WhatsApp Alert: ವಾಟ್ಸ್​ಆ್ಯಪ್​ ಬಳಕೆದಾರರು ಇಲ್ಲಿ ಗಮನಿಸಿ: ತಪ್ಪಿಯೂ ಈ ಲಿಂಕ್ ಓಪನ್ ಮಾಡಬೇಡಿ

WhatsApp Scam: ವಾಟ್ಸ್​ಆ್ಯಪ್​ನಲ್ಲಿ ತಪ್ಪಿಯೂ ನೀವು ಈರೀತಿಯ ಲಿಂಕ್​ಗಳನ್ನು ಓಪನ್ ಮಾಡಬೇಡಿ. ಅಪಾಯಕಾರಿ ವಾಟ್ಸ್​ಆ್ಯಪ್​ ಹಗರಣವನ್ನು Rediroff.com ಎಂದು ಹೆಸರಿಸಲಾಗಿದ್ದು, ಸ್ಕ್ಯಾಮರ್‌ಗಳು ಬಳಕೆದಾರರಿಗೆ ಲಿಂಕ್ ಅನ್ನು ಕಳುಹಿಸುವ ಮೂಲಕ ವಂಚನೆ ಎಸಗುತ್ತಿದ್ದಾರೆ.

WhatsApp Alert: ವಾಟ್ಸ್​ಆ್ಯಪ್​ ಬಳಕೆದಾರರು ಇಲ್ಲಿ ಗಮನಿಸಿ: ತಪ್ಪಿಯೂ ಈ ಲಿಂಕ್ ಓಪನ್ ಮಾಡಬೇಡಿ
WhatsApp
Follow us
TV9 Web
| Updated By: Vinay Bhat

Updated on: Jan 02, 2022 | 2:41 PM

ಮೆಟಾ (Meta) ಒಡೆತನದ ವಾಟ್ಸ್ಆ್ಯಪ್​ನಲ್ಲಿ (WhatsApp) ಸ್ಕ್ಯಾಮ್ ಮೆಸೇಜ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ವಂಚನೆ ಮೆಸೇಜ್‌ಗಳು ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿರುತ್ತದೆ. ಅದು ಅನ್‌ಲಿಮಿಟೆಡ್ ಡೇಟಾ (Unlimited Data), ಉಚಿತ ರೀಚಾರ್ಜ್, ಫ್ರೀ ಮೊಬೈಲ್, ಪ್ರಸಿದ್ಧ ಇ ಕಾಮರ್ಸ್ ತಾಣಗಳ ಫೇಕ್ ಆಫರ್ (Fake Offer) ಬಗ್ಗೆ ಇರುತ್ತದೆ. ಬಹುತೇಕರು ಇಂಥಹ ಸ್ಕ್ಯಾಮ್‌ ಮೆಸೇಜ್‌ಗಳನ್ನು ಪಡೆಯುತ್ತಲೇ ಇರುತ್ತಾರೆ. ಇದೀಗ ವಾಟ್ಸ್​ಆ್ಯಪ್​ನಲ್ಲಿನ ಮತ್ತೊಂದು ಹೊಸ ವಂಚನೆಯೊಂದು (WhatsApp Scam) ಬೆಳಕಿಗೆ ಬಂದಿದ್ದು, ದುಬಾರಿ ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುವ ನಕಲಿ ಲಿಂಕ್‌ಗಳಿಂದ ಹಲವರು ಮೋಸ ಹೋಗಿರುವ ಪ್ರಕರಣಗಳು ವರದಿಯಾಗಿವೆ. ಈ ಅಪಾಯಕಾರಿ ವಾಟ್ಸ್​ಆ್ಯಪ್​ ಹಗರಣವನ್ನು Rediroff.com ಎಂದು ಹೆಸರಿಸಲಾಗಿದ್ದು, ಸ್ಕ್ಯಾಮರ್‌ಗಳು ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಿಂಕ್ ಅನ್ನು ಕಳುಹಿಸುವ ಮೂಲಕ ವಂಚನೆ ಎಸಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ತಪ್ಪಿಯೂ ನೀವು ಈರೀತಿಯ ಲಿಂಕ್​ಗಳನ್ನು ಓಪನ್ ಮಾಡಬೇಡಿ. ವಾಟ್ಸ್ಆ್ಯಪ್ ಬಳಕೆದಾರರು ಸ್ಕ್ಯಾಮ್‌ ಮೆಸೇಜ್‌ಗಳನ್ನು ಪಡೆಯುವುದು ಮತ್ತು ಹಲವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ತಮ್ಮ ವೈಯಕ್ತಿಕ ಡೇಟಾವನ್ನು ಗೊತ್ತಿಲ್ಲದೇ ವಂಚಕರಿಗೆ ಶೇರ್‌ ಮಾಡುತ್ತಿರುವುದು ಅವರಿಗೆ ತಿಳಿದೇ ತಿಳಿಯದೇ ಆಗುತ್ತಿರುವ ಚಟುವಟಿಕೆ ಆಗಿದೆ. ಮೋಸಗಾರರ ದಾಳಿಗೆ ತುತ್ತಾಗುವುದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ವಾಟ್ಸ್‌ಆ್ಯಪ್ ಬಳಸಿಕೊಂಡು ನೀವು ಆನ್‌ಲೈನ್ ಪಾವತಿ ಮಾಡಬಹುದಾಗಿದ್ದರೂ ಈ ತಾಣದಲ್ಲಿ ನಡೆಯುವ ಮೋಸದ ಬಗ್ಗೆ ನೀವು ಜಾಗರೂಕರಾಗಿರಬೇಕು.

