WhatsApp: ನೀವು ವಾಟ್ಸ್​ಆ್ಯಪ್ ಕಂಪ್ಯೂಟರ್​ನಲ್ಲಿ ಉಪಯೋಗಿಸ್ತೀರ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

WhatsApp Web: ವಾಟ್ಸ್​ಆ್ಯಪ್​ ಅನ್ನು ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಕೂಡ ಇದೆ.

WhatsApp: ನೀವು ವಾಟ್ಸ್​ಆ್ಯಪ್ ಕಂಪ್ಯೂಟರ್​ನಲ್ಲಿ ಉಪಯೋಗಿಸ್ತೀರ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
WhatsApp Web
TV9kannada Web Team

| Edited By: Vinay Bhat

Jun 25, 2022 | 1:34 PM

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್ ಇಂದು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎಂದರೆ ಬೆಳಗ್ಗೆ ಬೆಡ್​ನಿಂದ ಎಂದ ತಕ್ಷಣ ವಾಟ್ಸ್​ಆ್ಯಪ್​ನಲ್ಲಿ (WhatsApp) ಏನು ಬಂದಿದೆ ಎಂದು ನೋಡಿಯೋ ಮುಂದಿನ ಕೆಲಸ ಶುರು ಮಾಡುತ್ತಾರೆ. ಅಷ್ಟರ ಮಟ್ಟಿಗೆ ಇದು ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಆಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ವಾಟ್ಸ್​​ಆ್ಯಪ್​ ಕೂಡ ಬಳಕೆದಾರರ ಅನುಕೂಲಕರವಾಗುವಂತೆ ಹೊಸ ಹೊಸ ಫೀಚರ್​ಗಳುಳ್ಳ ಅಪ್ಡೇಟ್ ಅನ್ನು ನೀಡುತ್ತಲೇ ಬರುತ್ತಿದೆ. ಹೀಗಾಗಿ ​ ವಾಟ್ಸ್​ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಏಕೈಕ ಮೆಸೇಜಿಂಗ್ ಆ್ಯಪ್ (App) ಆಗಿದೆ. ವಾಟ್ಸ್​ಆ್ಯಪ್​ ಅನ್ನು ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಕೂಡ ಇದೆ.

ಹೌದು, ದಿನನಿತ್ಯ ಲ್ಯಾಪ್​ಟಾಪ್ ಅಥವಾ ಡೆಸ್ಕ್​ಟಾಪ್​ನಲ್ಲಿ ಕೆಲಸ ಮಾಡುವ ಅನೇಕರು ವಾಟ್ಸ್​ಆ್ಯಪ್ ವೆಬ್ ಅನ್ನು ಉಪಯೋಗಿಸಿಯೇ ಇರುತ್ತಾರೆ. ಆದರೆ, ಹೆಚ್ಚಿನವರಿಗೆ ವಾಟ್ಸ್​ಆ್ಯಪ್ ಅನ್ನು ವೆಬ್​ನಲ್ಲಿ ಬಳಕೆ ಮಾಡುವಾಗ ಅದರಲ್ಲಿರುವ ಶಾರ್ಟ್​ಕಟ್ ಕೀ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ವಾಟ್ಸ್ಆ್ಯಪ್ ವೆಬ್ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಪ್ರಮುಖವಾಗಿ ವಾಟ್ಸ್​​ಆ್ಯಪ್ ವೆಬ್​ನಲ್ಲಿ ಶಾರ್ಟ್‌ಕಟ್‌ ಕೀ ಬಳಸಿ ಉಪಯೋಗಿಸುವುದು ತುಂಬಾನೆ ಸುಲಭ. ಈ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಫಾಂಟ್ ಸೈಜ್‌ ಅನ್ನು ಎಡಿಟ್‌ ಮಾಡಬಹುದು. ಸ್ಟಿಕ್ಕರ್‌ಗಳು, ಜಿಐಎಫ್‌ಗಳು ಮತ್ತು ಎಮೋಜಿ ಸೇರದಂತೆ ಅನೇಕ ಪ್ರಯೋಜನ ವೇಗವಾಗಿ ಪಡೆಯಬಹುದು.

