ವಿದ್ಯಾರ್ಥಿಗಳಿಂದ ಸಿದ್ಧವಾಯಿತು 4 ಸಾವಿರ ಅಡಿಯ ತ್ರಿವರ್ಣ ಧ್ವಜ, ಎಲ್ಲಿ?

ಬೆಂಗಳೂರು: 74ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಇಡೀ ದೇಶವೇ ಸಂತಸದ ಅಲೆಯಲ್ಲಿ ತೇಲುತ್ತಿದ್ದು, ಈ ದಿಸೆಯಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಭಿನ್ನ ಶೈಲಿಯಲ್ಲಿ ತಮ್ಮ ದೇಶಭಕ್ತಿಯನ್ನು ತೆರೆದಿಟ್ಟಿದ್ದಾರೆ.

ಬೆಂಗಳೂರಿನ ಚಿಕ್ಕಲಸಂದ್ರ ಬಳಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸುಮಾರು 4000 ಅಡಿಯಲ್ಲಿ ತ್ರಿವರ್ಣ ಧ್ವಜವನ್ನು ಬಿಡಿಸಿದ್ದಾರೆ. ಈ ತ್ರಿವರ್ಣ ಧ್ವಜವು ವೃತ್ತಕಾರದಲ್ಲಿದ್ದು, 2500 ಕೆಜಿ ಉಪ್ಪು ಹಾಗೂ 250 ಕೆಜಿ ರಂಗೋಲಿಯನ್ನು ಬಳಸಿಕೊಂಡು ಬಿಡಿಸಲಾಗಿದೆ.

ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ತ್ರಿವರ್ಣ ಧ್ವಜ ಬಿಡಿಸಿದ ವಿದ್ಯಾರ್ಥಿಗಳು ಧ್ವಜದ ಮುಂದೆ ರಾಷ್ಟ್ರಗೀತೆ ಹಾಡುವ ಮೂಲಕ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

Related Tags:

Related Posts :

Category: