ಇಂದಿನ ದಿನಗಳಲ್ಲಿ ಒಬ್ಬರಿಗೆ ಒಂದು ವಿಳಾಸವನ್ನು ತಿಳಿಸುವುದು ಬಹಳಷ್ಟು ಸುಲಭ. ಅವರು ತಲುಪಬೇಕಿರುವ ವಿಳಾಸವನ್ನು ಗೂಗಲ್ ಲೊಕೇಶನ್ (Google Lacation) ಕಳುಹಿಸುವ ಮೂಲಕ ಕಳುಹಿಸಲಾಗುತ್ತಿತ್ತು. ಈಗ ಸಾಮಾನ್ಯವಾಗಿ ಎಲ್ಲರೂ ಲೊಕೇಶನ್ ಶೇರ್ ಮಾಡಲು ವಾಟ್ಸ್ಆ್ಯಪ್ (WhatsApp) ಬಳಸುತ್ತಿದ್ದಾರೆ. ಹೆಚ್ಚಾಗಿ ಲೊಕೇಶನ್ ಶೇರ್ ಮತ್ತು ಲೈವ್ ಲೊಕೇಶನ್ ಶೇರ್ ಫೀಚರ್ಸ್ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ನಿಮ್ಮ ಸ್ನೇಹಿತರು, ಇಲ್ಲವೇ ಅನವಶ್ಯಕತೆ ಇರುವವರಿಗೆ ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿಸುವುದಕ್ಕೆ ಸಾಧ್ಯವಾಗಲಿದೆ. ಆದರೂ ಕೆಲವರಿಗೆ ವಾಟ್ಸ್ಆ್ಯಪ್ನಲ್ಲಿ ಲೊಕೇಶನ್ ಶೇರ್ ಮಾಡುವುದಕ್ಕೆ ಗೊಂದಲವಿದೆ.
ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಲೊಕೇಶನ್ ಶೇರ್ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಮೊದಲನೇಯದು ಕರೆಂಟ್ ಲೊಕೇಶನ್ ಶೇರ್ ಆಯ್ಕೆ. ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದೊಂದಿಗೆ ಅಥವಾ ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು. ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ವಾಟ್ಸ್ಆ್ಯಪ್ನಲ್ಲಿ ಲೊಕೇಶನ್ ಶೇರ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.
ಲೈವ್ ಲೊಕೇಶನ್ ಶೇರ್ ಮಾಡುವುದು ಹೇಗೆ?:
ವಾಟ್ಸ್ಆ್ಯಪ್ನಲ್ಲಿ ಡಿಜಿಲಾಕರ್ ಸೇವೆ:
ಭಾರತದಲ್ಲಿ ವಾಟ್ಸ್ಆ್ಯಪ್ ಮೂಲಕ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. MyGov ಹೆಲ್ಫ ಡೆಸ್ಕ್ ವಾಟ್ಸ್ಆ್ಯಪ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸ್ಆ್ಯಪ್ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸ್ಆ್ಯಪ್ ಬಳಕೆದಾರರು ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