ಸದ್ಯ CNBCಯಲ್ಲಿನ ಹಲವು ವರದಿಗಳ ಪ್ರಕಾರ, ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಲಿಂಕ್ ಅನ್ನು ಕಳುಹಿಸುವ ಮೂಲಕ ವಂಚನೆ ಎಸಗುತ್ತಿರುವ ಹೊಸ ಹಗರಣದಿಂದ ಹಲವರು ಮೋಸಹೋಗಿರುವುದನ್ನು ತಿಳಿಯಬಹುದಾಗಿದೆ. ವಂಚಕರು ದುಬಾರಿ ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಪ್ಯಾಮ್ ಲಿಂಕ್‌ಗಳು ವಿಂಡೋಸ್ ಪಿಸಿ, ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ಅನ್ನು ತರುತ್ತಿದೆ ಎದು CNBC ತನ್ನ ವರದಿಯಲ್ಲಿ ತಿಳಿಸಿದೆ.

ಈ ಹಗರಣದಲ್ಲಿ ಕೆಲವರು ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಳೆದುಕೊಂಡಿದ್ದರೆ, ಹಲವರ ವೈಯಕ್ತಿಕ ಡೇಟಾವನ್ನು ಸಹ ಕದಿಯಲಾಗಿದೆ. ಇದರಲ್ಲಿ ಬಳಕೆದಾರರು ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ಹೆಸರು, ವಯಸ್ಸು, ವಿಳಾಸ, ಬ್ಯಾಂಕ್ ಮಾಹಿತಿ ಮತ್ತು ಇತರ ವಿವರಗಳಂತಹ ಕೆಲವು ವಿವರಗಳನ್ನು ಭರ್ತಿ ಮಾಡಲು ಅವರನ್ನು ಕೇಳಲಾಗುತ್ತದೆ. ಬಳಕೆದಾರರು ಎಲ್ಲಾ ವಿವರಗಳನ್ನು ನಮೂದಿಸಿದ ನಂತರ ಅವರಿಗೆ ಭಾರೀ ಹಣವನ್ನು ಗೆದ್ದಿರುವ ಆಸೆ ತೋರಿಸಿ ಮೋಸ ಮಾಡಲಾಗುತ್ತಿದೆಯಂತೆ. ಹೀಗಾಗಿ ನೀವು ಎಚ್ಚರದಿಂದಿರಿ.

ಫೇಕ್ ಮೆಸೇಜ್‌ ಪತ್ತೆ ಮಾಡುವುದು ಹೇಗೆ?

  • ಸಾಮಾನ್ಯವಾಗಿ ಹೆಚ್ಚಿನ ಫೇಕ್‌ ಮೆಸೇಜ್‌ಗಳು ಉಚಿತ ಮತ್ತು ಅನ್‌ಲಿಮಿಟೆಡ್ ಎಂಬ ಸೇವೆ ಕುರಿತು ಇರುತ್ತವೆ. ಉದಾಹರಣೆಗೆ ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ 4G ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕರೆ ಆಫರ್‌ಗಳನ್ನು ನೀಡುತ್ತಿವೆ ಎಂದು ಫೇಕ್‌ ಮೆಸೇಜ್‌ಗಳನ್ನು ಹರಿಯಬಿಡಲಾಗಿತ್ತು. ಇಂತಹ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡದಿರಿ.
  • ವಾಟ್ಸ್ಆ್ಯಪ್ ಮೆಸೇಜ್‌ಗಳು ಉಚಿತ ರೀಚಾರ್ಜ್‌, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್‌ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ವಾಟ್ಸ್ಆ್ಯಪ್ ಶಟ್‌ಡೌನ್‌ ಮಾಡಿ, ಮೆಸೇಜ್‌ ಕಡೆಗಣಿಸಿ ಬಿಡಿ.
  • ಅಧಿಕೃತ ನ್ಯೂಸ್‌ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ವಾಟ್ಸ್ಆ್ಯಪ್ ನಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್‌ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್‌ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ.

Vivo Y21T: 5000mAh ಬ್ಯಾಟರಿಗೆ ಫಾಸ್ಟ್ ಚಾರ್ಜರ್: ಕಡಿಮೆ ಬೆಲೆಯ ವಿವೋ Y21T ಸ್ಮಾರ್ಟ್‌ಫೋನ್‌ ಬಿಡುಗಡೆ

(WhatsApp new scam has come up its rob users personal and financial data like bank and card details)