ಕೋವಿಡ್ ಬಂದ ಮೇಲಿಂದ ಬಹುತೇಕರು ಮನೆಯಲ್ಲಿಯೇ ಕುಳಿತು ತಮ್ಮ ಕಚೇರಿಯ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮನೆಯಲ್ಲಿ ಈ ವೈ-ಫೈ ರೂಟರ್‌ಗಳನ್ನು (Wi-Fi Router) ಹಾಕಿಸಿಕೊಂಡು, ಡಾಂಗಲ್ ಮೂಲಕ ಅಥವಾ ಮೊಬೈಲ್ನಿಂದಲೇ ಹಾಟ್ಸ್ಪಾಟ್ ಕನೆಕ್ಟ್ ಮಾಡಿಕೊಂಡು ವರ್ಕ್ ಮಾಡುತ್ತಿದ್ದಾರೆ. ಈಗಂತೂ ವೈ-ಫೈ ಬಹುತೇಕರ ಮನೆಗೆ ಬೇಕಾದ ಅವಶ್ಯಕವಾದ ಗ್ಯಾಜೆಟ್ ಆಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ನೀವು ಇಂಟರ್‌ನೆಟ್‌ನಲ್ಲಿ (Internet) ಚಲನಚಿತ್ರ ನೋಡಲು, ಮಲ್ಟಿಪ್ಲೇಯರ್ ಆಟ ಆಡಲು ಅಥವಾ ಕಚೇರಿಯ ಕಾನ್ಫರೆನ್ಸ್ ಕರೆಗಳಲ್ಲಿ ಭಾಗಿಯಾಗಲು ಹೀಗೆ ಎಲ್ಲದಕ್ಕೂ ವೈ-ಫೈ ಇರುವುದು ಮುಖ್ಯವಾಗಿದೆ. ವೈ-ಫೈ ಸಂಪರ್ಕ ಕಲ್ಪಿಸಲಿ ಮತ್ತೊಂದು ಪ್ರಮುಖ ಕಾರಣ ವೇಗದ ಇಂಟರ್ನೆಟ್‌ಗೆ ಪೂರಕವಾಗಿರಬೇಕೆಂದು. ಆದರೆ ಕೆಲವೊಮ್ಮೆ ವೈ-ಫೈ ವೇಗ ಸ್ಲೋ ಆಗಿ ಬಿಡುತ್ತದೆ. ಅನೇಕ ಬಾರಿ ನೆಟವರ್ಕ್ (Network) ಸಮಸ್ಯೆಯಿಂದಲೂ ರೂಟರ್ ವೇಗದಲ್ಲಿ ಕಡಿತವಾಗಿರುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ವೈಯರ್‌ಲೆಸ್ ಸಾಧನಗಳ ಬಳಕೆಗೆ ರೂಟರ್ ವೈಫೈ ಬೂಸ್ಟ್ ಹೆಚ್ಚಿಸಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.
ಕೋಣೆಯ ಮಧ್ಯಭಾಗದಲ್ಲಿ ಇರಿಸಿ: ನಿಮ್ಮ ವೈ-ಫೈ ರೌಟರ್ ಕೇವಲ ಒಂದು ದಿಕ್ಕಿನಲ್ಲಿ ಸಂಕೇತಗಳನ್ನು ಕಳುಹಿಸುವುದಿಲ್ಲ, ಅದು ಸುತ್ತಲೂ ಸಂಕೇತಗಳನ್ನು ರವಾನಿಸುತ್ತದೆ. ಆದ್ದರಿಂದ, ವೈ-ಫೈ ರೂಟರ್‌ನ ಸೂಕ್ತ ಸ್ಥಾನವು ಕೋಣೆಯ ಮಧ್ಯಭಾಗದಲ್ಲಿ ಇರಿಸುವುದಾಗಿದೆ. ನೀವು ವೈ-ಫೈ ರೂಟರ್ ಅನ್ನು ಯಾವುದೋ ಕೋಣೆಯ ಮೂಲೆಯಲ್ಲಿ ಇರಿಸಿದರೆ, ಗಮನಾರ್ಹ ಪ್ರಮಾಣದ ಕವರೇಜ್ ವ್ಯರ್ಥವಾಗುತ್ತದೆ. ಇದರಿಂದ ಮೊಬೈಲ್ಗೆ ವೈಫೈ ಕನೆಕ್ಟ್ ಮಾಡಿದಾಗ ಸರಿಯಾಗಿ ಕೆಲಸ ಮಾಡುವುದಿಲ್ಲ.
ರೂಟರ್ ಏಂಟಿನಾ ಬಳಕೆ ಉತ್ತಮ: ಹೌದು, ವೈಫೈ ರೊಟರ್‌ಗೆ ಆಂತರಿಕ ಏಂಟಿನಾ ಸೌಲಭ್ಯ ಇದ್ದರೆ. ಅದಕ್ಕೆ ಹೆಚ್ಚುವರಿ ಬಾಹ್ಯ ಏಂಟಿನಾ ವ್ಯವಸ್ಥೆ ಮಾಡಿಕೊಳ್ಳಿ ಇದರಿಂದ ಉತ್ತಮ ನೆಟವರ್ಕ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ಆಂತರಿಕ ಏಂಟಿನಾ ರೊಟರ್‌ಗಳು ಉತ್ತಮ ಸಿಗ್ನಲ್ ಕವರೇಜ್ ನೀಡುತ್ತವೆ. ಅದ್ಯಾಗೂ ವೇಗದ ಸಿಗ್ನಲ್ ಅಗತ್ಯ ಇದ್ದರೆ ಎಂಟನಾ ಅಳವಡಿಸಿಕೊಳ್ಳಿ.
