WhatsApp: ವಾಟ್ಸ್​​ಆ್ಯಪ್​​ನಲ್ಲಿರುವ ಮಲ್ಟಿಡಿವೈಸ್ ಆಯ್ಕೆಯನ್ನು ಅನ್​ಲಿಂಕ್ ಮಾಡುವುದು ಹೇಗೆ?

WhatsApp: ವಾಟ್ಸ್​​ಆ್ಯಪ್​​ನಲ್ಲಿರುವ ಮಲ್ಟಿಡಿವೈಸ್ ಆಯ್ಕೆಯನ್ನು ಅನ್​ಲಿಂಕ್ ಮಾಡುವುದು ಹೇಗೆ?
WhatsApp

WhatsApp Multiple Device: ವಾಟ್ಸ್​ಆ್ಯಪ್ ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸಿತ್ತು. ಆದರೆ, ಇದನ್ನು ಲಿಂಕ್ ಮಾಡಿದ ಬಳಿಕ ಅನ್​​ಲಿಂಕ್ ಮಾಡುವುದು ಹೇಗೆ ಎಂಬುದು ಅನೇಕರಿಗೆ ತಿಳಿದಿಲ್ಲ.

TV9kannada Web Team

| Edited By: Vinay Bhat

Apr 26, 2022 | 1:36 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಈ ಹೊಸ ಅಪ್ಡೇಟ್​ನಲ್ಲಿ ನೀವು ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗಳಲ್ಲಿ ಬಳಸಬಹುದಾಗಿದೆ. ಈ ಹಿಂದೆ ವಾಟ್ಸ್​ಆ್ಯಪ್​ ಅನ್ನು ಒಂದು ಡಿವೈಸ್​ನಲ್ಲಿ ಮಾತ್ರ ಬಳಸಬಹುದಾಗಿತ್ತು. ಎರಡು ಮೊಬೈಲ್​ನಲ್ಲಿ ಒಂದೇ ವಾಟ್ಸ್​ಆ್ಯಪ್ ಖಾತೆ ಹೊಂದಿರುವ ಆಯ್ಕೆ ಇರಲಿಲ್ಲ. ಅದಾಗ್ಯೂ ವಾಟ್ಸ್​ಆ್ಯಪ್​ ವೆಬ್ ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್​ನಲ್ಲಿ ಉಪಯೋಗಿಸಬಹುದಿತ್ತು. ಅಪ್ಡೇಟ್​​ನಲ್ಲಿ ವಾಟ್ಸ್​ಆ್ಯಪ್ ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸಿತ್ತು. ಆದರೆ, ಇದನ್ನು ಲಿಂಕ್ ಮಾಡಿದ ಬಳಿಕ ಅನ್​​ಲಿಂಕ್ ಮಾಡುವುದು ಹೇಗೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಹೌದು, ಈ ಮಲ್ಟಿಡಿವೈಸ್ ಫೀಚರ್‌ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ. ನಿಮಗಿನ್ನೂ ಈ ಬಹು-ಸಾಧನ ಫೀಚರ್ ಅನ್ನು ಬಳಸುವ ಆಯ್ಕೆ ಸಿಕ್ಕಿಲ್ಲ ಎಂದಾದರೆ ನಿಮ್ಮ ವಾಟ್ಸ್​ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕಾಗುತ್ತದೆ. ಆ ಬಳಿಕ ಈ ಕೆಳಗಿನ ಹಂತಗಳನ್ನು ಬಳಸಿ ನಿಮ್ಮ ಸಾಧನಗಳನ್ನು ಹೇಗೆ ಲಿಂಕ್ ಮಾಡುವುದು ಎಂದು ತಿಳಿಯಿರಿ ನಂತರ ಅನ್​ಲಿಂಕ್ ಮಾಡುವುದು ಹೇಗೆಂದು ನೋಡಿರಿ.

  • ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್​​ಆ್ಯಪ್​ ಮೇಲೆ ಕ್ಲಿಕ್ ಮಾಡಿ ಮತ್ತು ಮೂರು-ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ.
  • ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಐಒಎಸ್ ಬಳಕೆದಾರರಿಗೆ, ಸೆಟ್ಟಿಂಗ್‌ಗಳ ಐಕಾನ್ ಟ್ಯಾಪ್ ಮಾಡುವ ಮೂಲಕ ವಾಟ್ಸ್​ಆ್ಯಪ್​​ ಆಯ್ಕೆಮಾಡಿ ಲಿಂಕ್ಡ್ ಸಾಧನಗಳನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ.
  • ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಿ ಅಥವಾ ಪಿನ್ ನಮೂದಿಸಿ.
  • web.whatsapp.com ಅಥವಾ WhatsApp ಅನ್ನು ಡೆಸ್ಕ್‌ಟಾಪ್ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ತೆರೆಯಿರಿ.
  • ಸೆಲ್ಫೋನ್ ಮೂಲಕ ಪರದೆಯ ಮೇಲೆ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ಲಿಂಕ್ ಆಗುತ್ತಿದೆ.

ಅನ್​ಲಿಂಕ್ ಮಾಡಲು ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ತೆರೆದು ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಈಗ ನೀವು ಲಿಂಕ್ ಆದ ಡಿವೈಸ್​ಗಳ ಪಟ್ಟಿಯನ್ನು ಕಾಣುತ್ತೀರಿ. ಯಾವ ಡಿವೈಸ್ ಅನ್ನು ಅನ್​ಲಿಂಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗೌಟ್ ಆಯ್ಕೆಯನ್ನು ಒತ್ತಿರಿ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಲಿಂಕ್ ಮಾಡಲಾದ ಇತರೆ ಸಾಧನಗಳಲ್ಲಿ ವಾಟ್ಸ್​ಆ್ಯಪ್​​ ಕೆಲವು ವೈಶಿಷ್ಟ್ಯಗಳನ್ನು ಬೆಂಬಲಿಸುವುದಿಲ್ಲ. ವಾಟ್ಸ್​ಆ್ಯಪ್​​ ಹೇಳಿರುವ ಪ್ರಕಾರ, ಬಹು-ಸಾಧನ ಬೆಂಬಲ (multi-device support) ವೈಶಿಷ್ಟ್ಯದ ಮೂಲಕ ಲಿಂಕ್ ಆಗಿರುವ ಸಾಧನಗಳಲ್ಲಿ ಲೈವ್ ಸ್ಥಳವನ್ನು ವೀಕ್ಷಿಸಲು ಸಾಧ್ಯವಿಲ್ಲ. ಬ್ರಾಡ್‌ಕಾಸ್ಟ್ ಲಿಸ್ಟ್ ರಚಿಸುವುದು ಮತ್ತು ವೀಕ್ಷಿಸುವುದು ಅಥವಾ ವಾಟ್ಸ್​ಆ್ಯಪ್​​ ವೆಬ್‌ನಿಂದ ಲಿಂಕ್ ಪೂರ್ವವೀಕ್ಷಣೆಗಳೊಂದಿಗೆ ಸಂದೇಶಗಳನ್ನು ಕಳುಹಿಸುವುದನ್ನು ದ್ವಿತೀಯ ಸಾಧನಗಳಲ್ಲಿ ನಿರ್ವಹಿಸಲಾಗುವುದಿಲ್ಲ.

Redmi 10A: ಬಜೆಟ್ ಪ್ರಿಯರನ್ನು ದಂಗಾಗಿಸಿದ ರೆಡ್ಮಿ 10A ಸ್ಮಾರ್ಟ್‌ಫೋನ್‌ ಮಾರಾಟ ಆರಂಭ

Follow us on

Related Stories

Most Read Stories

Click on your DTH Provider to Add TV9 Kannada