WhatsApp backup: ಸದ್ಯದಲ್ಲೇ ಗೂಗಲ್ ಡ್ರೈವ್‌ನಲ್ಲಿ ವಾಟ್ಸ್​ಆ್ಯಪ್ ಬ್ಯಾಕಪ್ ಸ್ಥಗಿತ: ತಕ್ಷಣವೇ ಹೀಗೆ ಮಾಡಿರಿ

WhatsApp google drive: ವಾಟ್ಸ್​ಆ್ಯಪ್​​​ನಲ್ಲಿರುವ ನಿಮ್ಮ ಡೇಟಾವನ್ನು ಗೂಗಲ್‌ ಡ್ರೈವ್‌ ಇಲ್ಲದೆ ಹೋದರೂ ಹೊಸ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ವರ್ಗಾವಣೆ ಮಾಡಬಹುದು. ಅದು ಹೇಗೆ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ.

WhatsApp backup: ಸದ್ಯದಲ್ಲೇ ಗೂಗಲ್ ಡ್ರೈವ್‌ನಲ್ಲಿ ವಾಟ್ಸ್​ಆ್ಯಪ್ ಬ್ಯಾಕಪ್ ಸ್ಥಗಿತ: ತಕ್ಷಣವೇ ಹೀಗೆ ಮಾಡಿರಿ
WhatsApp
Follow us
TV9 Web
| Updated By: Vinay Bhat

Updated on: Oct 18, 2021 | 1:58 PM

ವಾಟ್ಸ್​ಆ್ಯಪ್​​ ಬ್ಯಾಕಪ್‌ಗಳಿಗಾಗಿ (WhatsApp Backups) ಗೂಗಲ್ ಅನಿಯಮಿತ ಸಂಗ್ರಹಣೆ ನೀಡುವುದನ್ನು ಸದ್ಯದಲ್ಲೇ ಸ್ಥಗಿತಗೊಳಿಸಲಿದೆ ಎಂಬ ಆಘಾತಕಾರಿ ಸುದ್ದಿ ಇತ್ತೀಚೆಗಷ್ಟೆ ಹೊರಬಿದ್ದಿತ್ತು. ವಾಟ್ಸ್​ಆ್ಯಪ್ (WhatsApp)​​ ಬಳಕೆದಾರರಿಗೆ ಗೂಗಲ್ ಡ್ರೈವ್‌ನಲ್ಲಿ (Google Drive) ಬ್ಯಾಕಪ್ ಚಾಟ್ ಮಾಡಲು ಅನುಮತಿಸುತ್ತದೆ. ಅಂದರೆ ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಬ್ಯಾಕಪ್​ ಬದಲಾಯಿಸಲು ಗೂಗಲ್​ ಡ್ರೈವ್​ ಸಹಾಯ ಮಾಡುತ್ತಿತ್ತು. ಇದು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸುಲಭ ಮತ್ತು ಸರಳ ಮಾರ್ಗವಾಗಿತ್ತು. ಆದರೆ ಇನ್ಮುಂದೆ ಉಚಿತ ಸಂಗ್ರಹಣೆ ಲಭ್ಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ. ಅದಾಗ್ಯೂ ಕೂಡ ಗೂಗಲ್‌ ಡ್ರೈವ್‌ ಇಲ್ಲದೆ ಹೋದರೂ ನಿಮ್ಮ ಚಾಟ್‌ ಬ್ಯಾಕಪ್‌ (WhatApp Chat Backup) ಪಡೆಯಲು ವಾಟ್ಸ್​ಆ್ಯಪ್​​​ನಲ್ಲಿ ಸಾಧ್ಯವಿದೆ. ಅದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ವಾಟ್ಸ್​ಆ್ಯಪ್​​​ನಲ್ಲಿರುವ ನಿಮ್ಮ ಡೇಟಾವನ್ನು ಗೂಗಲ್‌ ಡ್ರೈವ್‌ ಇಲ್ಲದೆ ಹೋದರೂ ಹೊಸ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ವರ್ಗಾವಣೆ ಮಾಡಬಹುದು. ಇದಕ್ಕೆ RAR ನಂತಹ ಫೈಲ್ ಕಂಪ್ರೆಷನ್ ಅಪ್ಲಿಕೇಶನ್ ಅವಕಾಶ ನೀಡಲಿದೆ. ಇದು ಫೈಲ್‌ಗಳ ಆಫ್‌ಲೈನ್ ಬ್ಯಾಕಪ್ ತೆಗೆದುಕೊಳ್ಳುವ ಮೂಲಕ, ಎಲ್ಲಾ ಡೇಟಾವನ್ನು ಒಂದೇ ಫೋಲ್ಡರ್‌ಗೆ ಪಡೆಯುವ ಮೂಲಕ ಮತ್ತು ಆ ಫೋಲ್ಡರ್ ಅನ್ನು ಇನ್ನೊಂದು ಫೋನ್‌ಗೆ ವರ್ಗಾಯಿಸಬಹುದು.

