WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

TV9 Digital Desk

| Edited By: Vinay Bhat

Updated on: Oct 10, 2021 | 12:53 PM

WhatsApp Plus: ವಾಟ್ಸ್​ಆ್ಯಪ್ ಪ್ಲಸ್ ಆ್ಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ನೀವು ಇಂಥಹ ಅನಧಿಕೃತ ಆ್ಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ.

WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ
WhatsApp and WhatsApp Plus
Follow us

ವಾಟ್ಸ್​ಆ್ಯಪ್ (WhatsApp) ಮೆಸೀಜಿಂಗ್ ಅಪ್ಲಿಕೇಶನ್ ಇಂದು ವಿಶ್ವದಾದ್ಯಂತ ಕೋಟ್ಯಾಂತರ ಜನರು ಬಳಕೆ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಇದು ಪ್ರಸಿದ್ಧಿ ಪಡೆದಿದೆ. ಒಂದು ಆ್ಯಪ್ ಫೇಮಸ್ ಆಗಿದೆ ಎಂದಾದರೆ ಅದಕ್ಕೆ ಪೂರಕವಾದ ಅಥವಾ ಥೇಟ್ ಅದರಂತೆ ಇರುವ ನಕಲಿ ಆ್ಯಪ್​ಗಳು (Fake App) ಕೂಡ ಹುಟ್ಟಿಕೊಳ್ಳುತ್ತವೆ. ಗೂಗಲ್ ಪ್ಲೇ ಸ್ಟೋರ್​​ನಲ್ಲಿ (Goolge Play store) ಈಗಲೂ ಅಂತಹ ಅನೇಕ ಆ್ಯಪ್​ಗಳು ರಾರಾಜಿಸುತ್ತಿವೆ. ಇಂತಹ ಫೇಕ್ ಆ್ಯಪ್​ಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ, ಇವು ನಿಮ್ಮಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ, ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕಲೆಹಾಕಿ ಹಣ ದೋಚುತ್ತದೆ. ಈರೀತಿ ಅನೇಕ ಪ್ರಕರಣಗಳು ವರದಿಯಾಗಿದ್ದು ಗೊತ್ತೇ ಇದೆ. ಸದ್ಯ ವಾಟ್ಸ್​ಆ್ಯಪ್​ನಂತೆ ಇರುವ ವಾಟ್ಸ್​ಆ್ಯಪ್ ಪ್ಲಸ್ (WhatsApp Plus) ಎಂಬ ಆ್ಯಪ್ ಅನ್ನು ಅನೇಕರು ಉಪಯೋಗಿಸುತ್ತಿದ್ದಾರೆ ಎಂಬುದು ತಿಳಿದುಬಂದಿದ್ದು ಅಂಥವರಿಗೆ ಕಂಟಕ ಎದುರಾಗಿದೆ.

ಹೌದು, ವಾಟ್ಸ್​ಆ್ಯಪ್ ಪ್ಲಸ್ ಆ್ಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದೇ ಸ್ಮಾರ್ಟ್​ಫೋನಿನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆ ತೆರೆಯಲು ಸಾಧ್ಯವಿಲ್ಲ. ಹೀಗಾಗಿ ಒಂದು ಮೊಬೈಲ್​ನಲ್ಲಿ ಎರಡು ಸಿಮ್ ಬಳಸುವ ಅನೇಕರು ಒಂದು ಸಿಮ್​ನಲ್ಲಿ ಅಧಿಕೃತ ವಾಟ್ಸ್​ಆ್ಯಪ್ ಇದ್ದರೆ, ಇನ್ನೊಂದು ಸಿಮ್​ಗಾಗಿ ವಾಟ್ಸ್​ಆ್ಯಪ್ ಪ್ಲಸ್ ಅನ್ನು ಬಳಸುತ್ತಿದ್ದಾರೆ. ನೀವು ಹೀಗೆ ಮಾಡುತ್ತಿದ್ದರೆ ತಕ್ಷಣವೇ ವಾಟ್ಸ್​ಆ್ಯಪ್ ಪ್ಲಸ್ ಆ್ಯಪ್ ಅನ್ನು ಡಿಲೀಟ್ ಮಾಡಿ.

