2020 year in review | ಉತ್ತರಾರ್ಧದಲ್ಲಿ ಕಳೆದುಕೊಂಡದ್ದು, ಪಡೆದುಕೊಂಡದ್ದರ ನಡುವೆ ತಳಮಳಗಳ ಏರಿಳಿತ

ಸ್ಫೋಟಕವಿದ್ದ ಅನಾನಸ್ ತಿಂದು ಸಾವಿಗೀಡಾದ ಗರ್ಭಿಣಿ ಆನೆ, ಬೆಂಗಳೂರು ಗಲಭೆ, ಕೊರೆಯುವ ಚಳಿಯಲ್ಲಿ ತಿಂಗಳಿನಿಂದ ನಡೆಯುತ್ತಿರುವ ದೆಹಲಿ ಚಲೋ ಚಳವಳಿ.. ಇಂತಹ ಘಟನೆಗಳು ಒಂದೆಡೆಯಾದರೆ, ಡೊನಾಲ್ಡ್ ಟ್ರಂಪ್ ಅಧಿಕಾರ ದಾಹ, ಪ್ರೇಕ್ಷಕರಿಲ್ಲದ ಐಪಿಎಲ್ ಮುಂತಾದವುಗಳು ಇನ್ನೊಂದೆಡೆ. 2020ರ ಉತ್ತರಾರ್ಧ ಸಾಕ್ಷಿಯಾಗಿದ್ದು ತಳಮಳಗಳ ಏರಿಳಿತಗಳಿಗೆ..

  • TV9 Web Team
  • Published On - 22:54 PM, 31 Dec 2020
ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕವಿರಿಸಿದ್ದ ಅನಾನಸ್​ ಹಣ್ಣು ತಿಂದು ಸಾವನ್ನಪ್ಪಿತು. ಈ ಘಟನೆಗೆ ದೇಶದ ಜನರು ಅಶ್ರುತರ್ಪಣ ಮಿಡಿದರು.
ಟಿಬೇಟ್ ಮತ್ತು ಚೀನಾದಲ್ಲಿ ಸುರಿದ ಭಾರಿ ಮಳೆಗೆ ಬ್ರಹ್ಮಪುತ್ರಾ ನದಿ ಅಸ್ಸಾಂ, ಮೇಘಾಲಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಯಿತು. ಪ್ರಾಣ ರಕ್ಷಣೆಗೆ ವನ್ಯಜೀವಿಗಳು ಎತ್ತರದ ಗುಡ್ಡಗಳನ್ನೇರಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳ ತುಂಬಾ ಹರಿದಾಡಿದವು.
ಈಶಾನ್ಯ ರಾಜ್ಯಗಳಲ್ಲಿ ಬ್ರಹ್ಮಪುತ್ರಾ ನದಿ ಪ್ರವಾಹದಿಂದ ಪಾರಾಗುತ್ತಿರುವ ಕುಟುಂಬ
ಅಸ್ಸಾಂ, ಮೇಘಾಲಯಗಳು ಪ್ರವಾಹಕ್ಕೆ ತತ್ತರಿಸಿದ್ದವು.
ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ರಾಷ್ಟ್ರಪತಿ ರಾಮನಾಥ್ ಕೋವಿಂದ್​ರನ್ನು ಭೆಟಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರತಿ ನೀಡಿದರು.
ಆಗಸ್ಟ್ 5ರಂದು ನೂತನ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾಧು ಸಂತರು, ರಾಜಕಾರಣಿಗಳು ಸೇರಿ ಕೇವಲ 175 ಜನರಿಗೆ ಪ್ರವೇಶ ನೀಡಲಾಗಿತ್ತು.
ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಸಮುದಾಯ ವಿರೋಧಿ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ಹಿನ್ನೆಲೆಯಲ್ಲಿ ನಡೆದಿದ್ದ ಗಲಭೆಯಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆರೋಪಿಯ ಸಂಬಂಧಿಯಾದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಉದ್ರಿಕ್ತರು ಮಧ್ಯರಾತ್ರಿ ಬೆಂಕಿ ಹಾಕಿದ್ದರು.
ಆಗಸ್ಟ್ 11ರಂದು ನಡೆದಿದ್ದ ಹಿಂಸಾತ್ಮಕ ದಾಳಿ ಮತ್ತು ಗಲಭೆಗೆ ಸಂಬಂಧಿಸಿ ಈವರೆಗೆ 181ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರೈತ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020 ಮತ್ತು ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020 ಗಳನ್ನು ಸುಗ್ರೀವಾಜ್ಞೆಯ ಮೂಲಕ ಅಂಗೀಕರಿಸಲಾಯಿತು.
1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಪೂರ್ವ ನಿಯೋಜಿತವಲ್ಲ ಎಂದು ತೀರ್ಪು ನೀಡಿದ ವಿಶೇಷ ಸಿಬಿಐ ನ್ಯಾಯಾಲಯ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಸೇರದಂತೆ ಎಲ್ಲಾ 32 ಆರೋಪಿಗಳನ್ನೂ ನಿರ್ದೋಷಿಗಳೆಂದು ತೀರ್ಪಿತ್ತಿತು. ಈ ಮೂಲಕ 28 ವರ್ಷ ಹಳೆಯ ಪ್ರಕರಣವನ್ನು ತೆರೆಗಾಣಿಸಿತು.
1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಪೂರ್ವ ನಿಯೋಜಿತವಲ್ಲ ಎಂದು ತೀರ್ಪು ನೀಡಿದ ವಿಶೇಷ ಸಿಬಿಐ ನ್ಯಾಯಾಲಯ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನೂ ನಿರ್ದೋಷಿಗಳೆಂದು ತೀರ್ಪಿತ್ತಿತು. ಈ ಮೂಲಕ 28 ವರ್ಷ ಹಳೆಯ ಪ್ರಕರಣವನ್ನು ತೆರೆಗಾಣಿಸಿತು.
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್​ಸಿಬಿ) ತನಿಖೆ ಕೈಗೊಂಡಿದ್ದು ಎರಡು ದಿನಗಳ ತೀವ್ರ ವಿಚಾರಣೆ ಬಳಿಕ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿತು. 
ಪ್ರೇಕ್ಷಕರಿಲ್ಲದೇ ನಡೆಸಿದ ಕ್ರೀಡಾಕೂಟವೆಂಬ ಹಣೆಪಟ್ಟಿಗೆ 2020ರ ಐಪಿಎಲ್ ಪ್ರಾಪ್ತವಾಯಿತು. ದುಬೈನಲ್ಲಿ ನಡೆದ ಕ್ರೀಡಾ ಕಾಳಗದಲ್ಲಿ ದೆಹಲಿ ಕ್ಯಾಪಿಟಲ್ಸ್​ನ್ನು ಮಣಿಸಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಪದಕಕ್ಕೆ ಮುತ್ತಿಟಿತು.
ನವೆಂಬರ್​ನಲ್ಲಿ ಆರಂಭವಾದ ದೆಹಲಿ ಚಲೋ ಚಳುವಳಿ ಡಿಸೆಂಬರ್​ನಲ್ಲಿ ತೀವ್ರವಾಯಿತು. ಕೇಂದ್ರ ಸರ್ಕಾರದ ಜತೆ ಆರು ಸುತ್ತಿನ ಮಾತುಕತೆಯ ನಂತರವೂ ರೈತರ ಬೇಡಿಕೆ ಈಡೇರಿಲ್ಲ.
ಪಂಜಾಬ್ ರೈತರ ಘೋಷಣೆಯ ಭಂಗಿ ಭಾವ
ದೆಹಲಿಯ ಬುರಾರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಮಹಿಳೆಯರು