ಸೋಮವಾರ ಬಂದ್ ಸಂಪೂರ್ಣ ಸಕ್ಸಸ್ ಆಗುತ್ತೆ: ಕೋ. ಚಂದ್ರಶೇಖರ್

ಬೆಂಗಳೂರು: APMC, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ರೈತ ಪರ ಸಂಘಟನೆಗಳು ರಾಜ್ಯದಲ್ಲಿ ಬಂದ್ ನಡೆಸಲು ಮುಂದಾಗಿದ್ದಾರೆ. ಸೆಪ್ಟೆಂಬರ್​ 25ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿತ್ತು ಆದರೆ ಅದು ಸಂಪೂರ್ಣ ವಿಫಲವಾಗಿತ್ತು. ಆದರೆ ಸೆಪ್ಟೆಂಬರ್ 28 ಅಂದ್ರೆ ಸೋಮವಾರ ಕರ್ನಾಟಕ ಬಂದ್ ಸಂಪೂರ್ಣ ಸಕ್ಸಸ್ ಆಗುತ್ತೆ ಅಂತ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಈ ವೇಳೆ ಅವರು ಈಗಾಗಲೇ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಇಂದು ಭೂಸುಧಾರಣಾ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ. ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಸಂಪೂರ್ಣ ಬಂದ್ ಮಾಡಲಾಗುತ್ತೆ.

ಕೃಷಿ ಪರಂಪರೆ ಹಾಳು ಮಾಡುವ ಕಾಯ್ದೆಯನ್ನು ಕೇಂದ್ರ ತಂದಿದೆ. ಹೀಗಾಗಿ ರೈತರ ಪಾಲಿಗೆ ಕೇಂದ್ರ, ರಾಜ್ಯ ಸರ್ಕಾರ ಸತ್ತಿವೆ. ಸೋಮವಾರದಂದು ಶವ ಯಾತ್ರೆ ಮಾಡುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ‘ಪ್ರಧಾನಿ ಮೋದಿಯೇ ಕಾರ್ಪೊರೇಟ್ ಕಂಪನಿಗಳ ದಲ್ಲಾಳಿ’

Related Tags:

Related Posts :

Category:

error: Content is protected !!