Fact Check

Fact Check

ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಸಂಭಾವ್ಯ ಮಾಹಿತಿ, ತಪ್ಪು ಮಾಹಿತಿ, ಅನುಮಾನಾಸ್ಪದ ವೈರಲ್ ಪೋಸ್ಟ್‌ಗಳು ಮತ್ತು ಸಾರ್ವಜನಿಕ ವ್ಯಕ್ತಿಯಿಂದ ವಿವಾದಾತ್ಮಕ ಹೇಳಿಕೆಗಳಂತಹ ತಪ್ಪು ಮಾಹಿತಿಯನ್ನು ಕಂಡುಹಿಡಿದು ನಿಜವಾದ ಸುದ್ದಿಯನ್ನು ನೀಡುತ್ತದೆ. ಸಮಾಜದಲ್ಲಿ ನಕಲಿ ಸುದ್ದಿ ಹರಡುವಿಕೆಯನ್ನು ನಿಯಂತ್ರಿಸುವ ಮತ್ತು ಭೇದಿಸುವ ಗುರಿಯನ್ನು ಟಿವಿ9 ಕನ್ನಡ ಹೊಂದಿದೆ. ಹೀಗೆ ಕರ್ನಾಟಕ ಸೇರಿದಂತೆ ದೇಶದಲ್ಲಿ ತಪ್ಪು ಮಾಹಿತಿ, ಅನುಮಾನಾಸ್ಪದ ವೈರಲ್ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಹಿಂದಿನ ಸತ್ಯ ಏನು? ಎಂಬ ಬಗ್ಗೆ ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಮೂಲಕ ಓದುಗರಿಗೆ ತಿಳಿಸಲಿದೆ.

ಇನ್ನೂ ಹೆಚ್ಚು ಓದಿ

Fact Check: ಇದು ನಿಜಕ್ಕೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೈಫ್ ಅಲಿ ಖಾನ್ ಫೋಟೋವೇ?: ನಿಜಾಂಶ ಇಲ್ಲಿದೆ

Saif Ali Kahn: ಸೈಫ್ ಅಲಿ ಖಾನ್ ಅವರ ಎಡಿಟೆಡ್ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಸೈಫ್ ಅಲಿ ಖಾನ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದನ್ನು ಕಾಣಬಹುದು. ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಇದು ಅವರ ಮೇಲಿನ ದಾಳಿಯ ನಂತರದ ಫೋಟೋ ಎಂದು ಹೇಳಲಾಗುತ್ತಿದೆ.

Fact Check: ಮಹಾಕುಂಭದ ಸಂದರ್ಭ ಮೋದಿ, ಆದಿತ್ಯನಾಥ್ 3 ತಿಂಗಳ ಉಚಿತ ರಿಚಾರ್ಜ್ ನೀಡುತ್ತಿದ್ದಾರೆಯೇ?

ಪೋಸ್ಟ್‌ನಲ್ಲಿ ನೀಡಲಾದ ಕೊಡುಗೆ ಮತ್ತು ಲಿಂಕ್ ಎರಡೂ ನಕಲಿ. ಇಂತಹ ಯಾವುದೇ ಉಚಿತ ರಿಚಾರ್ಜ್ ಅನ್ನು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ನೀಡುತ್ತಿಲ್ಲ. ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಸಿಕ್ಕಿಲ್ಲ.

Fact Check: ಗಣರಾಜ್ಯೋತ್ಸವ ಪ್ರಯುಕ್ತ ಫೋನ್‌ ಪೇ 639 ರೂ. ಗಳ ಕ್ಯಾಶ್​ಬ್ಯಾಕ್ ನೀಡುತ್ತಿರುವುದು ನಿಜವೇ?

ನಮ್ಮ ತನಿಖೆಯಲ್ಲಿ ಗಣರಾಜ್ಯೋತ್ಸವದ ಮೊದಲು ಫೋನ್ ಪೇ ಆಫರ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ. ಪೋಸ್ಟ್‌ನಲ್ಲಿ ನೀಡಲಾದ ಆಫರ್ ಮತ್ತು ಲಿಂಕ್ ಎರಡೂ ನಕಲಿ. ಗಣರಾಜ್ಯೋತ್ಸವದಂದು ಫೋನ್ ಪೇನಿಂದ ಅಂತಹ ಯಾವುದೇ ಕೊಡುಗೆಯನ್ನು ನೀಡಲಾಗುತ್ತಿಲ್ಲ. ನೀವುಕೂಡ ಇಂತನ ಲಿಂಕ್ಗಳನ್ನು ಕಂಡರೆ ಅದರ ಮೇಲೆ ಕ್ಲಿಕ್ ಮಾಡಬೇಡಿ.

Fact Check: ಮಹಾಕುಂಭ ಮೇಳಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಬಂದಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ. ಈ ವಿಡಿಯೋವನ್ನು ನವೆಂಬರ್ 2024 ರಲ್ಲಿ ವಾರಣಾಸಿಯಲ್ಲಿ ಯೂಟ್ಯೂಬರ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ.

Fact Check: ಮಹಾಕುಂಭದಲ್ಲಿ ಬಾಬಾಗಳು ಮದ್ಯಪಾನ, ಮಾಂಸಾಹಾರ ಸೇವನೆ ಮಾಡಿದ್ದು ನಿಜವೇ?, ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ

ಟಿವಿ9 ಕನ್ನಡ ತನಿಖೆಯಿಂದ ಈ ವಿಡಿಯೋ ಕುಂಭಮೇಳಕ್ಕೆ ಸಂಬಂಧ ಪಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಈ ವಿಡಿಯೋ ಸೆಪ್ಟೆಂಬರ್ 2024 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಆದ್ದರಿಂದ ನಕಲಿ ಹೇಳಿಕೆಯೊಂದಿಗೆ ಈಗ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಆದರೆ, ಈ ವಿಡಿಯೋ ಯಾವಾಗಿನದ್ದು ಹಾಗೂ ಯಾವ ಜಾಗದ್ದು ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ನಮಗೆ ಸಾಧ್ಯವಾಗಿಲ್ಲ.

