WhatsApp: ವಾಟ್ಸ್ಆ್ಯಪ್ ಖಾತೆಯನ್ನು ಸುಲಭವಾಗಿ ಡಿಲೀಟ್ ಮಾಡುವುದು ಹೇಗೆ?: ಇಲ್ಲಿದೆ ಟಿಪ್ಸ್
WhatsApp Tips: ಆಕರ್ಷಕ ಫೀಚರ್ಗಳಿಂದ ನೀವು ವಾಟ್ಸ್ಆ್ಯಪ್ಗೆ ಅಡಿಕ್ಟ್ ಆಗಿ ಕೆಲ ಸಮಯ ವಿರಾಮ ಪಡೆದುಕೊಳ್ಳುವ ಪ್ಲಾನ್ನಲ್ಲಿದ್ದೀರಾ?, ಹಾಗಿದ್ದರೆ ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಡಿಲೀಟ್ ಮಾಡುವ ಮೂಲಕ ಇದರ ಚಟದಿಂದ ಹೊರಬಹುದು.
ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಉಪಯೋಗಿಸುತ್ತಿರುವವರ ಸಂಖ್ಯೆ ಮಿಲಿಯನ್ ಗಟ್ಟಲೆಯಿದೆ. ಕೇವಲ ಮೆಸೇಜ್ ಕಳುಹಿಸಲು ಮಾತ್ರವಲ್ಲದೆ ಫೋಟೋ, ವಿಡಿಯೋ, ಆಡಿಯೋ, ಡಾಕ್ಯುಮೆಂಟ್ಗಳನ್ನು ಕಳುಹಿಸಲು ಕೂಡ ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಈ ವರ್ಷದಲ್ಲಿಂತು ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅನೇಕ ಫೀಚರ್ಗಳನ್ನು ಪರಿಚಯಿಸಿದೆ. ಮೆಸೇಜ್ ರಿಯಾಕ್ಷನ್ (Message Reactions), ಮೆಸೇಜ್ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ, ವೀವ್ ಒನ್ಸ್ ಫೀಚರ್ ಸೇರಿದಂತೆ ಅನೇಕ ಆಯ್ಕೆಗಳನ್ನು ನೀಡಿದೆ. ಕೆಲವೇ ದಿನಗಳಲ್ಲಿ ಲಾಗೌಟ್ ಫೀಚರ್ (WhatsApp Logout), ಗ್ರೂಪ್ ಅಡ್ಮಿನ್ಗೆ ಯಾವುದೇ ಮೆಸೇಜ್ ಡಿಲೀಟ್ ಮಾಡುವ ಅಧಿಕಾರ ಸೇರಿದಂತೆ ಇನ್ನೂ ಕೆಲ ಆಯ್ಕೆಗಳು ಬರಲಿದೆ. ಇದರಲ್ಲಿರುವ ಆಕರ್ಷಕ ಫೀಚರ್ಗಳಿಂದ ನೀವು ವಾಟ್ಸ್ಆ್ಯಪ್ಗೆ ಅಡಿಕ್ಟ್ ಆಗಿ ಕೆಲ ಸಮಯ ವಿರಾಮ ಪಡೆದುಕೊಳ್ಳುವ ಪ್ಲಾನ್ನಲ್ಲಿದ್ದೀರಾ?, ಹಾಗಿದ್ದರೆ ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಡಿಲೀಟ್ ಮಾಡುವ ಮೂಲಕ ಇದರ ಚಟದಿಂದ ಹೊರಬಹುದು.
ಒಂದು ವೇಳೆ ವಾಟ್ಸ್ಆ್ಯಪ್ ಡಿಲೀಟ್ ಮಾಡಬೇಕು ಅಂದುಕೊಂಡಿದ್ದರೆ ಕೆಲ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಅಂದಹಾಗೆ ವಾಟ್ಸ್ಆ್ಯಪ್ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ 90 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ. ಇಲ್ಲಿದೆ ನೋಡಿ ವಾಟ್ಸ್ಆ್ಯಪ್ ಅನ್ನು ಡಿಲೀಟ್ ಮಾಡುವ ಸುಲಭ ವಿಧಾನ.
ಆಂಡ್ರಾಯ್ಡ್ನಲ್ಲಿ ವಾಟ್ಸ್ಆ್ಯಪ್ ಡಿಲೀಟ್ ಹೇಗೆ?:
- ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ.
- ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
- ಸೆಟ್ಟಿಂಗ್ಸ್ನಲ್ಲಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.
- ಡ್ರಾಪ್‌ಡೌನ್‌ನಲ್ಲಿ ನೀವು ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತೀರಿ ಎಂಬುದಕ್ಕೆ ಕಾರಣ ನೀಡಿ.
- ಈಗ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ಡಿಲೀಟ್ ಆಗುತ್ತಿದೆ. ನಂತರ ಎಲ್ಲ ಮೆಸೇಜ್ ಡಿಲೀಟ್ ಆಗುತ್ತದೆ.
- ವಾಟ್ಸ್ಆ್ಯಪ್ ಡಿಲೀಟ್ ಮಾಡಿದರೆ ಎಲ್ಲ ಗ್ರೂಪ್ನಿಂದ ನೀವು ಹೊರಬರುತ್ತೀರಿ.
ಐಫೋನ್ನಲ್ಲಿ ವಾಟ್ಸ್ಆ್ಯಪ್ ಡಿಲೀಟ್ ಹೇಗೆ?:
- ನಿಮ್ಮ ಐಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ.
- ಸೆಟ್ಟಿಂಗ್‌ಗಳಿಗೆ ಹೋಗಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.
ವಾಟ್ಸ್ಆ್ಯಪ್ಗೆ ಪರ್ಯಾಯಗಳಿವೆಯಾ?:
ಹಲವಾರು ಮಂದಿ ಈಗಾಗಲೇ ವಾಟ್ಸ್ಆ್ಯಪ್ ಬಿಟ್ಟು ಬೇರೆ ಬೇರೆ ಮೆಸೇಜಿಂಗ್ ಆ್ಯಪ್ಗೆ ಬದಲಾಗಿದ್ದಾರೆ. ಅದರಲ್ಲಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಕೂಡ ಇವೆ. ಸದ್ಯಕ್ಕೆ ಇವೆರಡು ನಂಬಿಕಸ್ತ ಮೆಸೇಜಿಂಗ್ ಆ್ಯಪ್ಗಳಾಗಿವೆ. ಟೆಲಿಗ್ರಾಮ್ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಸೀಕ್ರೆಟ್ ಚಾಟ್ಗೆ, ಒನ್–ಆನ್–ಒನ್ ವಿಡಿಯೋ ಅಥವಾ ವಾಯ್ಸ್ ವಾಯ್ಸ್ ಕಾಲ್ಗಳಿಗೆ ಮಾತ್ರ ಇದೆ. ಯಾರಿಗೆ ಭದ್ರತೆ ಬಗ್ಗೆ ಆತಂಕ ಇದೆಯೋ ಅಂಥವರು ಸೀಕ್ರೆಟ್ ಚಾಟ್ ಮೋಡ್ ಎನೇಬಲ್ ಮಾಡಿಕೊಳ್ಳಬಹುದು.
Published On - 12:32 pm, Mon, 12 September 22