ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

  • TV9 Web Team
  • Published On - 18:38 PM, 29 Jun 2020
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕ ನ್ಯೂಟೌನ್ ವ್ಯಾಪ್ತಿಯ ಅನಂತಪುರದಲ್ಲಿ ನಡೆದಿದೆ.

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಗಂಡ ಹೆಂಡತಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮುನಿವೆಂಕಟಪ್ಪ (54), ನಾಗಮಣಿ (50) ಹಾಗೂ ರವಿ ಕುಮಾರ್ (27) ನೇಣಿಗೆ ಶರಣಾದವರು. ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.