Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

Offline UPI Payments: ನಿಮ್ಮ ಮೊಬೈಲ್​ನಲ್ಲಿ ಡೇಟಾ ಖಾಲಿಯಾಗಿದ್ದು ಅಥವಾ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ.

Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
UPI Payment

ಇಂದಿನ ಕಾಲದಲ್ಲಿ ಯುಪಿಐ (UPI) ಪಾವತಿ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಕೊರೊನಾ ವೈರಸ್ (Corona virus) ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್​ಲೈನ್ (Online) ಮೂಲಕವೇ ನಡೆಯುತ್ತಿದೆ. ಹಣ ಪಾವತಿಗಳಿಗಾಗಿ ಜನರು ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್‌ ವ್ಯಾಲೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಯುಪಿಐ ಪಾವತಿ ವ್ಯವಸ್ಥೆಗೆ ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್‌ (Internet) ಅವಶ್ಯಕತೆ ಬೇಕಾಗುತ್ತದೆ. ಆದರೆ, ಇಂಟರ್‌ನೆಟ್‌ ಇಲ್ಲದ ಸಮಯದಲ್ಲೂ ನೀವು ಯುಪಿಐ ಪಾವತಿ ಮಾಡುವುದಕ್ಕೆ8+ ಅವಕಾಶವಿದೆ. ನೀವು ಮೊಬೈಲ್ ಯುಎಸ್‌ಎಸ್‌ಡಿ ಆಧಾರಿತ ಮೊಬೈಲ್ ಬ್ಯಾಂಕಿಂಗ್‌ ಮೂಲಕ ಯಾವುದೇ ಡೇಟಾ ಕನೆಕ್ಟಿವಿಟಿ ಇಲ್ಲದೆ UPI ಪಾವತಿ ಮೂಲಕ ಹಣವನ್ನು ಕಳುಹಿಸಬಹುದಾಗಿದೆ.

ನಿಮ್ಮ ಮೊಬೈಲ್​ನಲ್ಲಿ ಡೇಟಾ ಖಾಲಿಯಾಗಿದ್ದು ಅಥವಾ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಯುಎಸ್‌ಎಸ್‌ಡಿ ಆಧಾರಿತ *99# ಆಫ್‌ಲೈನ್ ಮೂಲಕ ಪೇಮೆಂಟ್‌ ಅನ್ನು ಮಾಡಬಹುದಾಗಿದೆ.

NPCI ಯುಪಿಐ ಪಾವತಿಗಳನ್ನು ಅಪ್‌ಗ್ರೇಡ್ ಮಾಡಿದ USSD ಸೌಲಭ್ಯವನ್ನು ಪರಿಚಯಿಸಿದ್ದು, ಇದರಿಂದ ಯುಪಿಐ ಪಾವತಿಯನ್ನು ಇಂಟರ್‌ನೆಟ್‌ ಇಲ್ಲದೆ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ವಿಶೇಷ ಎಂದರೆ ಈ ಸೇವೆಯನ್ನು ಬಳಸಿಕೊಂಡು ನೀವು ಬೇಸಿಕ್‌ ಮೊಬೈಲ್‌ಗಳಲ್ಲೂ ಸಹ ಯುಪಿಐ ಪಾವತಿಯನ್ನು ಮಾಡಬಹುದು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ಕೂಡ ಮೊಬೈಲ್‌ ಬ್ಯಾಕಿಂಗ್‌ ಸೇವೆ ಬಳಸುವುದಕ್ಕೆ ಈ ಮೂಲಕ ಅವಕಾಶ ಇದೆ.

ನಿಮ್ಮ ಮೊಬೈಲ್‌ನಲ್ಲಿ ಅಥವಾ ಸ್ಮಾರ್ಟ್‌ಪೋನಿನಲ್ಲಿ *99# ಡಯಲ್ ಮಾಡಿ. ಹೀಗೆ ಮಾಡಿದ ಕೆಲವೇ ಸೆಕೆಂಟ್​ಗಳಲ್ಲಿ ನಿಮಗೆ ಸೆಂಡ್‌ ಮನಿ, ರಿಸಿವ್‌ ಮನಿ, ಬ್ಯಾಲೆನ್ಸ್ ಚೆಕ್‌, ಮೈ ಪ್ರೊಫೈಲ್, ಮತ್ತು ಯುಪಿಐ ಪಿನ್ ಸೇರಿದಂತೆ ಏಳು ವಿಭಿನ್ನ ಆಯ್ಕೆಗಳು ನಿಮಗೆ ಮೆನುವಿನಲ್ಲಿ ಕಾಣಿಸಲಿದೆ.

ಈಗ ಸೆಂಡ್ ಮನಿ ಆಯ್ಕೆಮಾಡಿ. ಇದಕ್ಕಾಗಿ ನೀವು ಒಂದನ್ನು ಒತ್ತಿರಿ. ನಂತರ ನಿಮಗೆ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್ ಬಳಸಿ ಹಣವನ್ನು ಕಳುಹಿಸುವ ಆಯ್ಕೆ ಕಾಣಲಿದೆ. ಇದರಲ್ಲಿ ನೀವು ಯಾವ ಆಯ್ಕೆಯನ್ನು ಮಾಡುತ್ತಿರಿ ಅದನ್ನು ಆಯ್ಕೆ ಮಾಡಿರಿ.

ಬಳಿಕ ಯಾರಿಗೆ ಕಳುಹಿಸಬೇಕು ಅವರನ್ನು ಆಯ್ಕೆ ಮಾಡಿ. ನೀವು ಮೊಬೈಲ್ ಸಂಖ್ಯೆ ಮೂಲಕ ಹಣ ಕಳುಹಿಸುವುದಾದರೆ ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಈ ಸಂದರ್ಭ ನೀವು UPI ID ಯನ್ನು ಆಯ್ಕೆ ಮಾಡಿದರೆ ಆ ವ್ಯಕ್ತಿಯ UPI ID ಯನ್ನು ನಮೂದಿಸಿ. ನಂತರ  ಅಮೌಂಟ್ ಎಂಟ್ರಿ ಮಾಡಿ. ನೀವು ಫಲಾನುಭವಿಯ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿದ ನಂತರ, ಅಮೌಂಟ್ ಎಂಟ್ರಿ ಮಾಡಿ.

ಮೇಲಿನ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಆರು ಅಥವಾ ನಾಲ್ಕು-ಅಂಕಿಯ UPI ಪಿನ್ ಅನ್ನು ಒತ್ತಿರಿ. ನಂತರ, ಸೆಂಡ್ ಅನ್ನು ಕ್ಲಿಕ್ ಮಾಡಿ. ಇಷ್ಟು ಮಾಡಿದರೆ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಇತರರಿಗೆ ಹಣ ವರ್ಗಾವಣೆ ಮಾಡಬಹುದು.

Nokia G50: ಬಿಡುಗಡೆಗೆ ಸಜ್ಜಾದ ನೋಕಿಯಾದ ಹೊಸ 5G ಸ್ಮಾರ್ಟ್​ಫೋನ್​: ಆನ್​ಲೈನ್​ನಲ್ಲಿ ಫೀಚರ್ಸ್ ಸೋರಿಕೆ

WhatsApp: ವಾವ್… ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಬರಲಿದೆ ಊಹಿಸಲಾಗದ ವಿಶೇಷ ಫೀಚರ್

(Here is the tricks To Make Offline UPI Payments Without Internet Connection)

Click on your DTH Provider to Add TV9 Kannada