ಇದರಿಂದ ದೂರವಿರಿಸಿ: ನಿಮ್ಮ ಮನೆಯಲ್ಲಿರುವ ವೈ-ಫೈ ರೂಟರ್ ಅನ್ನು ಟಿವಿ, ರೆಫ್ರಿಜರೇಟರ್ ಮತ್ತು ಇತರೆ ಉಪಕರಣಗಳಾದ ಬೇಬಿ ಮಾನಿಟರ್, ಬ್ಲೂಟೂತ್ ಹೆಡ್ ಸೆಟ್‌ಗಳಿಂದ ದೂರವಿರಿಸಿ. ಇವುಗಳನ್ನು ಹತ್ತಿರದಲ್ಲಿಇರಿಸುವುದು ಸಿಗ್ನಲ್‌ಗೆ ಅಡ್ಡಿಪಡಿಸುವುದರಿಂದ ವೈ-ಫೈ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.
ಪಾಸ್‌ವರ್ಡ್ ಕಾಯ್ದುಕೊಳ್ಳುವುದು: ವೈಫೈ ರೂಟರ್ ವೇಗ ಹೆಚ್ಚಿಸುವುದು ಬಳಕೆ ಮಾಡುವುದು ಒಂದೆಡೆಯಾದರೇ. ಅದರ ಪಾಸ್‌ವರ್ಡ್ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಯಾರೊಂದಿಗೂ ವೈ ಫೈ ರೂಟರ್ ಪಾಸ್‌ವರ್ಡ್ ಶೇರ್ ಮಾಡಬೇಡಿ. ಇದರ ಜೊತೆಗೆ ಸರಿಯಾಗಿ ಮತ್ತು ಹೆಚ್ಚು ನೆಟವರ್ಕ್ ಕವರೇಜ್ ಇರುವ ಸ್ಥಳದಲ್ಲಿ ವೈ-ಫೈ ರೂಟರ್ ಇದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ಸರಿಯಾದ ಸಿಗ್ನಲ್ ಇರುವ ಸ್ಥಳ ಗುರುತುಮಾಡಿಕೊಳ್ಳಿ ಮತ್ತು ಸಿಗ್ನಲ್‌ಗಳಿಗೆ ಅಡೆತಡೆಗಳಿದ್ದರೇ ಸರಿ ಮಾಡಿ.
ಏರ್ ವೇವ್ ತಪ್ಪಿಸಿ: ಬಹುತೇಕ ಪ್ರತಿಯೊಂದು ವೈ-ಫೈ ರೂಟರ್ 2.4 ಗಿಗಾ ಹರ್ಟ್ಜ್ ವೈರ್‌ಲೆಸ್ ಬ್ಯಾಂಡ್ ಬಳಸುತ್ತದೆ ಮತ್ತು ಬ್ಲೂಟೂತ್ ಸ್ಪೀಕರ್‌ಗಳು ಹಾಗೂ ಬೇಬಿ ಮಾನಿಟರ್‌ಗಳಂತಹ ಇತರ ಸಾಮಾನ್ಯ ಸಾಧನಗಳು ಸಹ ಏರ್ ವೇವ್‌ಗಳನ್ನು ಬಳಸುತ್ತವೆ. ಸಾಧನಗಳು ನಿಮ್ಮ ರೂಟರ್‌ನ ಸಿಗ್ನಲ್‌ಗೆ ಅಡ್ಡಿಪಡಿಸಬಹುದು. ಆದ್ದರಿಂದ, ನೀವು ನಿಮ್ಮ ರೂಟರ್ ಅನ್ನು ಅಂತಹ ಯಾವುದೇ ಉಪಕರಣಗಳ ಬಳಿ ಇಡಬಾರದು.
ಇವೆಲ್ಲದರ ಜೊತೆಗೆ ವೈಫೈ ರೊಟರ್‌ಗಳ ವೇಗ ಹೆಚ್ಚಿಸಲು ಅಥವಾ ಸರಿಯಾಗಿ ಸಿಗ್ನಲ್ ಕವರೇಜ್ ಆಗುತ್ತಿಲ್ಲ ಎನ್ನುವುದಾದರೇ ರೂಟರ್ ಒಮ್ಮ ರೀ ಸ್ಟಾರ್ಟ್ ಮಾಡಿ. ರೀ ಸ್ಟಾರ್ಟ್ ಅಥವಾ ರೀ ಬೂಟ್ ಮಾಡುವುದರಿಂದ ರೂಟರ್ ಕಾರ್ಯವೈಖರಿ ಉತ್ತಮವಾಗಲಿದೆ.
LAVA Z21: ಈ ಸ್ಮಾರ್ಟ್ಫೋನ್ ಬೆಲೆ ಕೇವಲ 5 ಸಾವಿರ ರೂ.: ಇದರಲ್ಲಿ ಫೀಚರ್ಸ್ ಮಾತ್ರ ವಾವ್…