸಮ್ಮಿಲನದ ಯೋಜನೆಗಳನ್ನು ಹೆಚ್ಚಿಸುವುದು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಹೇಳಿದ್ದಾರೆ. ವೆಚ್ಚದ ಪ್ರಮಾಣವನ್ನು ಕಡಿತಗೊಳಿಸಿದರೆ ಸಂಶೋಧನೆಗಳನ್ನು ಬಹಳ ಸಮಯದವರೆಗೆ ಜಾರಿಯಲ್ಲಿಡಬಹುದು.
‘ಪ್ರಸ್ತುತವಾಗಿ ನಾವು ನಡೆಸುತ್ತಿರುವ ಪ್ರತಿ ಪ್ರಯೋಗದ ಮೇಲೆ ಅಪಾರವಾದ ಹಣ ಮತ್ತು ಸಮಯವನ್ನು ವ್ಯಯಿಸುತ್ತಿದ್ದೇವೆ, ವೆಚ್ಚದ ಪ್ರಮಾಣವನ್ನು ಬಹು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುವುದು ಅತ್ಯಂತ ಜರೂರಿನ ವಿಷಯವಾಗಿದೆ,’ ಎಂದ ಚಿಟ್ಟೆನ್ ಡನ್ ಹೇಳಿದ್ದಾರೆ.
‘ಅವಿಷ್ಕಾರ ಅತ್ಯಂತ ರೋಚಕವಾಗಿದೆ’
ಆದರೆ, ಅಣು ಸಮ್ಮಿಲನ ಸಾಧನೆಯನ್ನು ಒಂದು ಹೊಸ ಆಧ್ಯಾಯ ಎಂದು ಬಣ್ಣಿಸಿರುವ ಚಿಟ್ಟೆನ್ ಡನ್, ಅವಿಷ್ಕಾರ ಅತ್ಯಂತ ರೋಚಕವಾಗಿದೆ ಎಂದಿದ್ದಾರೆ.
ವಾಣಿಜ್ಯ ಪ್ರಮಾಣದಲ್ಲಿ ಅಣು ಸಮ್ಮಿಲನ ಮೂಲಕ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬೇಕಾದರೆ ಇನ್ನೂ ಬಹಳಷ್ಟು ಸಂಶೋಧನೆ ನಡೆಯಬೇಕಿದೆ ಎಂದು ರೌಲ್ ಸ್ಟೋನ್ ಹೇಳಿದ್ದಾರೆ.
‘ಪ್ರತಿಕೂಲವಾದ ವಾದವೇನೆಂದರೆ, ವಿದ್ಯುಚ್ಛಕ್ತಿ ಉತ್ಪಾದಿಲು ಅಣು ಸಮ್ಮಿಲನದಿಂದ ಪ್ರಾಪ್ತವಾಗಿರುವ ಫಲಿತಾಂಶ ಯಾತಕ್ಕೂ ಸಾಲದು, ಗುರಿ ಸಾಧನೆಗೆ ನಾವಿನ್ನೂ ಗಾವುದ ದೂರದಲ್ಲಿದ್ದೇವೆ. ಹಾಗಾಗಿ ನಾವಿದನ್ನು ವಿಜ್ಞಾನದ ಯಶಸ್ಸು ಎಂದು ಕರೆಯಬಹುದು, ಅದರೆ, ಅಗತ್ಯವಿರುವ ಶಕ್ತಿ ಉತ್ಪಾದನೆಯ ನಮ್ಮ ಗಮ್ಯ ಬಹಳ ದೂರದಲ್ಲಿದೆ,’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