ಅಭಿಮಾನಿಗಳತ್ತ ಕೈಬೀಸುತ್ತಾ, ಸುಧಾಕರ್​ಗೆ ಮತ ಹಾಕಿ ಎಂದ ಬ್ರಹ್ಮಾನಂದಂ!

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ರಂಗೇರುತ್ತಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಪರ ಪ್ರಚಾರಕ್ಕೆ ಸಿನಿ ಕಲಾವಿದರ ದಂಡೇ ಆಗಮಿಸಿದೆ. ಇದುವರೆಗೂ ಸ್ಥಳೀಯವಾಗಿ ಖ್ಯಾತ ನಟಿ ಹರಿಪ್ರಿಯಾ ಸೇರಿದಂತೆ ಅನೇಕ ಕಿರುತೆರೆ ಮತ್ತು ಸ್ಯಾಂಡಲ್​​ವುಡ್​ ನಟ-ನಟಿಯರು ಕ್ಷೇತ್ರದಲ್ಲಿ ಡಾ. ಸುಧಾಕರ್​ಗೆ ಮತ ಯಾಚಿಸುತ್ತಾ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಇದೀಗ ತೆಲುಗು ನಟ, ಡಾ. ಬ್ರಹ್ಮಾನಂದಂ ಅವರು ಪ್ರಚಾರ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಇಂದು ಬೆಳಗ್ಗೆ ಅವರು ಚಿಕ್ಕಬಳ್ಳಾಫುರ ತಾಲೂಕಿನ ಪೆರೇಸಂದ್ರಕ್ಕೆ ಆಗಮಿಸಿ, ಅಭಿಮಾನಿಗಳತ್ತ ಕೈಬೀಸಿದರು. ಪೆರೇಸಂದ್ರ ಚಿಕ್ಕಪೈಲಗುರ್ಕಿ ಮಂಡಿಕಲ್ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಬ್ರಹ್ಮಿ ಅಭಿಮಾನಿಗಳು ಬಹ್ಮಾನಂದಪಟ್ಟರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಟ ಬ್ರಹ್ಮಾನಂದಂ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡಿದ್ದು, ಲವಲವಿಕೆಯಿಂದ ಇಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

Related Posts :

Category:

error: Content is protected !!