WhatsApp: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಬೇರೆಯವರು ಓದುತ್ತಿರಬಹುದು: ಹೇಗೆ ತಿಳಿಯುವುದು?, ಇಲ್ಲಿದೆ ಟ್ರಿಕ್

WhatsApp Tips: ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್​ಆ್ಯಪ್​​ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಹಾಗಾದ್ರೆ ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

  • TV9 Web Team
  • Publish Date - 3:46 pm, Tue, 11 January 22

ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​​ (WhatsApp) ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ಫೇಸ್​ಬುಕ್ (Facebook), ಇನ್​ಸ್ಟಾಗ್ರಾಮ್ (Instagram) ರೀತಿಯ ಎಮೋಜಿ ರಿಯಾಕ್ಷನ್ ಫೀಚರ್, ಲಾಗೌಟ್ ಫೀಚರ್, ಫೋಟೋ ಎಡಿಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ವಾಟ್ಸ್​ಆ್ಯಪ್​​ನಲ್ಲಿ ಮಲ್ಟಿ ಡಿವೈಸ್‌ ಸಪೋರ್ಟ್‌ ಅವಕಾಶ ನೀಡಿರುವುದು ಗೊತ್ತೇ ಇದೆ. ಇದರಿಂದ ಏಕಕಾಲಕ್ಕೆ ಎರಡು ಮೂರು ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಖಾತೆ ಬಳಕೆ ಮಾಡಬಹುದು. ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ ಇದ್ದರೂ ಕೆಲವೊಮ್ಮೆ ವಾಟ್ಸ್​ಆ್ಯಪ್​​ ಹ್ಯಾಕ್‌ (WhatsApp Hack) ಆಗುವ ಸಾಧ್ಯತೆಗಳು ಇರುತ್ತವೆ. ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್​ಆ್ಯಪ್​​ ಚಾಟ್ (WhatsApp Chat) ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.

ವಾಟ್ಸ್​ಆ್ಯಪ್​​ ಖಾತೆಯನ್ನು ಇತರೆ ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೊಂದು ಅನುಕೂಲಕರ ಫೀಚರ್ ಆಗಿದ್ದರೂ ಕೆಲವೊಮ್ಮೆ ಸಮಸ್ಯೆ ಎನಿಸಬಹುದು. ಕಂಪ್ಯೂಟರ್​ಗಳಲ್ಲಿಯೂ ಈಗೀಗ ವಾಟ್ಸ್​ಆ್ಯಪ್​​ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್​ಆ್ಯಪ್​​ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸ್​ಆ್ಯಪ್​​ ಹ್ಯಾಕ್ ಆಗುವ ಚಾನ್ಸ್‌ ಇರುತ್ತವೆ. ಹೀಗೆ ಹ್ಯಾಕ್ ಆದ ವಾಟ್ಸ್​ಆ್ಯಪ್​​ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್‌ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸ್​ಆ್ಯಪ್​​ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು

  • ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ತೆರೆಯಿರಿ
  • ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಸೆಲೆಕ್ಟ್ ಮಾಡಿರಿ
  • ಬಳಿಕ ಅಲ್ಲಿ ಕಾಣುಸಿವ ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್​ಆ್ಯಪ್​​ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.