ಇದಕ್ಕಾಗಿ ಮೊದಲು ನೀವು ವಾಟ್ಸ್​ಆ್ಯಪ್​​​ನ ಮೇನ್‌ಪೇಜ್​ನಲ್ಲಿ ಮೂರು ಡಾಟ್ ಅನ್ನು ಟ್ಯಾಪ್‌ ಮಾಡಿರಿ. ಇದರಲ್ಲಿ ನೀವು ಸೆಟ್ಟಿಂಗ್ಸ್/ ಚಾಟ್/ ಚಾಟ್ ಬ್ಯಾಕಪ್ ಗೆ ಹೋಗಿ, ‘ಬ್ಯಾಕ್ ಅಪ್’ ಮೇಲೆ ಟ್ಯಾಪ್ ಮಾಡಿ. ಇಲ್ಲಿ ಬ್ಯಾಕಪ್ ಕ್ರಿಯೆಟ್‌ ಮಾಡಬಹುದಾಗಿದೆ. ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಕಪ್‌ ಕ್ರಿಯೆಟ್‌ ಆದ ನಂಯತರ ಹಳೆಯ ಫೋನ್‌ನಲ್ಲಿರುವ ಬ್ಯಾಕಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿರಿ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ RAR ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಸೆಟಪ್ ಮಾಡಿ. ಇದರಲ್ಲಿ ಫೈಲ್‌ಗಳ ಆಫ್‌ಲೈನ್ ಬ್ಯಾಕಪ್ ಮಾಡಬಹುದು. ವಾಟ್ಸ್​ಆ್ಯಪ್​​​ ಡೇಟಾವನ್ನು ಒಂದೇ ಫೈಲ್ ನಲ್ಲಿ ಕೂಡಿಸಿ ಫೋಲ್ಡರ್‌ ಮಾಡಲು ಇದನ್ನು ಬಳಸಬಹುದಾಗಿದೆ.

ಈಗ RAR ಅಪ್ಲಿಕೇಶನ್ ನಲ್ಲಿ ನಿಮ್ಮ ಫೋನಿನ ಇಂಟರ್‌ ಸ್ಟೋರೇಜ್‌ ಅನ್ನು ಕಾಣಬಹುದು. ಇದರಲ್ಲಿ ನಿಮ್ಮ ವಾಟ್ಸ್​ಆ್ಯಪ್​​​ ಡೇಟಾವನ್ನು ಕಂಪ್ರೆಸ್‌ ಮಾಡಿರಿ. ಇಲ್ಲಿ ನೀವು ಆಂಡ್ರಾಯ್ಡ್‌/ ಮೀಡಿಯಾಗೆ ನ್ಯಾವಿಗೇಟ್ ಮಾಡಿ ಮತ್ತು ‘com.whatsapp’ ಫೋಲ್ಡರ್‌ ಕಾಣಬಹುದು. Com.whatsapp ಫೋಲ್ಡರ್ ಪಕ್ಕದಲ್ಲಿರುವ ಟಿಕ್ ಮಾರ್ಕ್ ಅನ್ನು ಆಯ್ಕೆ ಮಾಡಿ ಮತ್ತು ಮೇಲೆ ಆರ್ಕೈವ್ ಆಡ್ ಬಟನ್ ಒತ್ತಿ. ಫುಲ್‌ ಫೋಲ್ಡರ್ ಈಗ .rar ಫೈಲ್ ಆಗಿ ಬದಲಾಗಲಿದೆ.

ಇದಾದ ಬಳಿಕ ನಿಮ್ಮ ಹೊಸ com.whatsapp.rar ಫೈಲ್ ಅನ್ನು ನಿಮ್ಮ ಹೊಸ ಫೋನ್‌ಗೆ ವರ್ಗಾವಣೆ ಮಾಡಿ. ಹೊಸ ಫೋನಿನ ಇಂಟರ್‌ ಸ್ಟೋರೇಜ್‌ನಲ್ಲಿ ಅದೇ ಫೈಲ್ ಅನ್ನು ಅನ್‌ಜಿಪ್ ಮಾಡಲು ಮತ್ತೊಮ್ಮೆ RAR ಅನ್ನು ಬಳಸಿ. ಅನ್‌ಜಿಪ್‌ ಮಾಡಿದ ಫೋಲ್ಡರ್ ಅನ್ನು com.whatsapp ಎಂಬ ಹೆಸರಿನ ಪೋಲ್ಡರ್‌ನಲ್ಲಿಯೇ ಇರಿಸಿ.

ನಂತರ ನಿಮ್ಮ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅನ್ನು ಇನ್‌ಸ್ಟಾಲ್ ಮಾಡಿರಿ. ಆರಂಭಿಕ ಪ್ರಕ್ರಿಯೆಯಲ್ಲಿ ಗೂಗಲ್ ಡ್ರೈವ್ ಬ್ಯಾಕಪ್ ಪ್ರಾಂಪ್ಟ್ ಅನ್ನು ಬಿಟ್ಟು, ಲೋಕಲ್‌ ಬ್ಯಾಕಪ್ ಅನ್ನು ಕ್ರಿಯೆಟ್‌ ಮಾಡಿ. ಆಗ ನೀವು com.whatsapp ರಿ ಸ್ಟೋರ್‌ ಮಾಡಿ ಫೈಲ್‌ಗಳನ್ನು ವಾಟ್ಸ್​ಆ್ಯಪ್​​​ ಡಿಟೆಕ್ಟ್‌ ಮಾಡಲಿದೆ. ಡಿಟೆಕ್ಟ್‌ ಮಾಡಲಾದ ಬ್ಯಾಕಪ್ ಅನ್ನು ರಿಸ್ಟೋರ್‌ ಮಾಡಿ. ಹೀಗೆ ಮಾಡಿದ ನಂತರ ನಿಮ್ಮ ಹಳೆಯ ಬ್ಯಾಕಪ್‌ ಹೊಸ ಫೋನಿನಲ್ಲಿ ಸುಲಭವಾಗಿ ಸಿಗುತ್ತದೆ.

5G Smartphone: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಯಾರಿಗೂ ಗೊತ್ತಾಗಲ್ಲ: ಹೀಗೆ ಮಾಡಿದ್ರೆ ಸಾಕು

(WhatsApp Here is how you can transfer WhatsApp data without using the Google Drive backup)