ಹಿಟ್ & ರನ್: ಟೈರ್ ಬದಲಿಸುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣ

ಬೀದರ್: ನಿಂತಿದ್ದ ಗೂಡ್ಸ್ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಹುಮ್ನಾಬಾದ್ ತಾಲೂಕಿನ ಮೀನಕೇರಾ ಕ್ರಾಸ್ ಬಳಿ ಸಂಭವಿಸಿದೆ. ವಿಜಯ ಕುಮಾರ್(32), ಅನ್ಸಾರ್ (24) ಹಾಗು ಶಾಮಿಲ್ ಸಾಬ್(25) ಮೃತ ದುರ್ದೈವಿಗಳು.

ಮೃತ ಮೂವರು ರಸ್ತೆ ಬದಿ ಸರಕು ವಾಹನ ನಿಲ್ಲಿಸಿ ಟೈರ್ ಬದಲಿಸುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಬಗದಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related Tags:

Related Posts :

Category: