ವೀರಮಹೇಶ್ವರನ ಗುಗ್ಗಳದ ವೇಳೆ ಸಾಮಾಳದ ಸದ್ದಿಗೆ ಕತ್ತು ಕುಣಿಸಿ ನಲಿದಾಡಿದ ಗೂಬೆ!

ಹಾವೇರಿ ಜಿಲ್ಲೆ ವೀರಮಹೇಶ್ವರನ ಜಾತ್ರೆಯಲ್ಲಿ ಗೂಬೆಯೊಂದು ವಿಶೇಷ ಅತಿಥಿಯಾಗಿ ಆಗಮಿಸಿ ಕತ್ತು ಕುಣಿಸುತ್ತಾ ವಿಜೃಂಭಣೆಯಿಂದ ಜಾತ್ರೆ ಆಚರಣೆಯನ್ನು ಸಂಭ್ರಮಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

  • TV9 Web Team
  • Published On - 8:46 AM, 13 Jan 2021
ಜಾತ್ರೆ ಆಚರಣೆಯಂದು ಗೂಬೆಯೊಂದು ಕತ್ತು ಕುಣಿಸುತ್ತ ನಲಿಯುತ್ತಿರುವ ದೃಶ್ಯ

ಹಾವೇರಿ: ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ವೀರಮಹೇಶ್ವರನ ಜಾತ್ರೆಯನ್ನು ನಿನ್ನೆ ಸಂಜೆ(ಜ.12) ಆಚರಿಸಲಾಯಿತು. ಈ ವೇಳೆ, ಜಾತ್ರೆ ಆಚರಣೆಯ ಸಂಭ್ರಮದಲ್ಲಿ ವಿಶೇಷ ಅತಿಥಿಯಂತಿದ್ದ ಗೂಬೆಯೊಂದು ಕತ್ತು ಕುಣಿಸುತ್ತಾ ಸಂಭ್ರಮಿಸುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜಾತ್ರಾ ವಿಶೇಷವಾಗಿ ದೇವಸ್ಥಾನದ ಮುಂದೆ ವೀರಮಹೇಶ್ವರನ ಗುಗ್ಗಳ ನಡೆಯುತ್ತಿತ್ತು. ವಿಜೃಂಭಣೆಯಿಂದ ಆಚರಿಸುತ್ತಿದ್ದ ವೀರಮಹೇಶ್ವರನ ಗುಗ್ಗಳದ ವೇಳೆ ಸಾಮಾಳದ ಸದ್ದಿಗೆ ಗೂಬೆಯೊಂದು ದ್ಯಾಮವ್ವದೇವಿ ದೇವಸ್ಥಾನದ ಮೇಲೆ‌ ಕುಳಿತು ಕತ್ತು ಕುಣಿಸುತ್ತ ನಲಿಯುತ್ತಿತ್ತು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಗೂಬೆ ಕೂತಲ್ಲೇ ನಲಿದಾಡಿದ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಪ್ರಾಣಿ, ಪಕ್ಷಿಗಳು ಅಡ್ಡ ಬಂದ್ರೆ ಶುಭ ಶಕುನ ಎಂದೇ ತಿಳಿಯಿರಿ