ದೇವಸ್ಥಾನದ ಹುಂಡಿ ಲೂಟಿ, CCTV ಯಲ್ಲಿ ಸೆರೆಯಾಗಿದೆ ಕಳ್ಳನ ಕರಾಮತ್ತು

ಉಡುಪಿ:ಕುಂದಾಪುರದ ಕಟ್ ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದಲ್ಲಿ ಕಳ್ಳನೊಬ್ಬ ದೇವಸ್ಥಾನದ ಬೀಗ ಒಡೆದು ನಗದು ದೋಚಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.

ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಸುಕಿನ ಜಾವ 3:18 ಕ್ಕೆ ದೇವಸ್ಥಾನ‌ ಪ್ರವೇಶಿಸಿದ ಕಳ್ಳ ಮೊದಲಿಗೆ ದೇವಸ್ಥಾನದ ಬೀಗ ಒಡೆದು ಒಳಪ್ರವೇಶಿಸಿದ್ದಾನೆ. ತದನಂತರ ಕಾಣಿಕೆ ಡಬ್ಬಿಯನ್ನು ಕಬ್ಬಿಣದ ಸಲಾಕೆಯಿಂದ ಒಡೆದು ನಗದು ದೋಚಿ ನಸುಕಿನ ಜಾವ ಸುಮಾರು 4:20 ಕ್ಕೆ ದೇವಸ್ಥಾನದಿಂದ ಪರಾರಿಯಾಗಿದ್ದಾನೆ. ದೇವಸ್ಥಾನದ ಅನತಿ ದೂರದ ರೈಲ್ವೆ ಹಳಿ ಸಮೀಪ ಇನ್ನೊಂದು ಕಾಣಿಕೆ ಡಬ್ಬಿ ಪತ್ತೆಯಾಗಿದೆ. ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.

Related Tags:

Related Posts :

Category:

error: Content is protected !!