ಮೈಸೂರು: ನಗರದಲ್ಲಿ ಯುವತಿಗೆ ಚಾಕು ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಯುವತಿ ಅಶ್ವಿನಿಯೇ ಆರೋಪಿ ಗಗನ್ಗೆ ಕೊಲೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ನವೆಂಬರ್ 15ರಂದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಗಗನ್ ಎಂಬಾತ ತನ್ನ ಪ್ರೇಯಸಿ ಅಶ್ವಿನಿಗೆ ಚಾಕು ಇರಿದಿದ್ದ. ಇಬ್ಬರೂ ಸುಮಾರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಅಶ್ವಿನಿ ಮದುವೆಗೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಗಗನ್ ಆಕೆಗೆ ಚಾಕು ಇರಿದಿದ್ದ ಎಂದು ಹೇಳಲಾಗಿತ್ತು.
ಆದರೆ ಇದೀಗ, ಇರಿತಕ್ಕೆ ಒಳಗಾದ ಯುವತಿಯೇ ಲವರ್ ಬಾಯ್ ಕೊಲೆ ಬೆದರಿಕೆ ಹಾಕಿದ್ದಳು ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅಶ್ವಿನಿಯನ್ನು ಕಂಡ ಗಗನ್ಗೆ ಭೀತಿ ಶುರುವಾಯ್ತಂತೆ. ಇವಳು ಬದುಕಿದ್ದರೆ ತನ್ನನ್ನು ಸಾಯಿಸುತ್ತಾಳೆಂಬ ಭಯ ಹುಟ್ಟಿಕೊಂಡಿತ್ತಂತೆ. ಹೀಗಾಗಿ, ಯುವತಿಗೆ ಚಾಕು ಇರಿದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ.
ಸದ್ಯ, ಅಶ್ವಿನಿ ಆಸ್ಪತ್ರೆಯಲ್ಲಿದ್ದರೆ ಗಗನ್ ಜೈಲುಪಾಲು. ಈ ನಡುವೆ, ಲವ್ ಕಂ ಚಾಕು ಇರಿತ ಕಹಾನಿಯ ತನಿಖೆಯನ್ನು ಲಕ್ಷ್ಮೀಪುರಂ ಪೊಲೀಸರು ಮುಂದುವರಿಸಿದ್ದಾರೆ.