ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಈ ಹೊಸ ಅಪ್ಡೇಟ್ನಲ್ಲಿ ನೀವು ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್ಗಳಲ್ಲಿ ಬಳಸಬಹುದಾಗಿದೆ. ಈ ಹಿಂದೆ ವಾಟ್ಸ್ಆ್ಯಪ್ ಅನ್ನು ಒಂದು ಡಿವೈಸ್ನಲ್ಲಿ ಮಾತ್ರ ಬಳಸಬಹುದಾಗಿತ್ತು. ಎರಡು ಮೊಬೈಲ್ನಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆ ಹೊಂದಿರುವ ಆಯ್ಕೆ ಇರಲಿಲ್ಲ. ಅದಾಗ್ಯೂ ವಾಟ್ಸ್ಆ್ಯಪ್ ವೆಬ್ ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್ನಲ್ಲಿ ಉಪಯೋಗಿಸಬಹುದಿತ್ತು. ಅಪ್ಡೇಟ್ನಲ್ಲಿ ವಾಟ್ಸ್ಆ್ಯಪ್ ಹಲವು ಡಿವೈಸ್ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸಿತ್ತು. ಆದರೆ, ಇದನ್ನು ಲಿಂಕ್ ಮಾಡಿದ ಬಳಿಕ ಅನ್ಲಿಂಕ್ ಮಾಡುವುದು ಹೇಗೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಹೌದು, ಈ ಮಲ್ಟಿಡಿವೈಸ್ ಫೀಚರ್ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ. ನಿಮಗಿನ್ನೂ ಈ ಬಹು-ಸಾಧನ ಫೀಚರ್ ಅನ್ನು ಬಳಸುವ ಆಯ್ಕೆ ಸಿಕ್ಕಿಲ್ಲ ಎಂದಾದರೆ ನಿಮ್ಮ ವಾಟ್ಸ್ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕಾಗುತ್ತದೆ. ಆ ಬಳಿಕ ಈ ಕೆಳಗಿನ ಹಂತಗಳನ್ನು ಬಳಸಿ ನಿಮ್ಮ ಸಾಧನಗಳನ್ನು ಹೇಗೆ ಲಿಂಕ್ ಮಾಡುವುದು ಎಂದು ತಿಳಿಯಿರಿ ನಂತರ ಅನ್ಲಿಂಕ್ ಮಾಡುವುದು ಹೇಗೆಂದು ನೋಡಿರಿ.
ಅನ್ಲಿಂಕ್ ಮಾಡಲು ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ತೆರೆದು ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಈಗ ನೀವು ಲಿಂಕ್ ಆದ ಡಿವೈಸ್ಗಳ ಪಟ್ಟಿಯನ್ನು ಕಾಣುತ್ತೀರಿ. ಯಾವ ಡಿವೈಸ್ ಅನ್ನು ಅನ್ಲಿಂಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗೌಟ್ ಆಯ್ಕೆಯನ್ನು ಒತ್ತಿರಿ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಲಿಂಕ್ ಮಾಡಲಾದ ಇತರೆ ಸಾಧನಗಳಲ್ಲಿ ವಾಟ್ಸ್ಆ್ಯಪ್ ಕೆಲವು ವೈಶಿಷ್ಟ್ಯಗಳನ್ನು ಬೆಂಬಲಿಸುವುದಿಲ್ಲ. ವಾಟ್ಸ್ಆ್ಯಪ್ ಹೇಳಿರುವ ಪ್ರಕಾರ, ಬಹು-ಸಾಧನ ಬೆಂಬಲ (multi-device support) ವೈಶಿಷ್ಟ್ಯದ ಮೂಲಕ ಲಿಂಕ್ ಆಗಿರುವ ಸಾಧನಗಳಲ್ಲಿ ಲೈವ್ ಸ್ಥಳವನ್ನು ವೀಕ್ಷಿಸಲು ಸಾಧ್ಯವಿಲ್ಲ. ಬ್ರಾಡ್ಕಾಸ್ಟ್ ಲಿಸ್ಟ್ ರಚಿಸುವುದು ಮತ್ತು ವೀಕ್ಷಿಸುವುದು ಅಥವಾ ವಾಟ್ಸ್ಆ್ಯಪ್ ವೆಬ್ನಿಂದ ಲಿಂಕ್ ಪೂರ್ವವೀಕ್ಷಣೆಗಳೊಂದಿಗೆ ಸಂದೇಶಗಳನ್ನು ಕಳುಹಿಸುವುದನ್ನು ದ್ವಿತೀಯ ಸಾಧನಗಳಲ್ಲಿ ನಿರ್ವಹಿಸಲಾಗುವುದಿಲ್ಲ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