ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್: ಪುಂಡರ ವಿರುದ್ಧ ಸಮರ ಸಾರಿದ ಅನಸೂಯ!

ಹೈದರಾಬಾದ್: ಅನಸೂಯ ಭಾರದ್ವಾಜ್​.. ಮಾತಿನಲ್ಲೇ ಮೋಡಿ ಮಾಡೋ.. ಪ್ರೋಗ್ರಾಂಗಳಲ್ಲಿ ಪಟ ಪಟ ಮಾತನಾಡೋ ಸುಂದರಿ. ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಡಬಲ್ಲ ಫೇಮಸ್ ಆ್ಯಂಕರ್. ಟಾಲಿವುಡ್​​​ನಲ್ಲಿ ಕಮಾಲ್ ಮಾಡಿರೋ ನಟಿ, ನಿರೂಪಕಿ ಅನಸೂಯ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಟಾಲಿವುಡ್​​​ ಟಾಪ್​​​​ ನಿರೂಪಕಿ ಬಗ್ಗೆ ಅಸಭ್ಯ ಪೋಸ್ಟ್..!
ಯೆಸ್.. ತೆಲುಗು ಸಿನಿದುನಿಯಾದಲ್ಲಿ ಯಾವುದೇ ಕಾರ್ಯಕ್ರಮ ನಡೀಲಿ.. ಯಾವುದೇ ಚಿತ್ರದ ಸಾಂಗ್​ ರಿಲೀಸ್.. ಟ್ರೇಲರ್​​ ರಿಲೀಸ್​​ ಆಗ್ಲಿ.. ಆ್ಯಂಕರ್ ಅನಸೂಯ ಅಲ್ಲಿ ಇರ್ತಾರೆ. ಅವರದ್ದೇ ನಿರೂಪಣೆ ಇರುತ್ತೆ.
ತಮ್ಮದೇ ಸ್ಟೈಲ್​​​ ಆಫ್ ಆ್ಯಂಕರಿಂಗ್​ ಮೂಲಕ ಜನಮನ ಸೆಳೆಯೋ ಅನಸೂಯ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಅದೇನಂದ್ರೆ ಅನಸೂಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹಾಕಿರೋ ಆ ಒಂದು ಅಸಭ್ಯ ಪೋಸ್ಟ್​.

ಸೈಬರ್ ಪೊಲೀಸ್​ ಠಾಣೆ ಮೆಟ್ಟಿಲೇರಿದ ಅನಸೂಯ:
ಇನ್ನು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಹಾಕಿರೋ ಅಸಭ್ಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಅನಸೂಯ ಕೆರಳಿದ್ರು. ಫೇಸ್​​ಬುಕ್​​ನಲ್ಲಿ​ ಪೋಸ್ಟ್​​​​ ಹಾಕಿರೋರ ವಿರುದ್ಧ ಸೈಬರ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಈ ಕೃತ್ಯ ಎಸಗಿರೋರನ್ನ ಕೂಡಲೇ ಬಂಧಿಸುವಂತೆ ದೂರು ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಇತ್ತ ಪೊಲೀಸ್ ಅಧಿಕಾರಿಗಳು ಕೂಡ ಕ್ರಮದ ಭರವಸೆ ನೀಡಿದ್ದಾರೆ.

ಒಂದ್ಕಡೆ ಟಾಲಿವುಡ್​​ನ ಜಬರ್ದಸ್ತ್​ ಕಾರ್ಯಕ್ರಮದ ಮೂಲಕ ಫೇಮಸ್ ಆಗಿರೋ ಟಾಪ್​​ ಆ್ಯಂಕರ್​​ ಬಗ್ಗೆ ಕ್ರಿಮಿಗಳು ಪೋಸ್ಟ್​ ಹಾಕಿ ಮೆರೆದಿರೋದು ವಿವಾದ ಸೃಷ್ಟಿಸಿದೆ. ಇದ್ರಿಂದ ಆ್ಯಂಕರ್ ಅನಸೂಯ ಮುಜುಗರಕ್ಕೀಡಾಗಿದ್ದಾರೆ. ಇತ್ತ ಫೇಕ್ ಅಕೌಂಟ್​​ಗಳ ಮೂಲಕ ಪೋಸ್ಟ್​​​​​​ ಹಾಕಿರ್ಬೋದು ಎನ್ನಲಾಗ್ತಿದೆ. ಅಸಭ್ಯ ಪೋಸ್ಟ್ ಹಾಕಿರೋ ಕ್ರಿಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!