ಪಾದರಾಯನಪುರ ಕಳ್ಳನನ್ನ ಬಂಧಿಸಿದ್ದ ಪೊಲೀಸರಿಗೆ ಸಿಕ್ತು ಕ್ವಾರಂಟೈನ್ ಭಾಗ್ಯ!

ಆನೇಕಲ್: ಕಂಡ ಕಂಡವರ ದೇಹ ಹೊಕ್ಕುತ್ತಿರುವ ಮಹಾಮಾರಿ ಕೊರೊನಾ ಕ್ರಿಮಿಗೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಯಾರಿಂದ ಯಾರಿಗೆ ಯಾವ ಕ್ಷಣದಲ್ಲಿ ಹೇಗೆ ಅಟ್ಯಾಕ್ ಆಗುತ್ತೆ ಎಂದು ಪತ್ತೆ ಹಚ್ಚುವುದೇ ಕಷ್ಟಕರವಾಗಿದೆ. ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನದ ಆರೋಪಿಗೂ ಕೊರೊನಾ ಸೋಂಕು ತಗುಲಿದ್ದು, ಆರೋಪಿ ಕರೆದೊಯ್ದಿದ್ದ ಪೊಲೀಸರಿಗೂ ಕೊರೊನಾ ಆತಂಕ ಶುರುವಾಗಿದೆ.

ಹೆಬ್ಬಗೋಡಿ ಠಾಣೆಯ 22 ಮಂದಿ ಕ್ವಾರಂಟೈನ್‌:
ಹಾಗಾಗಿ ಹೆಬ್ಬಗೋಡಿ ಠಾಣೆಯSI, ASI, PC, ಹೋಂ ಗಾರ್ಡ್​, ಚಾಲಕರು ‌ಸೇರಿದಂತೆ ಒಟ್ಟು 22 ಮಂದಿಯನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿದೆ. ಪಾದರಾಯನಪುರದ ನಿವಾಸಿ ಹೆಬ್ಬಗೋಡಿಯಲ್ಲಿ ಕಳ್ಳತನ ಮಾಡಿದ್ದ. ಈತನನ್ನು ಪೊಲೀಸರು ಬಂಧಿಸಿದ್ದರು.

ಕಳ್ಳನ ಜೊತೆಗೆ ಸಂಪರ್ಕದಲ್ಲಿದ್ದ ಕಾರಣ ಕ್ವಾರಂಟೈನ್‌ ಮಾಡಲಾಗುತ್ತಿದೆ. ಕಳ್ಳನಿಗೆ ಊಟ ನೀಡುವುದು, ಆತನನ್ನು ಕೋರ್ಟ್​ಗೆ ಕರೆದುಕೊಂಡು ಹೋಗುವುದು, ವಾಷ್ ರೂಂ ಕರೆದುಕೊಂಡು ಹೋಗುವುದು ಸೇರಿದಂತೆ ಹೀಗೆ ಅನೇಕ ವಿಚಾರದಲ್ಲಿ ಆತನ ಜೊತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಹೆಬ್ಬಗೋಡಿ ಠಾಣೆಯ ಪೊಲೀಸರಿಗೆ ಆತಂಕ ಕಾಡುತ್ತಿದೆ.

ಹೆಬ್ಬಗೋಡಿ ಠಾಣೆ ಸೀಲ್​ಡೌನ್​ ಇಲ್ಲ:
ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನು ಸೀಲ್​ಡೌನ್​ ಮಾಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ದಿನಕ್ಕೆ ಎರಡು ಬಾರಿಯಂತೆ ಮೂರು ದಿನ ಪೊಲೀಸ್ ಠಾಣೆಯಲ್ಲಿ ಸ್ಪ್ರೇ ಮಾಡಲು ತೀರ್ಮಾನಿಸಲಾಗಿದೆ.

 

Related Posts :

Category:

error: Content is protected !!