BJP ರಾಷ್ಟ್ರೀಯ ಯುವಾ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಯುವಾ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕಗೊಳಿಸಿ ಆದೇಶ ನೀಡಲಾಗಿದೆ. ಹಾಗೂ ಬಿ.ಎಲ್. ಸಂತೋಷ್, ಸಂಘಟನೆಯ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಆಗಿ ಕಾರ್ಯ ಮುಂದುವರಿಸಲಿದ್ದಾರೆ. ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ಚಂದ್ರಶೇಖರ್ ನೇಮಕ ಆಗಿದ್ದಾರೆ.

ಜೆ.ಪಿ.ನಡ್ಡಾ ಅಧ್ಯಕ್ಷರಾದ ಬಳಿಕ ಹೊಸ ಪದಾಧಿಕಾರಿಗಳ ತಂಡ ರಚಿಸಲಾಗಿದೆ. ಕರ್ನಾಟಕ ಉಸ್ತುವಾರಿಯಾಗಿ ಪ್ರಧಾನ‌ ಕಾರ್ಯದರ್ಶಿ ಆಗಿದ್ದ ಪಿ.ಮುರಳೀಧರ್ ರಾವ್​ಗೆ ಹೊಸ ತಂಡದಲ್ಲಿ ಸ್ಥಾನ ಇಲ್ಲ. ಹೀಗಾಗಿ ಕರ್ನಾಟಕ ಬಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಆಗಿ ಹೊಸಬರ ನೇಮಕ ಅನಿವಾರ್ಯ. ಪಿ. ಮುರಳೀಧರ್ ರಾವ್​ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್ ನೀಡಲಾಗಿದೆ.

Related Tags:

Related Posts :

Category:

error: Content is protected !!