AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಚಲಿಸುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?, ಮರಳಿ ಪಡೆಯುವುದು ಹೇಗೆ?

Indian Railway: ನೀವು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ ಆಗಿದೆ. ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ನೀವು ಏನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯಿರಿ. ನಿಮ್ಮ ಫೋನ್ ಅನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಯಲು ಈ ಹಂತಗಳನ್ನು ಅನುಸರಿಸಿ.

Tech Tips: ಚಲಿಸುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?, ಮರಳಿ ಪಡೆಯುವುದು ಹೇಗೆ?
Train Mobile Phone
Follow us
Vinay Bhat
|

Updated on: Jan 09, 2024 | 11:30 AM

ಭಾರತೀಯ ರೈಲ್ವೆಯು ಆರಾಮದಾಯಕ ಮತ್ತು ದೂರದ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಜನರು ದೂರದೂರಿಗೆ ಪ್ರಯಾಣಿಸುವಾಗ ರೈಲಿನಲ್ಲಿ ಹೋಗಲು ಬಯಸುತ್ತಾರೆ. ಸುಮಾರು ಗಂಟೆಗಳ ಕಾಲ ಟ್ರೈನ್​ನಲ್ಲಿ ಇರಬೇಕಾಗಿರುವುದರಿಂದ ಜನರು ತಮ್ಮ ಸಮಯವನ್ನು ಕಳೆಯಲು ಮೊಬೈಲ್ (Mobile) ಬಳಸುತ್ತಾ ಇರುತ್ತಾರೆ. ಆದರೆ ಚಲಿಸುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಗತಿ?. ಸಾಮಾನ್ಯ ಜನರು ನನ್ನ ಮೊಬೈಲ್ ಕಳೆದುಹೋಯಿತು ಎಂದು ಮೌನವಾಗಿ ಕುಳಿತು ಬಿಡುತ್ತಾರೆ. ಕೆಲವು ಜನರು ರೈಲಿನ ಚೈನ್ ಅನ್ನು ಎಳೆಯುತ್ತಾರೆ. ಆದರೆ ಈ ವಿಧಾನವು ಸರಿಯಾಗಿದೆಯೇ?. ನಿಮ್ಮ ಫೋನ್ ಅನ್ನು ಮರಳಿ ಪಡೆಯಲು ನೀವು ಏನು ಮಾಡಬೇಕು?.

ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ

ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್‌ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.

Budget Smartphones: ಜನವರಿಯಲ್ಲಿ 10,000 ರೂ. ಒಳಗೆ ಖರೀದಿಸಬಹುದಾದ 5 ಬೆಸ್ಟ್ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

ಇದನ್ನೂ ಓದಿ
Image
ಭಾರತಕ್ಕೆ ಬಂತು ವಿವೋದ ಹೊಚ್ಚ ಹೊಸ ಬಜೆಟ್ ಸ್ಮಾರ್ಟ್​ಫೋನ್ ವಿವೋ Y28 5G
Image
ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಖರೀದಿಗೆ ಡಿಸ್ಕೌಂಟ್
Image
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ದೇಸಿ ಬ್ರ್ಯಾಂಡ್ ಲಾವಾ ಫೋನ್
Image
Republic Day Sale: ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳ ಮೇಲೆ ಡಿಸ್ಕೌಂಟ್

ಹೀಗೆ ಮಾಡಿದರೆ ರೈಲ್ವೆ ಪೊಲೀಸರಿಗೆ ನಿಮ್ಮ ಫೋನ್ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆಯ ನಂತರ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು.

ಈ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಂಪರ್ಕಿಸಬಹುದು

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದೆ. ನೀವು ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಸಬಹುದು. ಅದೇ ರೀತಿ, GRP ಯ ಸಹಾಯವಾಣಿ ಸಂಖ್ಯೆ 1512 ಆಗಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು. ರೈಲ್ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