ಈ 5 ತಪ್ಪುಗಳಿಂದ ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗಬಹುದು: ತಪ್ಪಿಯೂ ಹೀಗೆ ಮಾಡಬೇಡಿ

Smartphone Tips: ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗಿದ್ದರೆ ನೀವು ಆ್ಯಂಟಿ ವೈರಸ್ ಸಹಾಯದಿಂದ ತೆಗೆದುಹಾಕಬಹುದು. ಈ ಕೆಳಗೆ ತಿಳಿಸಲಾದ ಈ ಐದು ತಪ್ಪುಗಳಿಂದ ದೂರವಿದ್ದರೆ ನಿಮ್ಮ ಫೋನ್ ಅನ್ನು ವೈರಸ್‌ಗಳಿಂದ ಕಾಪಾಡಿಕೊಳ್ಳಬಹುದು.

ಈ 5 ತಪ್ಪುಗಳಿಂದ ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗಬಹುದು: ತಪ್ಪಿಯೂ ಹೀಗೆ ಮಾಡಬೇಡಿ
Smartphone Virus
Follow us
Vinay Bhat
|

Updated on:Dec 14, 2023 | 2:56 PM

ಇಂದು ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಳಸದೆ ಇರುವವರು ಕೆಲವೇ ಮಂದಿ ಮಾತ್ರ. ಇದರಿಂದ ಎಷ್ಟು ಉಪಯೋಗ ಇದೆಯೊ ಅಷ್ಟೇ ಅಪಾಯ ಕೂಡ ಇದೆ. ಕೆಲವು ಬಾರಿ ನಮ್ಮದೇ ಆದ ಕೆಲವು ತಪ್ಪುಗಳಿಂದಾಗಿ ತೊಂದರೆ ಉಂಟಾಗುತ್ತದೆ. ಇದರಲ್ಲಿ ವೈರಸ್‌ ಅಟ್ಯಾಕ್ ಕೂಡ ಒಂದು. ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್​ಫೋನ್​ಗಳಿಗೆ ವೈರಸ್ ಪ್ರವೇಶಿಸುತ್ತವೆ. ಇದು ಯಾವಯಾವ ರೀತಿಯಲ್ಲಿ ಮೊಬೈಲ್ ಅನ್ನು ಪ್ರವೇಶಿಸಬಹುದು ಎಂದು ನೀವು ಯೋಚಿಸಿದ್ದೀರಾ?. ಸ್ಮಾರ್ಟ್‌ಫೋನ್‌ಗೆ ವೈರಸ್‌ಗಳು ಪ್ರವೇಶಿಸುವ ಐದು ವಿಧಾನಗಳ ಕುರಿತು ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ನಿಮ್ಮ ಮೊಬೈಲ್‌ನಲ್ಲಿ ವೈರಸ್ ಇದ್ದರೆ, ನೀವು ಆ್ಯಂಟಿ ವೈರಸ್ ಸಹಾಯದಿಂದ ಆ ವೈರಸ್ ಅನ್ನು ತೆಗೆದುಹಾಕಬಹುದು. ಕೆಳಗೆ ತಿಳಿಸಲಾದ ಈ ಐದು ತಪ್ಪುಗಳಿಂದ ದೂರವಿದ್ದರೆ ನಿಮ್ಮ ಫೋನ್ ಅನ್ನು ವೈರಸ್‌ಗಳಿಂದ ಕಾಪಾಡಿಕೊಳ್ಳಬಹುದು.

