Top News ಕೊರೊನಾ ಸೋಂಕು ಇದ್ರೆ ಸ್ಟ್ರೋಕ್ ಕೂಡ ಹೊಡೆಯುತ್ತೆ..

ಕೊರೊನಾ ವೈರಸ್ ಕೇವಲ ಶ್ವಾಸಕೋಶದಲ್ಲಿರೋರಿಗೆ ಮಾತ್ರ ತೊಂದರೆ ಕೊಡಲ್ಲ. ಒಮ್ಮೆ ಸೋಂಕು ಬಂದ್ರೆ, ಕಿಡ್ನಿ, ಬೆನ್ನು ಮೂಳೆಗೂ ಕುತ್ತು ಬರುವ ಸಾಧ್ಯತೆ ಇದೆಯಂತೆ. ಇಟಲಿಯಲ್ಲಿ ಡಾಕ್ಟರ್​ಗಳು ನಡೆಸಿದ ಸಂಶೋಧನೆ ಪ್ರಕಾರ, ಸೋಂಕಿನಿಂದಾಗಿ ಸ್ಟ್ರೋಕ್ ಹೊಡೆಯುವ ಸಾಧ್ಯತೆಯೂ ಹೆಚ್ಚು ಅಂತಾ ಹೇಳಿದ್ದಾರೆ.

ಕೊರೊನಾ ‘ಚಕ್ರವ್ಯೂಹ’
ಕೊರೊನಾ ತನ್ನ ವಿಷಜಾಲವನ್ನೂ ಇಡೀ ವಿಶ್ವಕ್ಕೆ ವ್ಯಾಪಿಸುತ್ತಿದೆ. ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1,32,36,249 ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 5,75,540 ಜನರು ಪ್ರಾಣ ಕಳೆದುಕೊಂಡಿದ್ರೆ, 58.881 ಜನರ ಸ್ಥಿತಿ ಚಿಂತಾಜನಕವಾಗಿದೆ. ಸೋಂಕಿನಿಂದ 76,96,547 ಜನರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.

ವೈರಸ್ ವಿಷಬೀಜ:
ಅಮೆರಿಕದಲ್ಲಿ ಕೊರೊನಾ ಬೇರು ಬಿಟ್ಟ ಪರಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 34,94,483ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ ದೇಶದಲ್ಲಿ 1,38,247 ಜನರು ಬಲಿಯಾಗಿದ್ದಾರೆ. ಇನ್ನು ಬ್ರೆಜಿಲ್​ನಲ್ಲೂ ಸಹ 18, 87,959 ಜನರಿಗೆ ಸೋಂಕು ಹೊಕ್ಕಿದ್ರೆ, 72 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದಲ್ಲೂ ಸಹ 7,33,699 ಜನರಲ್ಲಿ ವೈರಸ್ ಅಟ್ಯಾಕ್ ಆಗಿದ್ದು, 11 ಸಾವಿರ ಜನರು ಉಸಿರು ಚೆಲ್ಲಿದ್ದಾರೆ.

‘ಭವಿಷ್ಯ ಕೆಟ್ಟದಾಗಿರಲಿದೆ’
ಕೊರೊನಾ ವೈರಸ್​ನಿಂದಾಗಿ ಇಡೀ ವಿಶ್ವವೇ ಮಕಾಡೆ ಮಲಗಿದೆ . ಸೋಂಕಿಗೆ ಇನ್ನೂ ವ್ಯಾಕ್ಸಿನ್ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಹಲವು ದೇಶಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ವಿಶ್ವದ ಪರಿಸ್ಥಿತಿ ಕೆಟ್ಟದಾಗಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. WHOನ ನಿರ್ದೇಶಕ ಟೆಡ್ರೋಸ್ ಮಾತನಾಡಿ, ಸೋಂಕು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ನಮ್ಮ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಲಿದೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ
ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ 10 ಸಾವಿರಕ್ಕೆ ಏರಿಕೆಯಾಗಿದೆ. ಕೊವಿಡ್​ನಿಂದಾಗಿ 108 ಜನರು ಪ್ರಾಣ ಕಳೆದುಕೊಂಡಿದ್ರೆ, 2 ಸಾವಿರಕ್ಕೂ ಅಧಿಕ ಜನರು ಇನ್ನೂ ಸೋಂಕಿನಿಂದ ನರಳಾಡುತ್ತಿದ್ದಾರೆ. ಹೀಗಾಗಿ, ಸೋಂಕು ನಿಗ್ರಹಿಸುವ ಸಲುವಾಗಿ ಆಸ್ಟ್ರೇಲಿಯಾ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಚಳವಳಿಗಳ ಮೇಲೂ ಬ್ರೇಕ್ ಹಾಕಿದೆ.