ರೋಚಕತೆ ಸೃಷ್ಟಿಸಿರುವ ನಥಿಂಗ್‌ ಫೋನ್‌ (1) ಪ್ರಿ ಆರ್ಡರ್​ಗೆ ದಿನಗಣನೆ: ಪಾಸ್ ಇದ್ದರಷ್ಟೆ ಬುಕ್ಕಿಂಗ್ ಸಾಧ್ಯ

ವಾಟ್ಸ್ಆ್ಯಪ್ ವೆಬ್ ನಲ್ಲಿ ಬಳಸಬಹುದಾದ ಶಾರ್ಟ್ ಕಟ್ ಕೀಗಳು:

ಪದ ಅಥವಾ ಪದಗುಚ್ಚವನ್ನು ಸರ್ಚ್ ಮಾಡಲು Ctrl + F ಒತ್ತಿರಿ

ಹೊಸ ಚಾಟ್ ಪ್ರಾರಂಭಿಸಲು, Ctrl + N ಒತ್ತಿರಿ

ಶಿಫ್ಟ್ + ಟ್ಯಾಬ್ ಬಟನ್ ಎಮೋಜಿಗಳನ್ನು ಫೋಕಸ್ ಮಾಡಲಿದೆ.

ಹೊಸ ಗುಂಪನ್ನು ಪ್ರಾರಂಭಿಸಲು, Ctrl + Shift + N ಒತ್ತಿರಿ

ನಿಮ್ಮ ಹಿಂದಿನ ಚಾಟ್​ಗೆ ಹೋಗಲು, Ctrl + Shift + ಅನ್ನು ಒತ್ತಿರಿ

ಮುಂದಿನ ಚಾಟ್​​ಗೆ ಹೋಗಲು, Ctrl + Shift + ಒತ್ತಿರಿ

ಚಾಟ್ ಅನ್ನು ಆರ್ಕೈವ್ ಮಾಡಲು, Ctrl + E ಒತ್ತಿರಿ

ಚಾಟ್ ಅನ್ನು ಮ್ಯೂಟ್ ಮಾಡಲು, Ctrl + Shift + M

ಓದುವ ಸ್ಥಿತಿಯನ್ನು ಬದಲಾಯಿಸಲು, Ctrl + Shift + U

ಚಾಟ್ ಅಳಿಸಲು, Ctrl + Del

ಪ್ರೊಫೈಲ್ ತೆರೆಯಲು, Ctrl + P

ಫಾಂಟ್ ಗಾತ್ರವನ್ನು ಹೆಚ್ಚಿಸಲು, Ctrl + = ಒತ್ತಿರಿ

ಫಾಂಟ್ ಗಾತ್ರವನ್ನು ಕಡಿಮೆ ಮಾಡಲು, Ctrl + ಒತ್ತಿರಿ

ಡೀಫಾಲ್ಟ್ ಗಾತ್ರಕ್ಕೆ ಹಿಂತಿರುಗಲು, Ctrl + 0

ಪಠ್ಯವನ್ನು ದಪ್ಪವಾಗಿಸಲು * text * ಬಳಸಿ

ಪಠ್ಯವನ್ನು ಇಟಲೈಸ್ ಮಾಡಲು _text_ ಬಳಸಿ

ಪಠ್ಯವನ್ನು ಹೊಡೆಯಲು ~ text ~

ಮೊನೊಸ್ಪೇಸ್ಡ್ ಫಾಂಟ್​ಗೆ ‘‘ ‘text’ ‘‘ ಬಳಸಿ

ಎಮೋಜಿಯನ್ನು ಸೇರಿಸಲು, ಕೊಲೊನ್ ಒತ್ತಿರಿ.

ಇದನ್ನೂ ಓದಿ

Amazon: 9,499 ರೂ. ವಿನ ರೆಡ್ಮಿ 9 ಆಕ್ಟೀವ್ ಫೋನ್ ಮೇಲೆ ಮತ್ತಷ್ಟು ಡಿಸ್ಕೌಂಟ್: ಇದು ಲಿಮಿಟೆಡ್ ಆಫರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada