ಸಮಗ್ರ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರದಿಂದ ವಿನೂತನ ಕಾರ್ಯಕ್ರಮ.. ಚಿತ್ರಗಳಲ್ಲಿ

ರೈತರಿಗೆ ಆತ್ಮ ಸ್ಥೈರ್ಯ ಕೊಡುವ ಉದ್ದೇಶದಿಂದ ಹಾಗೂ ಸಮಗ್ರ ಕೃಷಿ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ‘ರೈತರೊಂದಿಗೆ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಕಟ್ಟೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ರೈತರ ಜೊತೆ ಸಚಿವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಹಿತಿ ಇಲ್ಲಿದೆ.

  • TV9 Web Team
  • Published On - 12:10 PM, 12 Jan 2021
ಕಾರ್ಯಕ್ರಮದ ಅಂಗವಾಗಿ ರೈತರೊಂದಿಗೆ ಸಚಿವರು ಸೇರಿ ಗದ್ದೆ ನಾಟಿ ಮಾಡುತ್ತಿರುವ ದೃಶ್ಯ.
ಸಚಿವ ಬಿ.ಎ.ಬಸವರಾಜ, ಬಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಕೃಷಿ ಇಲಾಖೆ ಆಯುಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ರೈತರೊಂದಿಗೆ ಸೇರಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಚಿವರು
ರೈತರು ಬೆಳೆ ಬೆಳೆಯುವ ರೀತಿಯ ಬಗ್ಗೆ ಸಚಿವರಿಂದ ವೀಕ್ಷಣೆ
ಸಚಿವರು ರೈತರೊಂದಿಗೆ ಒಂದು ದಿನ ಕಳೆದು ಹಸುವಿಗೆ ಆಹಾರ ನೀಡುತ್ತಿರುವ ದೃಶ್ಯ