ವಾಟ್ಸ್ಆ್ಯಪ್ (WhatsApp) ಪ್ರತಿ ದಿನ ಒಂದಲ್ಲ ಒಂದು ಹೊಸ ಫೀಚರ್ಗಳ ಘೋಷಣೆ ಮಾಡುತ್ತಲೇ ಇದೆ. ಈಗಾಗಲೇ ತನ್ನ ಬಳಕೆದಾರರನ್ನು 2000 ಮಿಲಿಯನ್ಗೆ ತಲುಪಿಸಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಒಂದೊಂದಾಗಿ ನೀಡುತ್ತಿರುವ ಇದರಲ್ಲಿ ಆಂಡ್ರಾಯ್ಡ್ (Android), ಐಒಎಸ್, ಟ್ಯಾಬ್ಲೆಟ್ ಹಾಗೂ ವೆಬ್ ಬಳಕೆದಾರರಿಗೆ ನೂತನ ಫೀಚರ್ಸ್ ನೀಡುವಲ್ಲಿ ನಿರತವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಎಕ್ಸ್ಪೇರಿಂಗ್ ಗ್ರೂಪ್ ಫೀಚರ್ಸ್ ನೀಡುವುದಾಗಿ ಘೋಷಣೆ ಮಾಡಿದ್ದ ಕಂಪನಿ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಿದೆ. ಇದೀಗ ಬಳಕೆದಾರರಿಗೆ ಹೊಸದಾಗಿ 21 ಎಮೋಜಿಗಳನ್ನು ಪರಿಚಯಿಸಿದೆ.
ಈ ಹೊಸ ಎಮೋಜಿಗಳನ್ನು ವಾಟ್ಸ್ಆ್ಯಪ್ ಕೀಬೋರ್ಡ್ನಿಂದ ನೇರವಾಗಿ ಸೆಂಡ್ ಮಾಡಬಹುದಾಗಿದೆ. ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರಿಗೆ ಈಗಾಗಲೇ ಅಧಿಕೃತ ವಾಟ್ಸ್ಆ್ಯಪ್ ಕೀಬೋರ್ಡ್ ಮೂಲಕ ಈ ಹೊಸ ಎಮೋಜಿಗಳನ್ನು ಉಪಯೋಗಿಸಬಹುದಾಗಿದೆ. ಇದರ ಮೂಲಕ ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ತಿಳಿಸಬಹುದು. ನಿಮಗೂ ಆಯ್ಕೆ ಬೇಕು ಎಂದಾದಲ್ಲಿ ವಾಟ್ಸ್ಆ್ಯಪ್ ಖಾತೆಯಲ್ಲಿಯೂ ನೂತನ ಆವೃತ್ತಿಗೆ ಅಪ್ಡೇಟ್ ಮಾಡಬೇಕು.
Redmi 12C: ಶವೋಮಿಯಿಂದ ಅತಿ ಕಡಿಮೆ ಬೆಲೆಗೆ ರೆಡ್ಮಿ 12C ಸ್ಮಾರ್ಟ್ಫೋನ್ ಬಿಡುಗಡೆ: ಎಷ್ಟು ರೂ. ಗೊತ್ತೇ?
ಎಕ್ಸ್ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್ಆ್ಯಪ್ ನಿಮಗೆ ಆ ಗ್ರೂಪ್ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್ಆ್ಯಪ್ ಗ್ರೂಪ್ ಇನ್ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.
ವಾಟ್ಸ್ಆ್ಯಪ್ ಐಒಎಸ್ ಬೀಟಾ ವರ್ಷನ್ನಲ್ಲಿ ಚಾಟ್ ಪಟ್ಟಿಯೊಳಗೆ ಪುಶ್ ಹೆಸರು (“Push name within the chat list”) ಫೀಚರ್ಸ್ ಸೇರ್ಪಡೆ ಮಾಡಲು ಮುಂದಾಗಿದೆ. ಇದು ವಾಟ್ಸ್ಆ್ಯಪ್ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್ ಲಿಸ್ಟ್ನಲ್ಲಿ ಪುಶ್ ನೇಮ್ಗಳನ್ನು ಕಾಣಿಸುತ್ತದೆ. ಇದರಿಂದ ಪ್ರತಿ ಭಾರಿಯು ಮೆಸೇಜ್ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್ ನೇಮ್ ನಿಮಗೆ ಕಾಣಿಸಲಿದೆ. ಈ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್ ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