Tips and Tricks: ನೀವು EMI ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಟ್ರಿಕ್ ಫಾಲೋ ಮಾಡಿ

TV9 Digital Desk

| Edited By: Vinay Bhat

Updated on: Jul 27, 2021 | 3:24 PM

Smartphone on EMI: ನಮ್ಮ ದೇಶದಲ್ಲಿ ಅನೇಕ ಮಂದಿ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವವರೇ ಹೆಚ್ಚು. ಬೇರೆ ಬೇರೆ ಕಂತಿನ ರೂಪವನ್ನೂ ಇದಕ್ಕೆ ನೀಡಲಾಗುತ್ತದೆ.

Tips and Tricks: ನೀವು EMI ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಟ್ರಿಕ್ ಫಾಲೋ ಮಾಡಿ
Smartphone in EMI
Follow us

ಇಂದಿನ ದಿನಗಳಲ್ಲಿ ವಾರಕ್ಕೆ ಕಮ್ಮಿ ಎಂದರು ಮೂರರಿಂದ ನಾಲ್ಕು ಸ್ಮಾರ್ಟ್​ಫೋನ್​ಗಳು (Smartphone) ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತವೆ. ಅದು ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಫೋನು ಕೂಡ ಭರ್ಜರಿ ಸೇಲ್ ಕಾಣುತ್ತವೆ, ಬೇಗನೆ ಸೋಲ್ಡ್ ಆಗಿ ಬಿಡುತ್ತದೆ. ಇದಕ್ಕೆ ಕಾರಣ ಇಂದು ಒಂದು ಮೊಬೈಲ್​ಗೆ (Mobile) ನಿಗದಿ ಪಡಿಸಿರುವ ಎಲ್ಲಾ ಬೆಲೆಯನ್ನು ಒಮ್ಮೆಯೆ ಕಟ್ಟಬೇಕು ಎಂಬ ನಿಯಮ ಇಲ್ಲದಿರುವುದು. ಈಗ ಏನಿದ್ದರು ಇಎಂಐ (EMI). ಅಂದರೆ ಮೊದಲು ಮೊಬೈಲ್ ಅನ್ನು ಖರೀದಿ ಮಾಡಿ ನಂತರ ಕಂತಿನ ರೂಪದಲ್ಲಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಾವತಿ ಮಾಡುವುದು.

ನಮ್ಮ ದೇಶದಲ್ಲಿ ಅನೇಕ ಮಂದಿ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವವರೇ ಹೆಚ್ಚು. ಬೇರೆ ಬೇರೆ ಕಂತಿನ ರೂಪವನ್ನೂ ಇದಕ್ಕೆ ನೀಡಲಾಗುತ್ತದೆ. ಆಯ್ಕೆ ನಿಮ್ಮದಾಗಿರುತ್ತದೆ. ಒಂದೊಂದರಲ್ಲಿ ಒಂದೊಂದು ರೀತಿಯ, ಒಂದೊಂದು ಫೋನಿಗೆ ಒಂದೊಂದು ಸ್ವರೂಪದ ಇಎಂಐ ಆಯ್ಕೆಗಳಿರುತ್ತದೆ.

ಇಎಂಐ ನಲ್ಲಿ ಮೊಬೈಲ್ ಖರೀದಿಸುವುದು ಬಹಳ ಸುಲಭವಾದ ಮಾರ್ಗವಾಗಿದೆ. ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬೇಕಾಗುತ್ತದೆ ಅಷ್ಟೇ. ಒಂದು ವೇಳೆ ನೀವು ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವ ಬಗ್ಗೆ ತಿಳಿದಿಲ್ಲವಾದರೆ ಕೆಲವೊಂದಿಷ್ಟು ಟಿಪ್ಸ್​ಗಳನ್ನು ನಾವು ನೀಡುತ್ತೇವೆ.

ಮೊದಲಿಗೆ ತಿಳಿದಿರಬೇಕಾಗಿರುವ ಪ್ರಾಥಮಿಕ ಅಂಶಗಳು:

ಇಎಂಐ ಮೂಲಕ ಫೋನ್ ಖರೀದಿಸಬೇಕು ಎಂದರೆ, ನೀವು ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬೇಕು.

ಇಎಂಐ ಆಯ್ಕೆಯು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಲಭ್ಯವಾಗುತ್ತದೆ.

ನಿಮ್ಮ ಕಾರ್ಡಿನ ವಿವರಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ.

ಓಟಿಪಿಗಾಗಿ ನಿಮ್ಮ ಫೋನಿಗೆ ಆಕ್ಸಿಸ್ ಇಟ್ಟುಕೊಂಡಿರಿ.

ಆನ್ ಲೈನ್ ಖರೀದಿಗೆ ಹೇಗೆ ?:

ಆನ್ ಲೈನ್ ವೆಬ್ ಸೈಟ್ ಅಥವಾ ಆ್ಯಪ್ ಅನ್ನು ತೆರೆಯಿರಿ .

