Rashmika Mandanna: ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ? ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಹೇಗೆ ಮಾಡಿದ್ರು?
What is Deep Fake Video?: ಡೀಪ್‌ಫೇಕ್‌ಗಳು ಶಕ್ತಿಶಾಲಿ ಕಂಪ್ಯೂಟರ್ ಟೆಕ್ನಾಲಜಿಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ಮುಖದೊಂದಿಗೆ ಬದಲಾಯಿಸಿ ಸೃಷ್ಟಿಸುವ ನಕಲಿ ವಿಡಿಯೋ ಆಗಿದೆ. ಈ ಫೇಕ್ ಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆಯ ರೂಪವನ್ನು ಬಳಸುತ್ತಾರೆ. ಹೀಗಾಗಿ ಇದಕ್ಕೆ "ಡೀಪ್‌ಫೇಕ್‌ಗಳು" ಎಂದು ಕರೆಯಲಾಗುತ್ತದೆ.
ಕೃತಕ ಬುದ್ಧಿಮತ್ತೆಯಿಂದ (AI) ರಚಿತವಾದ ನಕಲಿ ವಿಡಿಯೋಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಒಳಗೊಂಡ ಡೀಪ್‌ಫೇಕ್ ವಿಡಿಯೋ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಇದು ಸೆಲಿಬ್ರಿಟಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಇಂಟರ್ನೆಟ್ ಬಳಕೆದಾರರಿಗೂ ಅಪಾಯ ತಂದೊಡುವಂತೆ ಕಾಣುತ್ತಿದೆ. ಎಐ ದುರುಪಯೋಗ ಯಾವ ಮಟ್ಟದವರೆಗೆ ಆಗಬಹುದು ಎಂಬುದಕ್ಕೆ ರಶ್ಮಿಕಾ ಮಂದಣ್ಣ ಅವರ ಫೇಕ್ ವಿಡಿಯೋ ಉತ್ತಮ ಉದಾಹರಣೆಯಾಗಿದೆ.
ಡೀಪ್‌ಫೇಕ್ ಎಂದರೇನು?
ಡೀಪ್‌ಫೇಕ್‌ಗಳು ಶಕ್ತಿಶಾಲಿ ಕಂಪ್ಯೂಟರ್ ಟೆಕ್ನಾಲಜಿಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ಮುಖದೊಂದಿಗೆ ಬದಲಾಯಿಸಿ ಸೃಷ್ಟಿಸುವ ನಕಲಿ ವಿಡಿಯೋ ಆಗಿದೆ. ಈ ಫೇಕ್ ಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆಯ ರೂಪವನ್ನು ಬಳಸುತ್ತಾರೆ. ಹೀಗಾಗಿ ಇದಕ್ಕೆ “ಡೀಪ್‌ಫೇಕ್‌ಗಳು” ಎಂದು ಕರೆಯಲಾಗುತ್ತದೆ.
ಡೀಪ್‌ಫೇಕ್ ವಿಡಿಯೋ ಹೇಗೆ ಮಾಡಲಾಗುತ್ತದೆ?:
AI ಡೀಪ್‌ಫೇಕ್‌ಗಳು ಡಿಜಿಟಲ್ ಮ್ಯಾನಿಪ್ಯುಲೇಷನ್‌ನ ಒಂದು ರೂಪವಾಗಿದೆ. ಡೀಪ್‌ಫೇಕ್ ಸಾಮಾಜಿಕ ಜಾಲತಾಣ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಕ್ತಿಯ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲು ಮತ್ತು ಕಲಿಯಲು AI ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈಗ ನೀವು ಒಂದು ಫೋಟೋ ಅಥವಾ ವಿಡಿಯೋವನ್ನು ಡೀಪ್‌ಫೇಕ್ ಮಾಡಲು ಹೊರಟಾಗ, ನೀವು ಹಂಚಿಕೊಂಡ ಫೈಲ್ಗೆ ಮ್ಯಾಚ್ ಆಗುವ, ಅಂದರೆ ಒಂದೇ ಮುಖ ಲಕ್ಷಣವಿರುವ, ಧ್ವನಿಯನ್ನು ಮತ್ತು ಇತರ ಗುಣಲಕ್ಷಣಗಳನ್ನು ಗುರುತಿಸಿ ನಿಮ್ಮ ವಿಡಿಯೋ ಅಥವಾ ಫೋಟೋದ ಮೇಲೆ ಹೇರಲಾಗುತ್ತದೆ. ಆಗ ಹೊಸ ವಿಡಿಯೋ ಕ್ರಿಯೆಟ್ ಆಗುತ್ತದೆ.
