ತಲೈವಿ ಸಿನಿಮಾ: ಜಯಲಲಿತಾ ಆಪ್ತೆ ಶಶಿಕಲಾ ಗೆಟಪ್​ನಲ್ಲಿ ನಟಿ ಪೂರ್ಣ ದರ್ಶನ!

ಬಾಲಿವುಡ್ ನಟಿ ಕಂಗನಾ ರನೌತ್ ತಲೈವಿ ಪಾತ್ರದಲ್ಲಿ ಅಭಿನಯಿಸಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಇದ್ರ ಬೆನ್ನಲ್ಲೇ ಜಯಲಲಿತಾ ಆಪ್ತೆ ಶಶಿಕಲಾ ಪಾತ್ರವನ್ನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿತ್ತು ಆದ್ರೀಗ ಆಪಾತ್ರಕ್ಕೆ ನಟಿಯೊಬ್ಬರು ಆಯ್ಕೆಯಾಗಿದ್ದಾರೆ.

ತಮಿಳು ನಾಡಿನ ಅಮ್ಮ. ದ್ರಾವಿಡ ರಾಜ್ಯ ರಾಜಕಾರಣದ ಫೈರ್​ಬ್ರಾಂಡ್. ಎಐಎಡಿಎಂಕೆಯ ಧೀಮಂತ ನಾಯಕಿ. ಚಿತ್ರರಂಗದಲ್ಲೂ ಮೋಡಿ ಮಾಡಿದ ನಟಿ. ಹೌದು, ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾರ ಜೀವನಗಾಥೆ ತಲೈವಿ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರ್ತಿದೆ. ಜಯಲಲಿತಾ ಪಾತ್ರದಲ್ಲಿ ನಟಿ ಕಂಗನಾ ರನೌತ್ ಅಭಿನಯಿಸ್ತಿದ್ದು, ಈಗಾಗಲೇ ಚಿತ್ರದ ಫಸ್ಟ್ ಲುಕ್ ಚಿತ್ರದ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಪೋಸ್ಟರ್​ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ್ರೂ, ಕೌತುಕ ಹೆಚ್ಚಿಸಿದೆ.

ಜಯಲಲಿತಾ ಪಾತ್ರಕ್ಕೆ ಕಂಗನಾ ಏನೋ ಸೂಟ್ ಆದ್ರು. ಆದ್ರೆ, ಜಯಲಲಿತಾ ಆಪ್ತೆ ಶಶಿಕಲಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿತ್ತು. ಆದ್ರೆ, ಈ ಪಾತ್ರದಲ್ಲಿ ಪ್ರಿಯಾಮಣಿ ನಟಿಸ್ತಾರೆ ಅನ್ನೋ ಪುಕಾರು ಎದ್ದಿತ್ತು. ಆದ್ರೆ, ಕಾರಣಾಂತರಗಳಿಂದ ಅವರು ನಟಿಸಲ್ಲ ಅನ್ನೋ ಸುದ್ದಿ ಈಗ ರಿವೀಲ್ ಆಗಿದೆ.

ಪ್ರಿಯಾಮಣಿ ಒಲ್ಲೆ ಎಂದ ಮೇಲೆ ಈ ಪಾತ್ರಕ್ಕೆ ಮತ್ತಿನ್ಯಾರು ಬರ್ತಾರೆ ಅನ್ನೋದು ಕೂಡ ಸಾಕಷ್ಟು ಚರ್ಚೆಗೀಡಾಗಿತ್ತು. ಕ್ಯೂರಿಯಾಸಿಟಿಗೀಗ ತೆರೆ ಬಿದ್ದಿದೆ. ಅಂದಹಾಗೆ, ಕನ್ನಡದ ಜೋಶ್ ಸೇರಿದಂತೆ ಟಾಲಿವುಡ್​ ಸಿನಿಮಾಗಳಲ್ಲಿ ನಟಿಸಿರೋ ನಟಿ ಪೂರ್ಣ ಈಗ ಶಶಿಕಲಾ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಸದ್ಯ ಒಂದ್ಕಡೆ ಕಂಗನಾ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಶಶಿಕಲಾ ಪಾತ್ರಕ್ಕೆ ಪೂರ್ಣ ಹೇಗೆ ನ್ಯಾಯ ಒದಗಿಸಲಿದ್ದಾರೆ ಅನ್ನೋದೂ ಕುತೂಹಲ ಹೆಚ್ಚಿಸಿದೆ. ಇನ್ನು ಜಯಲಲಿತಾ ಹಾಗು ಶಶಿಕಲಾ ನಡುವಿನ ಆಪ್ತತೆಯನ್ನ ಬೆಳ್ಳಿಪರದೆ ಮೇಲೆ ಹೇಗೆ ಅನಾವರಣ ಮಾಡಲಾಗುತ್ತೆ ನೋಡಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!