ಸಿನಿಮೀಯ ಸ್ಟೈಲ್​ನಲ್ಲಿ ಬಂದ ಪೊಲೀಸರಿಗೆ ಸಿನಿಮೀಯ ರೀತಿಯಲ್ಲೇ ಚಳ್ಳೆ ಹಣ್ಣು ತಿನ್ನಿಸಿದ್ರು

ಕೋಲಾರ: ಅವರಿಬ್ಬರು ರೌಡಿಶೀಟರ್​ಗಳು ಜೊತೆಗೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳು, ಅವರ ಬೆನ್ನು ಹತ್ತಿದ್ದ ಬೆಂಗಳೂರು ಪೊಲೀಸರು ಆರೋಪಿಗಳನ್ನು ಹಿಡಿಯಲು ಸಮವಸ್ತ್ರವಿಲ್ಲದೆ ಖಾಸಗಿ ಕಾರಿನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಹಿಡಿಯಲು ಯತ್ನಿಸಿದ್ರು ಆದ್ರೆ ಆ ಕುಖ್ಯಾತ ಕಳ್ಳರು ಕೂಡಾ ಚಾಲಾಕಿಗಳು ಸಿನಿಮೀಯ ರೀತಿಯಲ್ಲೇ ಎಸ್ಕೇಪ್​ ಆಗಿದ್ದಾರೆ.

ಪೊಲೀಸರಿಗೆ ಲಾಂಗು ತೋರಿಸಿ ಪರಾರಿಯಾದ ಆರೋಪಿಗಳು.
ಪೊಲೀಸರ ಮೇಲೆ‌ ಲಾಂಗು ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಹಿಡಿಯುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಶುಕ್ರವಾರ ಸಂಜೆ ೭.೩೦ರ ಸಮಯದಲ್ಲಿ ಕೋಲಾರ ನಗರದಲ್ಲಿ ನಡೆದಿದೆ. ಬೆಂಗಳೂರಿನ ನಂದಿನಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಆರೋಪಿಗಳಾದ ಕೆ.ಜಿ.ಹಳ್ಳಿ ನಿವಾಸಿಗಳಾದ ಅರಬಾರ್​ ಖಾನ್​ ಮತ್ತು ಮೆಹರಾಜ್ ಖಾನ್ ತಲೆಮರೆಸಿಕೊಂಡು ಕೋಲಾರದ ಅರಹಳ್ಳಿ ಗೇಟ್ ಸಮೀಪವಿದ್ದಾರೆಂದು ಟವರ್ ಲೋಕೇಶನ್‌ನಲ್ಲಿ ಮಾಹಿತಿ ದೊರೆತಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಂದಿನಿ ಲೇಔಟ್‌ನ ಪೊಲೀಸ್ ಠಾಣೆಯ ಒಬ್ಬ ಪಿಎಸ್‌ಐ ಹಾಗೂ ಐದು ಮಂದಿ ಪೇದೆಗಳು ಗಲ್‌ಪೇಟೆ ಪೊಲೀಸರ ಸಹಾಯದಿಂದ ಅರಹಳ್ಳಿ ಗೇಟ್ ಬಳಿ ಹುಡುಕಾಟ ನಡೆಸುತ್ತಿದ್ದ ಸಮಯದಲ್ಲಿ ಆರೋಪಿಗಳು ಪೊಲೀಸರು ತಮ್ಮನ್ನು ಸುತ್ತುವರೆದಿರುವ ಮಾಹಿತಿ ಸಿಕ್ಕಿ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಜೊತೆಗೆ ಖಾಸಗಿ ವಾಹನ ಹಾಗೂ ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸರ ಮೇಲೆ ಸ್ಥಳೀಯರು ತಿರುಗಿ ಬಿದ್ದು ಪೊಲೀಸರ ಖಾಸಗಿ ವಾಹನದ ಗಾಜುಗಳನ್ನು ಒಡೆದು ಹಾಕಿದ್ರು ಈವೇಳೆ ಆರೋಪಿಗಳು ಪರಾರಿಯಾದ್ರು ಈವೇಳೆ ಬೆಂಗಳೂರು ಪೊಲೀಸರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೋಲಾರ ಎಸ್ಪಿ ಕಾರ್ತಿಕ್​ರೆಡ್ಡಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾರಿಹೋಕನಿಗೆ ಚಾಕು ತೋರಿಸಿ ಬೈಕ್​ ಕಸಿದುಕೊಂಡು ಪರಾರಿ..?
ಪೊಲೀಸರನ್ನು ಕಂಡ ಆರೋಪಿಗಳು ಅಲ್ಲೇ ಇದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ರು, ಆದ್ರೆ ಆ ದ್ವಿಚಕ್ರ ವಾಹನ ಕೂಡಾ ಕೈಕೊಟ್ಟ ಹಿನ್ನೆಲೆ ದಾರಿಯಲ್ಲಿ ಬರುತ್ತಿದ್ದ ಗಾರೆ ಕೆಲಸ ಮಾಡುವ ಯೂಸಫ್ ಎಂಬಾತನಿಗೆ ಚಾಕು ತೋರಿಸಿ ಗಾಡಿ ಕಸಿದುಕೊಂಡು ಪರಾರಿಯಾಗಿದ್ದಾರೆ.

ಸದ್ಯ ಗಾಡಿ ಕಳೆದುಕೊಂಡ ಯೂಸುಫ್ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಕಾರ್ತಿಕ್ ರೆಡ್ಡಿ ಆರೋಪಿಗಳ ಬಂಧನಕ್ಕೆ‌ ಬಲೆ ಬೀಸಿದ್ದಾರೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಕಾರಿನ ಗಾಜು ಒಡೆದವರನ್ನು ಹುಡುಕಾಡುತ್ತಿದ್ದಾರೆ.

ಬೆಂಗಳೂರು ಪೊಲೀಸರಿಗೆ ಸದ್ಯಕ್ಕೆ ಆರೋಪಿಗಳೇ ಟಾರ್ಗೆಟ್​..?
ಒಟ್ಟಾರೆ ಕುಖ್ಯಾತ ಆರೋಪಗಳನ್ನು ಬಂದಿಸಲು ಬಂದ ಪೊಲೀಸರಿಗೆ ಆರೋಪಿಗಳು ಚೆಳ್ಳೆಹಣ್ಣು ತಿನ್ನಿಸಿ ಪಾರಾರಿಯಾಗಿದ್ದು, ಈ ಘಟನೆ ಸಂಬಂದ ಕೋಲಾರ ಗಲ್ ಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!