Fact Check: ಪಾಕಿಸ್ತಾನದಲ್ಲಿ 6 ಜನ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ಈ ಪೋಸ್ಟ್​ನ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪಾಕಿಸ್ತಾನದಲ್ಲಿ 6 ಸಹೋದರರು ತಮ್ಮ ಸ್ವಂತ ಸಹೋದರಿಯರನ್ನು ಮದುವೆಯಾಗಿಲ್ಲ, ಆದರೆ ಇತರ ಕುಟುಂಬಗಳ 6 ಹುಡುಗಿಯರನ್ನು ಮದುವೆಯಾಗಿದ್ದಾರೆ. ಮದುವೆಯ ಖರ್ಚು ಕಡಿಮೆ ಮಾಡಲು ಈ ಸಾಮೂಹಿಕ ವಿವಾಹ ಮಾಡಲಾಗಿದೆ.

Fact Check: ನೇಪಾಳ-ಟಿಬೆಟ್‌ನಲ್ಲಿ ಭೂಕಂಪ ಎಂದು ಮನೆಗಳು ಕುಸಿದು ಬೀಳುವ ಜಪಾನ್​ನ ವಿಡಿಯೋ ವೈರಲ್

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ ಎಂದು ಕಂಡುಬಂದಿದೆ. ಜಪಾನ್ನಲ್ಲಿ ಜನವರಿ 2024 ರಂದು ಭೂಕಂಪ ಸಂಭವಿಸಿದಾಗ ಅನೇಕ ಮನೆಗಳು ಕುಸಿದು ಬಿದ್ದ ವಿಡಿಯೋ ಇದಾಗಿದೆ. ನೇಪಾಳ-ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪಕ್ಕೂ ಈ ವಿಡಿಯೋಕ್ಕು ಯಾವುದೇ ಸಂಬಂಧವಿಲ್ಲ.

Fact Check: ಹೊಸ ನಿಯಮ, ವಾಟ್ಸ್ಆ್ಯಪ್​ನಲ್ಲಿ​ ಹೀಗೆ ಮೆಸೇಜ್ ಮಾಡಿದ್ರೆ ವಾರೆಂಟ್ ಇಲ್ಲದೆ ಬಂಧನ?

Kannada Fact Check News: ವೈರಲ್ ಪೋಸ್ಟ್​ನಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಉದಾಹರಣೆಗೆ - ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಕುರಿತು ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ, ಹಾಗೆ ಮಾಡುವುದರಿಂದ ವಾರಂಟ್ ಇಲ್ಲದೆ ಬಂಧನಕ್ಕೆ ಕಾರಣವಾಗಬಹುದು, ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಎಂಬ ಕುರಿತು ಕ್ಲೈಮ್‌ಗಳನ್ನು ಮಾಡಲಾಗಿದೆ.

Fact Check: ಮಹಾಕುಂಭದಲ್ಲಿ ಬೆಂಕಿಯೊಂದಿಗೆ ಅದ್ಭುತ ಸಾಹಸ ಎಂದು ಚೀನಾದ ವಿಡಿಯೋ ವೈರಲ್

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಭಾರತದ್ದು ಅಥವಾ ಪ್ರಯಾಗ್ರಾಜ್​ದು ಅಲ್ಲ, ಈ ವಿಡಿಯೋ ಚೀನಾದಿಂದ ಬಂದಿದೆ. ವೈರಲ್ ವಿಡಿಯೋದಲ್ಲಿ ಕೆಲವು ಬೋರ್ಡ್‌ಗಳು ಚೀನೀ ಭಾಷೆಯಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ.

Fact Check: ತಲೆ ಎತ್ತಿವೆ ಪೆಟ್ರೋಲ್ ಪಂಪ್ ಡೀಲರ್ ಶಿಪ್ ನೀಡುವ ನಕಲಿ ವೆಬ್​ಸೈಟ್​: ಎಚ್ಚರ ವಹಿಸಿ

ಇತ್ತೀಚಿನ ದಿನಗಳಲ್ಲಿ ಕೆಲವು ವೆಬ್‌ಸೈಟ್‌ಗಳು ಪೆಟ್ರೋಲ್ ಪಂಪ್ ಡೀಲರ್‌ಶಿಪ್‌ಗಳನ್ನು ನೀಡುತ್ತಿವೆ. ಅಪ್ಲಿಕೇಶನ್ ಸೇರಿದಂತೆ ಎಲ್ಲಾ ಅಗತ್ಯ ಕಾರ್ಯವಿಧಾನಗಳು ಆ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಆದರೆ, ಅಂತಹ ವೆಬ್‌ಸೈಟ್ ಎಷ್ಟು ಸತ್ಯವಾಗಿದೆ?. ಇದೀಗ ಪೆಟ್ರೋಲ್ ಪಂಪ್ ಡೀಲರ್‌ಶಿಪ್‌ಗಳಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ ಎಂದು ಹೇಳಲಾಗುತ್ತಿರುವ ಪೋಸ್ಟ್ ವೈರಲ್ ಆಗುತ್ತದೆ. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ( https://petrolpumpksk.com/ ) ಅರ್ಜಿ ಸಲ್ಲಿಸಲು ಕೇಳಲಾಗಿದೆ.