ಬೊಲ್ಸೊನಾರೋಗೆ ಮತ್ತೊಮ್ಮೆ ಟೆಸ್ಟ್
ಬ್ರೆಜಿಲ್​ನಲ್ಲಿ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬರಿಯುತ್ತಿರುವ ಮಧ್ಯೆಯೂ ಅಧ್ಯಕ್ಷ ಜೈರ್ ಬೊಲ್ಸೊನಾರೋ ಮಾತ್ರ ಕ್ಯಾರೆ ಅಂದಿರಲಿಲ್ಲ. ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಅವರಿಗೇ ಕಳೆದ ವಾರ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಒಂದು ವಾರದಿಂದ ಕ್ವಾರಂಟೈನ್​ನಲ್ಲಿರುವ ಬೊಲ್ಸೊನಾರೋ ಮತ್ತೊಂದು ಕೊವಿಡ್ ಟೆಸ್ಟ್​ಗೆ ಒಳಗಾಗಲು ನಿರ್ಧರಿಸಿದ್ದಾರೆ.

ಹಾಂಕಾಂಗ್​ನಲ್ಲೂ ಆತಂಕ
ಕೊರೊನಾ ವೈರಸ್​ನಿಂದಾಗಿ ಹಾಂಕಾಂಗ್​ನಲ್ಲೂ ಆತಂಕ ಶುರುವಾಗಿದೆ. ಈಗಾಗಲೇ 1,522ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 8 ಜನರು ಬಲಿಯಾಗಿದ್ದಾರೆ. ಪ್ರಸ್ತುತ 297 ಜನರು ಸೋಂಕಿನಿಂದ ಪರದಾಟ ನಡೆಸಿದ್ದಾರೆ. ಸೋಂಕು ನಿಗ್ರಹಿಸುವ ಸಲುವಾಗಿ ಹಾಂಕಾಂಗ್​ನಲ್ಲಿ ಕಟ್ಟುನಿಟ್ಟಿನ ರೂಲ್ಸ್​ ಮಾಡಿದ್ದು, ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನ ಕಡ್ಡಾಯಗೊಳಿಸಲಾಗಿದೆ.

ಟೆಸ್ಟ್ ಬಳಿಕ ಸೇನೆಗೆ ಸೇರ್ಪಡೆ
ಕೊರೊನಾ ವೈರಸ್​ನಿಂದಾಗಿ ಹೆಚ್ಚು ಹೊಡೆತ ತಿಂದಿರೋದೇ ಅಮೆರಿಕ. ವೈರಸ್ ಭೀತಿಯ ಮಧ್ಯೆಯೂ ಸಹ ಅಮೆರಿಕದಲ್ಲಿ ಸೇನಾ ಪಡೆಗೆ ಹೊಸಬರು ಸೇರ್ಪಡೆಯಾಗಿದ್ದಾರೆ. ಸುಮಾರು 1,200 ಅಭ್ಯರ್ಥಿಗಳು ಕೊವಿಡ್​ ಟೆಸ್ಟ್ ಬಳಿಕ ಹಾಜರಾಗಿದ್ದಾರೆ. ಎಲ್ಲರಿಗೂ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ ಮಾಡಿದ್ದು, ಸೋಂಕು ಕಾಣಿಸಿಕೊಂಡವರನ್ನ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಯ್ತು.

ಮೃಗಾಲಯಗಳು ಬಂಧ ಮುಕ್ತ
ಕೊರೊನಾ ವೈರಸ್ ಭೀತಿಯಿಂದಾಗಿ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್​ಫ್ರಾನ್ಸಿಸ್ಕೋದ ಮೃಗಾಲಯ ಕಳೆದ ಮೂರು ತಿಂಗಳಿನಿಂದ ಬಂದ್ ಆಗಿತ್ತು. ಆದ್ರೀಗ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೂ ಓಪನ್ ಮಾಡಲಾಗಿದೆ. ಪ್ರವಾಸಿಗರು ಮಾಸ್ಕ್ ಧರಿಸೋದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನ ಕಡ್ಡಾಯಗೊಳಿಸಲಾಗಿದೆ.

Related Tags:

Related Posts :

Category:

error: Content is protected !!