World Television Day 2024 : ಟೆಲಿವಿಷನ್ ಕಂಡು ಹಿಡಿದ ವ್ಯಕ್ತಿ ಯಾರು? ಭಾರತದಲ್ಲಿ ದೂರದರ್ಶನ ಅಭಿವೃದ್ಧಿಯಾದದ್ದು ಹೇಗೆ? ಇಲ್ಲಿದೆ ಮಾಹಿತಿ

ಸಂವಹನದಲ್ಲಿ ದೂರದರ್ಶನವು ಪ್ರಮುಖ ಪಾತ್ರವಹಿಸಿದ್ದು ಇದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಲು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮಹತ್ತರ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ದೂರದರ್ಶನ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Television Day 2024 : ಟೆಲಿವಿಷನ್ ಕಂಡು ಹಿಡಿದ ವ್ಯಕ್ತಿ ಯಾರು? ಭಾರತದಲ್ಲಿ ದೂರದರ್ಶನ ಅಭಿವೃದ್ಧಿಯಾದದ್ದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 10:19 AM

ಇಂದು ಅಂತರ್ಜಾಲದಿಂದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಲ್ಲೇ ತಮ್ಮ ಸಮಯವನ್ನು ಕಳೆಯುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ದೂರದರ್ಶನವು ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎನ್ನುವುದು ಖುಷಿಯ ವಿಚಾರವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಟಿವಿ ನೋಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಈ ಟೆಲಿವಿಷನ್ ಮನರಂಜನೆ, ಶಿಕ್ಷಣ, ಸುದ್ದಿ ಮತ್ತು ರಾಜಕೀಯಕ್ಕೆ ಸೇರಿದಂತೆ ಹಲವಾರು ವಿಷಯಗಳ ಕುರಿತಾದ ಮಾಹಿತಿಯನ್ನು ಒದಗಿಸುತ್ತ ಬಂದಿದೆ. ಕಪ್ಪು ಬಿಳುಪಿನ ಪರದೆಯಿಂದ ಆರಂಭವಾದ ಈ ಪಯಣ ಇಂದು ಸ್ಮಾರ್ಟ್ ಟಿವಿ ಹಂತಕ್ಕೆ ತಲುಪಿದ್ದು, ಇದರ ಮಹತ್ವವಂತೂ ಕಡಿಮೆಯಾಗಿಲ್ಲ. ದೂರದರ್ಶನವು ವ್ಯಕ್ತಿಗಳ ಮೇಲೆ ಬೀರುವ ಮಹತ್ವದ ಪ್ರಭಾವದ ಬಗ್ಗೆ ತಿಳಿಸಲು ಹಾಗೂ ಸಂವಹನ, ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಪಾತ್ರದ ಬಗ್ಗೆ ಮಾಹಿತಿ ನೀಡಲು ವಿಶ್ವ ದೂರದರ್ಶನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ದೂರದರ್ಶನ ದಿನದ ಇತಿಹಾಸ

1927 ರಲ್ಲಿ ಅಮೇರಿಕನ್ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್ವರ್ತ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ದೂರದರ್ಶನವನ್ನು ಕಂಡುಹಿಡಿದರು. ಆ ಬಳಿಕ ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ರಚಿಸಿದ ಮೊದಲ ಮೆಕ್ಯಾನಿಕಲ್ ಟಿವಿ ಸ್ಟೇಷನ್ W3XK ತನ್ನ ಮೊದಲ ಪ್ರಸಾರವನ್ನು ಪ್ರಸಾರ ಮಾಡಿತು. ಟಿವಿಯ ಪ್ರಾಮುಖ್ಯತೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಅದು ಹೇಗೆ ಭಾಗವಹಿಸುತ್ತದೆ ಎಂಬುದನ್ನು ಚರ್ಚಿಸಲು 1996 ರಲ್ಲಿ 51/205 ನಿರ್ಣಯದ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21ನ್ನು ವಿಶ್ವ ದೂರದರ್ಶನ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತಿದೆ

ಟೆಲಿವಿಷನ್‌ ಕಂಡುಹಿಡಿದದ್ದು ಯಾರು?

ಅಮೆರಿಕದ ಇದೋದ ಗ್ರಾಮದ ಹವ್ಯಾಸಿ ಸಂಶೋಧಕ ಫಿಲೊ ಟೇಲರ್‌ ಫ್ರಾನ್ಸ್‌ವರ್ತ್‌ ಟೆಲಿವಿಷನ್‌ ಅನ್ನು ಮೊತ್ತ ಮೊದಲ ಬಾರಿಗೆ ಆವಿಷ್ಕರಿಸಿದ್ದರು. ಹಲವಾರು ಜನರ ಆರ್ಥಿಕ ನೆರವಿನಿಂದ ಫಿಲೊ 1934 ಆಗಸ್ಟ್‌ 25ರಂದು ಎಲೆಕ್ಟ್ರಾನಿಕ್‌ ಟೆಲಿವಿಷನ್‌ ಸೆಟ್‌ ಕಂಡು ಹಿಡಿದು, ಅದರಲ್ಲಿ ತಮ್ಮ ಪತ್ನಿಯ ಭಾವಚಿತ್ರವನ್ನು ಪ್ರಸಾರ ಮಾಡಿದ್ದರು. ಆ ಬಳಿಕ ಜಾನ್‌ ಲಾಗಿ ಬೇರ್ಡ್‌ ಎಂಬುವರು 1925ರಲ್ಲಿ ಡುಮ್ಮ ಗಾತ್ರದ ಟೆಲಿವಿಷನ್‌ ಕಂಡು ಹಿಡಿದು ಅದನ್ನು ಟೆಲಿವಿಸರ್‌ ಎಂದು ಕರೆದರು. 1930ರಲ್ಲಿ ಸಣ್ಣ ಗಾತ್ರ ಪರದೆಯ ಮತ್ತಷ್ಟು ಅತ್ಯಾಧುನಿಕವಾದ ಟೆಲಿವಿಷನ್‌ ಅಭಿವೃದ್ಧಿಪಡಿಸಿದರು. ಹೀಗೆ ಜನಪ್ರಿಯಗೊಳ್ಳುತ್ತಿದ್ದಂತೆ ಸಂಶೋಧಕರು ಆಧುನಿಕ ತಂತ್ರಜ್ಞಾನದೊಂದಿಗೆ ಟೆಲಿವಿಷನ್‌ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಮೌನ ಒಳ್ಳೆಯದು ಆದರೆ ಈ ವಿಷಯಗಳಲ್ಲಿ, ಇದು ಅಪಾಯಕಾರಿ ಎನ್ನುತ್ತಾರೆ ಚಾಣಕ್ಯರು

ಭಾರತದಲ್ಲಿ ದೂರದರ್ಶನ ಅಭಿವೃದ್ಧಿಯಾದದ್ದು ಹೇಗೆ?

ಭಾರತದಲ್ಲಿ ಪ್ರಾಯೋಗಿಕ ಆಧಾರದ ಮೇಲೆ 1959 ಸೆಪ್ಟೆಂಬರ್‌ 15ರಂದು ಟೆಲಿವಿಷನ್‌ ಕಾರ‍್ಯಕ್ರಮವನ್ನು ಆಲ್‌ ಇಂಡಿಯಾ ರೇಡಿಯೊದ ಸಹಭಾಗಿತ್ವದೊಂದಿಗೆ ಪ್ರಾರಂಭಿಸಿತು. ವಾರದಲ್ಲಿ ಮೂರು ದಿನ ಮಾತ್ರ ಕಾರ್ಯಕ್ರಮಗಳು ಸೀಮಿತವಾಗಿತ್ತು. 1965ರಲ್ಲಿ ದಿನಕ್ಕೆ ಒಂದು ಗಂಟೆಯಂತೆ ಪ್ರತಿದಿನ ಕಾರ‍್ಯಕ್ರಮ ಪ್ರಸಾರ ಮಾಡಲಾಗುತಿತ್ತು. 1972-1982ರ ಅವಧಿಯಲ್ಲಿ ಈ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಗಳಾದವು.ಪ್ರಾರಂಭದಲ್ಲಿ ಹೊಸದಿಲ್ಲಿಯ ಸೀಮಿತ ಪ್ರದೇಶಗಳಷ್ಟೇ ದೂರದರ್ಶನ ಕಾರ್ಯಕ್ರಮಗಳು ಪ್ರಸಾರವಾಗುತ್ತಿತ್ತು. ಆ ಬಳಿಕ ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ ಮತ್ತು ರಾಜಸ್ಥಾನಕ್ಕೆ ವಿಸ್ತಾರಗೊಂಡವು. 1976ರಲ್ಲಿ ಟೆಲಿವಿಷನ್‌ ಪ್ರಸಾರವು ಆಲ್‌ ಇಂಡಿಯಾ ರೇಡಿಯೊದಿಂದ ಪ್ರತ್ಯೇಕಗೊಂಡು ಸ್ವತಂತ್ರ ಸಂಸ್ಥೆಯಾಗಿ (ದೂರದರ್ಶನ) ರೂಪುಗೊಂಡಿತು. ತದನಂತರದಲ್ಲಿ ಹಂತಹಂತವಾಗಿ ಅಭಿವೃದ್ಧಿ ಕಂಡು, ಇದೀಗ ದಿನದ 24 ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಲೆಕ್ಕವಿಲ್ಲದಷ್ಟು ಚಾನೆಲ್ ಗಳು ಬಂದಿವೆ.

ವಿಶ್ವ ದೂರದರ್ಶನ ದಿನದ ಮಹತ್ವ ಹಾಗೂ ಆಚರಣೆ

ಇಂದು ಮಾನವನ ಜೀವನದಲ್ಲಿ ದೂರದರ್ಶನದ ಪಾತ್ರ ಬಹುಮುಖ್ಯವಾಗಿದೆ. ಟೆಲಿವಿಷನ್ ಮನರಂಜನೆಗೆ ಮೂಲ ಸೀಮಿತವಾಗಿಲ್ಲ, ದೇಶ ವಿದೇಶಗಳಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ದೂರದರ್ಶನದ ಆವಿಷ್ಕಾರ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದು ವಹಿಸುವ ಪಾತ್ರವನ್ನು ಗುರುತಿಸಲು ವಿಶ್ವ ದೂರದರ್ಶನ ದಿನವನ್ನು ಸ್ಮರಿಸಲಾಗುತ್ತದೆ. ಮುದ್ರಣ ಮಾಧ್ಯಮ, ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೂರದರ್ಶನದ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರಹಗಾರರು ಹಂಚಿಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಉಪನ್ಯಾಸ ಕಾರ‍್ಯಕ್ರಮಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