ಇವರು ನಿಜಕ್ಕೂ ರಶ್ಮಿಕಾ ಮಂದಣ್ಣನಾ? ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ
ಡೀಪ್‌ಫೇಕ್ ವಿಡಿಯೋ ಕಂಡುಹಿಡಿಯುವುದು ಹೇಗೆ?:
AI ಯಿಂದ ರಚಿತವಾದ ನಕಲಿ ವಿಷಯಗಳು ನೈಜವಾದದ ರೀತಿಯಲ್ಲೇ ಕಾಣಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನವು ಫೋಟೋಗಳು, ವಿಡಿಯೋಗಳು ಅಥವಾ ಆಡಿಯೋ ರೆಕಾರ್ಡಿಂಗ್‌ಗಳ ರೂಪದಲ್ಲಿರಬಹುದು. ಇದು ಥೇಟ್ ವರಿಜಿನ್ ರೂಪದಲ್ಲೇ ಇರುತ್ತದೆ. ಇದನ್ನು ಸಾಮಾನ್ಯರಿಗೆ ಕಂಡು ಹಿಡಿಯುವುದು ಕಷ್ಟ. ಇಲ್ಲಿ ರಶ್ಮಿಕಾ ಅವರ ಫೇಕ್ ವಿಡಿಯೋ ಕೂಡ ಆಗಿದ್ದು ಹೀಗೆ.
ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಇಲ್ಲಿದೆ:
🚨 There is an urgent need for a legal and regulatory framework to deal with deepfake in India.
You might have seen this viral video of actress Rashmika Mandanna on Instagram. But wait, this is a deepfake video of Zara Patel.
This thread contains the actual video. (1/3) pic.twitter.com/SidP1Xa4sT
— Abhishek (@AbhishekSay) November 5, 2023
ಡೀಪ್‌ಫೇಕ್ ವಿಡಿಯೋಗಳನ್ನು ಗುರುತಿಸುವುದು ಅಷ್ಟೊಂದು ಸುಲಭಲ್ಲ. ಏಕೆಂದರೆ ಅವುಗಳ ಹಿಂದಿನ ತಂತ್ರಜ್ಞಾನವು ಬಲಿಷ್ಠವಾಗುತ್ತಲೇ ಇದೆ. ಇದನ್ನು ಗುರುತಿಸಲು ವಿಡಿಯೋವನ್ನು ಸರಿಯಾಗಿ ಗಮನಿಸಬೇಕು. ಪರಿಚಯ ಇರುವ ವ್ಯಕ್ತಿಯ ವಿಡಿಯೋ ಆಗಿದ್ದರೆ ಅವರ ಮುಖದ ಚಲನೆಗಳಿಂದ ಇದು ಫೇಕ್ ಅಥವಾ ರಿಯಲ್ ಎಂದು ಕಂಡುಹಿಡಿಯಬಹುದು. ವ್ಯಕ್ತಿಯು ಮಾತನಾಡುವಾಗ ತುಟಿಗಳನ್ನು ಸ್ಪಷ್ಟವಾಗಿ ಗಮನಿಸಿದರೆ ನಿಜವಾದ ವಿಡಿಯೋ ಯಾವುದು ಎಂದು ಕಂಡುಹಿಡಿಯಬಹುದು.
ಇತ್ತೀಚಿನ ದಿನಗಳಲ್ಲಿ ವಿವಿಧ ಸೆಲೆಬ್ರಿಟಿಗಳು ಇದೇ ರೀತಿಯ ಮೋಸಗೊಳಿಸುವ ವಿಡಿಯೋಗಳಿಗೆ ಬಲಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಡೀಪ್‌ಫೇಕ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಡೀಪ್‌ಫೇಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದರಿಂದ ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ನೋಡಬೇಕಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