Ban ಆದ್ಮೇಲೂ TikTok ವರ್ಕ್​ ಆಗ್ತಿದೆಯಾ? ತಾಜಾ ಮಾಹಿತಿ ಇಲ್ಲಿದೆ

ಬೆಂಗಳೂರು: ಇತ್ತೀಚೆಗಷ್ಟೇ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತ ಯೋಧರ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ದೇಶವ್ಯಾಪ್ತಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಜನರು ಮುಂದಾದರು. ಇದೀಗ ರಾತ್ರಿ ಪ್ರಧಾನಿ ಮೋದಿ ದಿಢೀರನೇ ಚೀನಾದ ಆ್ಯಪ್​ಗಳ ಮೇಲೆ ಸಮರ ಸಾರಿ ಟಿಕ್ ಟಾಕ್ ಸೇರಿದಂತೆ 59 ಆ್ಯಪ್​ಗಳಿಗೆ ಭಾರತದಿಂದ ಗೇಟ್​ಪಾಸ್ ನೀಡಿದ್ದಾರೆ.

ಪ್ರಧಾನಿ ಮೋದಿಯ ನಿರ್ಧಾರವನ್ನು ದೇಶಾದ್ಯಂತ ಜನರು ಸ್ವಾಗತಿಸಿದ್ದಾರೆ. ರಾತ್ರಿಯಿಂದಲೇ ಕೆಲವರು ಟಿಕ್​ ಟಾಕ್ ಆ್ಯಪ್​ಗಳನ್ನು ತಮ್ಮ ಮೊಬೈಲ್​ನಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಆದೇಶದ ಬಳಿಕ ನಿನ್ನೆ ರಾತ್ರಿಯೇ ಗೂಗಲ್​ ಪ್ಲೇಸ್ಟೋರ್​ನಲ್ಲಿ ಟಿಕ್​ಟಾಕ್​ ಡೌನ್​ಲೋಡ್​ ಆಗುತ್ತಿತ್ತು. ಆದ್ರೆ ಇಂದು ಬೆಳಗ್ಗೆಯಿಂದ ಪ್ಲೇಸ್ಟೋರ್​ನಲ್ಲಿ ಟಿಕ್​ಟಾಕ್ ಆ್ಯಪ್​ ಲಭ್ಯವಾಗುತ್ತಿಲ್ಲ. ಆದ್ರೆ ಬೇರೊಂದು ರೂಪಗಳಲ್ಲಿ ಇನ್ನೂ ಟಿಕ್​ಟಾಕ್ ಸಿಗುತ್ತಿದೆ.

ಟಿಕ್‌ ಟಾಕ್ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ
ಭಾರತ ಸರ್ಕಾರ ಟಿಕ್​ಟಾಕ್ ಸೇರಿದಂತೆ 59 ಚೀನಾ ಆ್ಯಪ್​ಗಳನ್ನು ಬ್ಯಾನ್ ಮಾಡಿದೆ. ಸರ್ಕಾರದ ಆದೇಶವನ್ನು ನಾವು ಅನುಸರಿಸುತ್ತಿದ್ದೇವೆ. ಹಾಗೂ ಈ ಬಗ್ಗೆ ಸ್ಪಷ್ಟನೆಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನ ನಾವು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ. ಟಿಕ್​ಟಾಕ್​ನ ಎಲ್ಲಾ ಮಾಹಿತಿಯನ್ನು ನಾವು ಗೌಪ್ಯವಾಗಿ ಹಾಗೂ ಭದ್ರವಾಗಿ ಇಟ್ಟಿದ್ದೇವೆ. ಟಿಕ್‌ ಟಾಕ್ ಆ್ಯಪ್ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ. ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದ ಜತೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇಂಟರ್​ನೆಟ್​ ಮೂಲಕ ಟಿಕ್​ಟಾಕ್ ಕಾರ್ಯನಿರ್ವಹಿಸಲಿದ್ದು, ಭಾರತದ 14 ಭಾಷೆಯಲ್ಲಿ ಟಿಕ್​ಟಾಕ್ ಲಭ್ಯವಿದೆ. ಅಲ್ಲದೆ, ನೂರಾರು ಮಿಲಿಯನ್​ ಫಾಲೋವರ್ಸ್​ ಆಗಿದ್ದಾರೆ. ಕಲಾವಿದರು, ವಿದ್ಯಾರ್ಥಿಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರಿಗೆ ಟಿಕ್​ಟಾಕ್ ಜೀವನಾಧಾರವಾಗಿದೆ ಎಂದು ಭಾರತದ ಟಿಕ್​ಟಾಕ್​ ಸಂಸ್ಥೆಯ ಮುಖ್ಯಸ್ಥ ನಿಖಿಲ್ ಗಾಂಧಿ ತಿಳಿಸಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more