ಕೂಡಲೇ ನಿಮ್ಮ ರಾಯಭಾರಿ ಕಚೇರಿ ಮುಚ್ಚಿ.. ಚೀನಾಗೆ ಅಮೇರಿಕಾ ವಾರ್ನಿಂಗ್!

ದೆಹಲಿ:ಕೊರೊನಾ ಮಾರಿ ಅಮೆರಿಕವನ್ನು ಇನ್ನಿಲ್ಲದಂತೆ ಕಾಡಿದ್ದೆ ಬಂತು. ಅಮೇರಿಕಾ ಚೀನಾದ ಮೇಲೆ ಪದೇ ಪದೇ ಮುರಿದು ಬೀಳುತ್ತಿದ್ದು, ಹೀಗಾಗಿ ಅಮೇರಿಕಾ ಚೀನಾದೊಂದಿಗಿನ ತನ್ನೆಲ್ಲ ವ್ಯವಹಾರಗಳಿಗೆ ಫುಲ್ ಸ್ಟಾಪ್ ಇಡುವಂತೆ ಕಾಣುತ್ತಿದೆ. ಈಗ ಅದರ ಫಲವಾಗಿ ಅಮೇರಿಕದಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಮುಚ್ಚುವಂತೆ ಅಮೇರಿಕಾ ಚೀನಾಗೆ ಆದೇಶ ನೀಡಿದೆ.

ಅಮೇರಿಕದ ಹ್ಯೂಸ್ಟನ್ ನಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಇನ್ನು 72 ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ 4:00 ಒಳಗೆ ಮುಚ್ಚಬೇಕೆಂದು ಅಮೆರಿಕ ಚೀನಾಗೆ ತಾಕೀತು ಮಾಡಿದೆ. ಅಮೇರಿಕದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ಇದೊಂದು ರಾಜಕೀಯ ಪ್ರಚೋದನೆಯಿಂದ ತೆಗೆದುಕೊಂಡಿರುವ ನಿರ್ಧಾರವಾಗಿದ್ದು ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹ ಮಾಡಿದೆ. ಅಲ್ಲದೆ ಅಮೇರಿಕದ ಈ ನಿರ್ಧಾರದಿಂಧ ಧೃತಿಗೆಟ್ಟಿರುವ ಚೀನಾ ಅಮೇರಿಕದ ರಾಯಭಾರಿ ಕಚೇರಿಯಲ್ಲಿರುವ ಕೆಲವು ದಾಖಲೆಗಳನ್ನು ಬೆಂಕಿ ಇಟ್ಟು ನಾಶಗೊಳಿಸಲಾಗಿದೆ ಎಂದು ವರದಿಯಾಗಿದೆ.

Related Tags:

Related Posts :

Category:

error: Content is protected !!