ವಾಟ್ಸ್​ಆ್ಯಪ್​ ಪ್ಲಸ್​ನಿಂದ ವಾಟ್ಸ್​ಆ್ಯಪ್​ಗೆ ತಲೆನೋವಾಗುವ ಪರಿಸ್ಥಿತಿ ಎದುರಾಗಿದ್ದು, ನೀವು ವಾಟ್ಸ್​ಆ್ಯಪ್​ ಪ್ಲಸ್ ನಂತಹ ಅನಧಿಕೃತ ಆ್ಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ ಎಂದು ವರದಿಯಾಗಿದೆ. ಇಲ್ಲದಿದ್ದರೆ ವಾಟ್ಸ್​ಆ್ಯಪ್​​ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಬಹುದು. ವಾಟ್ಸ್​ಆ್ಯಪ್​​ ಪ್ಲಸ್ ಒಂದು ಅನಧಿಕೃತ ಆವೃತ್ತಿಯಾಗಿದ್ದು, ಬಳಕೆದಾರರಿಗೆ ಸ್ಥಿತಿಯನ್ನು ಮರೆಮಾಚುವುದು, ಮಿತಿಗಳಿಲ್ಲದೆ ಫೋಟೋಗಳನ್ನು ಕಳುಹಿಸುವುದು, ನಿರ್ಧಿಷ್ಟ ಮಿತಿಯನ್ನು ಮೀರಿ ಗುಂಪುಗಳನ್ನು ರಚಿಸುವುದು ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.

ಥರ್ಡ್ ಪಾರ್ಟಿ ಆ್ಯಪ್​ ವಾಟ್ಸ್​ಆ್ಯಪ್​ ಪ್ಲಸ್ ಬಳಸಿದರೆ ವಾಟ್ಸ್​ಆ್ಯಪ್​ನಿಂದ ತಾತ್ಕಾಲಿಕ ಬ್ಯಾನ್ ಮಾಡಲಾಗುತ್ತದೆ ಎಂದು ವಾಟ್ಸ್​ಆ್ಯಪ್ ನೀತಿ ನಿಯಮಗಳು ತಿಳಿಸುತ್ತವೆ. ಹೀಗಾಗಿ ಈ ಆ್ಯಪ್​ಗಳನ್ನು ಬಳಸುತ್ತಿದ್ದರೆ ತಕ್ಷಣವೆ ಡಿಲೀಟ್ ಮಾಡಿ.

ಕಳೆದ ಆಗಸ್ಟ್ ತಿಂಗಳಲ್ಲಿ 20,70,000 ವಾಟ್ಸ್​ಆ್ಯಪ್​ ಖಾತೆಗಳನ್ನು ಫೇಸ್​ಬುಕ್ ಒಡೆತನದ ಕಂಪನಿ ವಾಟ್ಸ್​​ಆ್ಯಪ್ ಭಾರತದಲ್ಲಿ ನಿಷೇಧಿಸಿದೆ. ವಾಟ್ಸ್​ಆ್ಯಪ್​ ಸುಮಾರು 420 ಕುಂದುಕೊರತೆಯ ವರದಿಗಳನ್ನು ಆಗಸ್ಟ್‌ನಲ್ಲಿ ಪಡೆದಿತ್ತು. ವಾಟ್ಸ್​​ಆ್ಯಪ್​ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ ಪರಿಹಾರ ಕ್ರಮಗಳನ್ನು ಕೂಡ ಕೈಗೊಂಡಿದೆ.

ಫೇಸ್​ಬುಕ್​​, ವಾಟ್ಸ್​ಆ್ಯಪ್​ ಸರ್ವರ್ ಡೌನ್ ಆದ ದಿನ ಪಾರ್ನ್​ಹಬ್​ ಜಾಲತಾಣದ ಬಳಕೆ ಹೆಚ್ಚಳ

Apple Watch Series 7: ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅ.15ರಿಂದ ಮಾರಾಟಕ್ಕೆ; ಬೆಲೆ ಮತ್ತಿತರ ವಿವರ ಹೀಗಿದೆ

(WhatsApp can suspend your account if you use WhatsApp Plus App)

ತಾಜಾ ಸುದ್ದಿ

Related Stories

Click on your DTH Provider to Add TV9 Kannada