ಭಾರತದ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಶಾಕ್, ಮತ್ತಷ್ಟು ಹೆಚ್ಚಾಗಲಿದೆ ನಿರುದ್ಯೋಗ

ಒಂದ್ಕಡೆ ಏರುತ್ತಿರುವ ಸಾಲದ ಮೊತ್ತ. ಮತ್ತೊಂದ್ಕಡೆ ಸಾವಿರಾರು ಕೋಟಿ ದಂಡ ಪಾವತಿಸಬೇಕಾದ ಅನಿವಾರ್ಯತೆ. ಅಂದಹಾಗೆ ದೇಶದ ಟೆಲಿಕಾಂ ಕಂಪನಿಗಳು ಮಾಡಿಕೊಂಡಿರೋ ಎಡವಟ್ಟು, ಅದೇ ಸಂಸ್ಥೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ನಿರುದ್ಯೋಗ ಸಮಸ್ಯೆಯನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ.

ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಖಾಸಗಿ ಟೆಲಿಕಾಂ ಸಂಸ್ಥೆಗಳು. ಈಗ ಬಾಗಿಲು ಮುಚ್ಚುವ ಹಂತ ತಲುಪಿವೆ. ಇದು ಟೆಲಿಕಾಂ ಸಂಸ್ಥೆಗಳಿಗೆ ಮಾತ್ರ ತೊಂದ್ರೆ ಉಂಟುಮಾಡ್ತಿಲ್ಲ. ಆದರ ಜೊತೆಗೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆಗೂ ನಾಂದಿ ಹಾಡುತ್ತಿದೆ.

ಟೆಲಿಕಾಂ ಸಂಸ್ಥೆಗಳ ಎಡವಟ್ಟು, ಭಾರತದಲ್ಲಿ ಮತ್ತಷ್ಟು ನಿರುದ್ಯೋಗ!?
ಅಂದಹಾಗೆ ಟೆಲಿಕಾಂ ಕಂಪನಿಗಳಿಗೆ ಎಜಿಆರ್ ಮೊತ್ತವಾಗಿ ಕೇಂದ್ರ ಸರ್ಕಾರಕ್ಕೆ ₹92 ಸಾವಿರ ಕೋಟಿ ಪಾವತಿ ಮಾಡುವಂತೆ ಸುಪ್ರೀಂ ಸೂಚಿಸಿತ್ತು. ಆದರೆ ಅದನ್ನು ಪಾಲಿಸದ ಟೆಲಿಕಾಂ ಕಂಪನಿಗಳಿಗೆ ಬಡ್ಡಿ ಸಮೇತ ₹1.47 ಲಕ್ಷ ಕೋಟಿ ಪಾವತಿಸಲು ಸೂಚಿಸಲಾಗಿದೆ. ನಷ್ಟದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಟೆಲಿಕಾಂ ಕಂಪನಿಗಳನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಈ ಮಧ್ಯೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವೋಡಾಫೋನ್ ಹಾಗೂ ಐಡಿಯಾ 11,700 ಜನರಿಗೆ ನೇರ ಉದ್ಯೋಗ, 1 ಲಕ್ಷ ಜನಕ್ಕೆ ಪರೋಕ್ಷ ಉದ್ಯೋಗ ನೀಡಿದೆ. ವೋಡಾಪೋನ್ ಐಡಿಯಾ ಬಾಗಿಲು ಮುಚ್ಚಿದ್ರೆ ನಿರುದ್ಯೋಗದ ಸಮಸ್ಯೆ ಕಾಡಲಿದೆ. ರಿಲಯನ್ಸ್ ಕಮ್ಯೂನಿಕೇಷನ್ ಸಂಸ್ಥೆಯ ಅನಿಲ್ ಅಂಬಾನಿ ಪ್ರಕಾರ, ಭಾರತದ ಟೆಲಿಕಾಂ ಕ್ಷೇತ್ರ 20 ಲಕ್ಷ ಉದ್ಯೋಗವನ್ನು ಕಡಿತ ಮಾಡಲಿದೆ. ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಹಾಗೂ ಏರ್ ಟೆಲ್ ಕಂಪನಿಗಳು ಮಾತ್ರ ಉಳಿದುಕೊಳ್ಳುತ್ತವಂತೆ.

ಸಾಲದ ಸುಳಿಗೆ ಸಿಲುಕುತ್ತಾ ‘ಏರ್​ಟೆಲ್’..?
ಇನ್ನು ವೋಡಾಫೋನ್, ಐಡಿಯಾ ಬಾಗಿಲು ಮುಚ್ಚಿದ್ರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಎರಡೇ ಖಾಸಗಿ ಕಂಪನಿಗಳ ದರ್ಬಾರ್ ಶುರುವಾಗುತ್ತೆ. ಏರ್​ಟೆಲ್ ಕಂಪನಿಗೂ ಲಾಭವಾಗಲ್ಲ. ಏರ್​ಟೆಲ್‌ ತನ್ನ ಕಾಲ್ ದರ ಹಾಗೂ ಸೇವಾದರ ಏರಿಕೆ ಮಾಡಬಹುದು. ಬಳಿಕ ಮೊಬೈಲ್ ಕಾಲ್ ದರ ಹಾಗೂ ಸೇವಾದರವು ಶೇಕಡಾ 10ರಿಂದ 15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಭಾರತಿ ಏರ್​ಟೆಲ್ ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.

ಒಂದ್ಕಡೆ ಆರ್ಥಿಕ ಸಂಕಷ್ಟ, ಮತ್ತೊಂದ್ಕಡೆ ದಿನೇ ದಿನೆ ಹೆಚ್ಚಾಗ್ತಿರುವ ನಿರುದ್ಯೋಗ ಸಮಸ್ಯೆ. ಇದೆಲ್ಲದರ ಮಧ್ಯೆ ಟೆಲಿಕಾಂ ಕಂಪನಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ. ಒಟ್ನಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಟೆಲಿಕಾಂ ಕಂಪೆನಿಗಳು ಸಂಕಷ್ಟದ ಸುಳಿಗೆ ಸಿಲುಕಿವೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!