ಸ್ನಾಪ್‌ಡ್ರಾಗನ್ 8 Gen 3, 50MP: ಭಾರತಕ್ಕೆ ಬಂತು ಅತ್ಯಂತ ಬಲಿಷ್ಠ ಸ್ಮಾರ್ಟ್​ಫೋನ್ ಐಕ್ಯೂ 12

ಇದನ್ನೂ ಓದಿ
Image
ಭಾರತಕ್ಕೆ ಬರುತ್ತಿದೆ ಪೋಕೋದ ಹೊಸ ​ಫೋನ್: ಟೆಕ್ ಪ್ರಿಯರಲ್ಲಿ ಭಾರೀ ನಿರೀಕ್ಷೆ
Image
20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
ಮೊದಲ ದಿನವೇ ಎರಡೂವರೆ ಲಕ್ಷ ಗಳಿಸಿ: ನಾರಾಯಣಮೂರ್ತಿ ಡೀಪ್​ಫೇಕ್ ವಿಡಿಯೋ
Image
ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನಿರ್ಧಾರ: ಇನ್ನುಂದೆ ಹಣ ಪಾವತಿಸಬೇಕು
  • ಹೆಚ್ಚಿನವರು ಕೆಲವೊಮ್ಮೆ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಈ ತಪ್ಪು ದೊಡ್ಡ ತೊಂದರೆಗೆ ಕಾರಣವಾಗಬಹುದು. ಇಂತಹ ಕೆಲವು ಲಿಂಕ್ ಅಪಾಯಕಾರಿಯಾಗಿರುತ್ತದೆ. ಈ ಲಿಂಕ್‌ಗಳು ನಿಮ್ಮ ಸ್ಮಾರ್ಟ್​ಫೋನ್​ಗಳ ಒಳಗೆ ವೈರಸ್‌ಗಳನ್ನು ಸ್ಥಾಪಿಸಬಹುದು. ಆದ್ದರಿಂದ ಮುಂದಿನ ಬಾರಿ ತಪ್ಪಿಯೂ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
  • ಅಂತೆಯೆ ನೀವು ಯಾವುದೇ ಅಪರಿಚಿತ ಇಮೇಲ್, ಮೆಸೇಜ್ ಸ್ವೀಕರಿಸಿದರೆ ಅಥವಾ ಯಾವುದೇ ವ್ಯಕ್ತಿಯು ವಾಟ್ಸ್​ಆ್ಯಪ್​ನಲ್ಲಿ ಲಿಂಕ್ ಅನ್ನು ಹಂಚಿಕೊಂಡರೆ, ಇದೇನು ಎಂದು ನೋಡುವ ಕುತೂಹಲದಲ್ಲಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರೆಯದಿರಿ. ಈಗೀಗ ಈರೀತಿಯ ಫೇಕ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ.
  • ಯಾವುದೇ ಅನುಮಾನಾಸ್ಪದ ವೆಬ್​ಸೈಟ್‌ಗೆ ಭೇಟಿ ನೀಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಫೋನಿಗೆ ವೈರಸ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸೈಟ್‌ಗೆ ಭೇಟಿ ನೀಡಿದ ನಂತರ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್​ಗೆ ವೈರಸ್ ಬರಬಹುದು.
  • ಆಂಡ್ರಾಯ್ಡ್ ಸ್ಮಾರ್ಟ್​ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಐಫೋನ್​ನಲ್ಲಿ ಆ್ಯಪ್ ಸ್ಟೋರ್ ಇದೆ. ಇವುಗಳಲ್ಲಿ ಕೆಲವು ಫೇಕ್ ಆ್ಯಪ್​ಗಳು ಇರುತ್ತವೆ. ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಅನ್ನು ಇನ್​ಸ್ಟಾಲ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ. ಆ ಆ್ಯಪ್​ನ ಹಿನ್ನಲೆ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ.
  • ಇಂದು ಹೋಟೆಲ್ ಅಥವಾ ರೆಸ್ಟೋರೆಂಟ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತ ವೈ-ಫೈ ಲಭ್ಯವಿರುತ್ತದೆ. ಹಾಗಂತ ಇದನ್ನು ಬಳಸಿದರೆ ನಿಮಗೆ ದುಬಾರಿಯಾಗಬಹುದು. ನಿಮ್ಮ ಸ್ಮಾರ್ಟ್​ಫೋನ್ ಉಚಿತ ವೈ-ಫೈಗೆ ಸಂಪರ್ಕಿಸಿದ ತಕ್ಷಣ, ವೈರಸ್‌ಗಳು ಪ್ರವೇಶಿಸುವ ಅಪಾಯವು ಹೆಚ್ಚಿರುತ್ತದೆ. ಇವುಗಳ ಬಗ್ಗೆ ಎಚ್ಚರ ವಹಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Thu, 14 December 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್