ಬಾರ್‌ಕೋಡ್‌ ಸ್ಕ್ಯಾನ್‌

ಕೆಲವರಿಗೆ ಬೇರೆಯವರ ವಾಟ್ಸ್​ಆ್ಯಪ್​​ ಇಣುಕಿ ನೋಡುವ ಕುತೂಹಲ ಇರುತ್ತದೆ. ಅಂತಹವರು ಇತರರ ವಾಟ್ಸ್​ಆ್ಯಪ್​​ ಮೆಸೆಜ್ ಓದಲು ಕಳ್ಳ ಮಾರ್ಗ ಹುಡುಕುತ್ತಾರೆ. ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ವಾಟ್ಸ್​ಆ್ಯಪ್​​ ಲ್ಯಾಪ್‌ಟಾಪ್‌ಗೆ ಅಥವಾ ಇತರೆ ಡಿವೈಸ್‌ನಲ್ಲಿ ನಕಲು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವು ಬಳಕೆದಾರರು ತಮ್ಮ ಫೋನಿಗೆ ಯಾವುದೇ ಲಾಕ್‌ ಇಟ್ಟಿರುವುದಿಲ್ಲ. ಹಾಗೆಯೇ ವಾಟ್ಸ್​ಆ್ಯಪ್​​ ಆಪ್ ತೆರೆಯಲು ಸಹ ಯಾವುದೇ ಪಾಸ್‌ವರ್ಡ್‌ ಇಟ್ಟಿರುವುದಿಲ್ಲ. ಇಂತಹ ಖಾತೆಗಳಿಗೆ ಸುಲಭವಾಗಿ ಇತರರು ಹ್ಯಾಕ್ ಮಾಡಬಹುದಾಗಿದೆ. ಅವರ ವಾಟ್ಸ್​ಆ್ಯಪ್​​ ಖಾತೆ ತೆರೆದು ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಬಾರ್‌ಕೋಡ್ ಸ್ಕ್ಯಾನ್ ಮೂಲಕ ಇನ್ನೊಂದು ಡಿವೈಸ್‌ನಲ್ಲಿ ನಕಲು ವಾಟ್ಸ್​ಆ್ಯಪ್​​ ತೆರೆದುಕೊಳ್ಳುವ ಚಾನ್ಸ್‌ ಇರುತ್ತವೆ.

ಹ್ಯಾಕ್ ತಡೆಯಲು ಏನು ಮಾಡಬೇಕು?

ವಾಟ್ಸ್​ಆ್ಯಪ್​​ ಹ್ಯಾಕ್ ಆಗುವುದನ್ನು ತಡೆಯಲು ಇತರೆ ಡಿವೈಸ್‌ಗಳಲ್ಲಿ ನೀವು ತೆರೆದಿರುವ ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಬಹುದು. ಹೀಗೆ ಮಾಡಿದರೇ ಮೂರನೇ ವ್ಯಕ್ತಿಯು ನಿಮ್ಮ ಖಾತೆಗೆ ಪ್ರವೇಶವನ್ನು ತಕ್ಷಣ ಕಳೆದುಕೊಳ್ಳುತ್ತಾನೆ. ಈ ಸಂಗತಿಗಳು ಮತ್ತೆ ಸಂಭವಿಸುವುದನ್ನು ತಪ್ಪಿಸಲು, ಅಪ್ಲಿಕೇಶನ್ ಲಾಕ್‌ನೊಂದಿಗೆ ವಾಟ್ಸ್​ಆ್ಯಪ್​​ ಅನ್ನು ಕಾನ್ಫಿಗರ್ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಈ ರೀತಿಯಾಗಿ, ಯಾರಾದರೂ ನಿಮ್ಮ ಫೋನ್ ಪಡೆದರೂ ಸಹ, ಅವರು ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದನ್ನು ವಾಟ್ಸ್​ಆ್ಯಪ್​​ ವೆಬ್ ಮೂಲಕ ಪಿಸಿ ಅಥವಾ ಇತರ ಅಪ್ಲಿಕೇಶನ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ.

Vivo Y33T: ವಿವೋದಿಂದ 10 ದಿನಗಳೊಳಗೆ 4 ಫೋನ್ ಬಿಡುಗಡೆ: ಭಾರತದಲ್ಲಿ ವಿವೋ Y33T ಸ್ಮಾರ್ಟ್‌ಫೋನ್‌ ಲಾಂಚ್

Realme 9i: ಭರ್ಜರಿ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್​ನ ರಿಯಲ್‌ ಮಿ 9i ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

Follow Us

Ads By Adgebra

Next Article