ಯಾವ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಚ್ಛಿಸುತ್ತಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ.

‘Buy Now’ ಆಯ್ಕೆಯನ್ನು ಟ್ಯಾಪ್ ಮಾಡಿ.

ನಿಮ್ಮ ವಿಳಾಸವನ್ನು ಆಯ್ಕೆ ಮಾಡಿ ಅಥವಾ ಬರೆಯಿರಿ ಮತ್ತು ಕಂಟಿನ್ಯೂ ಆಯ್ಕೆಯನ್ನು ಒತ್ತಿ. ಇದು ನಿಮ್ಮನ್ನು ಪಾವತಿ ವಿಭಾಗಕ್ಕೆ ಕೊಂಡೊಯ್ಯುತ್ತದೆ.

ಇಲ್ಲಿ ಪಾವತಿ ಮೋಡ್ ಅನ್ನು ಇಎಂಐ ಎಂದು ಆಯ್ಕೆ ಮಾಡಿ ಮತ್ತು ಕಂಟಿನ್ಯೂ ಬಟನ್ ಅನ್ನು ಒತ್ತಿ.

ನಿಮ್ಮ ಕ್ರೆಡಿಟ್ ಕಾರ್ಡ್ ನ ಬ್ಯಾಂಕ್ ಅನ್ನು ಆಯ್ಕೆ ಮಾಡಿ.

ಇಎಂಐ ನ ಟೈಮ್ ಪಿರೇಡ್ ಆಯ್ಕೆ ಮಾಡಿ (ಸಾಮಾನ್ಯವಾಗಿ 3 ತಿಂಗಳಿನಿಂದ 24 ತಿಂಗಳವರೆಗಿನ ಆಯ್ಕೆಗಳಿರುತ್ತದೆ).

ಕಾರ್ಡಿನ ವಿವರಗಳನ್ನು ಬರೆಯಿರಿ ಮತ್ತು ಮುಂದುವರಿಯಲು ಕ್ಲಿಕ್ಕಿಸಿ.

ಈಗ ನಿಮಗೊಂದು ಒಟಿಪಿ ಬರಲಿದೆ ಅದು ನೀವು ಬ್ಯಾಂಕ್ ನಲ್ಲಿ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ.

ಓಟಿಪಿಯನ್ನು ಬರೆದು ಪಾವತಿಯನ್ನು ಪೂರ್ಣಗೊಳಿಸಿ .

ಆಫ್ ಲೈನ್ ಖರೀದಿ ಹೇಗೆ?:

ನಿಮ್ಮ ಇಷ್ಟವಾದ ಆಫ್ ಲೈನ್ ರೀಟೈಲರ್ ಶಾಪ್ ಗೆ ತೆರಳಿ ಮತ್ತು ಯಾವ ಫೋನ್ ಖರೀದಿಸಬೇಕು ಎಂಬುದನ್ನು ಆಯ್ಕೆ ಮಾಡಿ. ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿ ಮತ್ತು ನಂತರ ಅದನ್ನು ಇಎಂಐ ಯಾಗಿ ಕನ್ವರ್ಟ್ ಮಾಡುವ ಅವಕಾಶವಿರುತ್ತದೆ. ಅದನ್ನು ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬಹುದು ಇಲ್ಲವೇ ಬ್ಯಾಂಕಿನ ಮೊಬೈಲ್ ಆಪ್ ಬಳಸಿ ಕೂಡ ಮಾಡಬಹುದು. ಈಗ ಹೆಚ್ಚಿನ ಪ್ರಸಿದ್ಧ ಮೊಬೈಲ್ ಶಾಪ್​ಗಳಲ್ಲಿ ಇಎಂಐಗೆಂದೇ ಓರ್ವ ವ್ಯಕ್ತಿಯನ್ನು ನಿಗದಿ ಮಾಡಿರುತ್ತಾರೆ.

Amazon Prime Day: ಸ್ಯಾಮ್​ಸಂಗ್​ನ ಈ ಅದ್ಭುತ ಸ್ಮಾರ್ಟ್​​ಫೋನ್ ಮೇಲೆ ಬರೋಬ್ಬರಿ 9000 ರೂ. ಡಿಸ್ಕೌಂಟ್: ಇಂದೇ ಕೊನೆ ದಿನ

Amazon Prime Day Sale: ಲ್ಯಾಪ್​ಟಾಪ್ ಖರೀದಿಸಲು ಇದೇ ಸಮಯ: ಪ್ರೈಮ್ ಡೇ ಪ್ರಯುಕ್ತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಲ್ಯಾಪ್​ಟಾಪ್​ಗಳು!

(Tips and Tricks Here is the Tricks to buy a smartphone on EMI)

ತಾಜಾ ಸುದ್ದಿ

Related Stories

Click on your DTH Provider to Add TV9 Kannada