Farmer
ರೈತರನ್ನು ಈ ದೇಶದಲ್ಲಿ ಅನ್ನದಾತರೆಂದೇ ಗೌರವಿಸಲಾಗುತ್ತದೆ. ಪ್ರತಿಯೊಬ್ಬರು ಬದುಕಲು ಬೇಕಾದ ಆಹಾರವನ್ನು ಬೆಳೆಯುವುದು ರೈತರೇ. ಭಾರತ ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಇರುವ ದೇಶ. ಆದರೆ, ರೈತನಿಗೆ ಆತನ ಶ್ರಮಕ್ಕೆ ತಕ್ಕಷ್ಟು ಆದಾಯ ಸಿಗುತ್ತಿಲ್ಲದಿರುವುದು ವಾಸ್ತವದ ಸಂಗತಿ. ಅಂತೆಯೇ, ಗ್ರಾಮೀಣ ಭಾಗ ಈಗಲೂ ಕೂಡ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಬೆಳೆ ನಾಶ ಆಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿನ ಏರುಪೇರಿನಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗೆ ಹಲವು ಹಿನ್ನಡೆ, ಸಮಸ್ಯೆಗಳ ನಡುವೆ ರೈತನ ಕೈಂಕರ್ಯ ಮುಂದುವರಿಯುತ್ತಿರುತ್ತದೆ.