AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI

RBI

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಯಾಗಿದ್ದು, ಭಾರತದ ಆರ್ಥಿಕ ಚೌಕಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 1935 ರಲ್ಲಿ ಸ್ಥಾಪಿತವಾದ ಆರ್‌ಬಿಐ ಭಾರತೀಯ ರೂಪಾಯಿಯನ್ನು ವಿತರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ರಾಷ್ಟ್ರದ ಹಣಕಾಸು ನೀತಿಯನ್ನು ನಿಯಂತ್ರಿಸುತ್ತದೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುತ್ತದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಕೇಂದ್ರೀಯ ನಿರ್ದೇಶಕರ ಮಂಡಳಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಆರ್‌ಬಿಐ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ, ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೀತಿಗಳನ್ನು ಜಾರಿಗೊಳಿಸುತ್ತದೆ.

ಇನ್ನೂ ಹೆಚ್ಚು ಓದಿ

RBI MPC Meet: ಬಡ್ಡಿದರ 25 ಮೂಲಾಂಕಗಳಷ್ಟು ಇಳಿಸಿದ ಆರ್​ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ

RBI Governor Sanjay Malhotra announces policy decisions of MPC: ತತ್​ಕ್ಷಣವೇ ಜಾರಿಗೆ ಬರುವಂತೆ ಆರ್​ಬಿಐ ತನ್ನ ರಿಪೋ ದರವನ್ನು ಶೇ. 5.5ರಿಂದ ಶೇ. 5.25ಕ್ಕೆ ಇಳಿಸಿದೆ. ಆರ್​ಬಿಐನ ಪಾಲಿಸಿ ಸ್ಟ್ಯಾನ್ಸ್ ಅಥವಾ ನೀತಿ ನಿಲುವನ್ನು ನ್ಯೂಟ್ರಲ್​ಗೆ ಇಡಲಾಗಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು. ಹಣದುಬ್ಬರ ಶೇ. 2ರಷ್ಟಿರಬಹುದು ಎಂದೂ ಅಂದಾಜಿಸಲಾಗಿದೆ.

ಟ್ಯಾರಿಫ್​ನಿಂದ ರುಪಾಯಿ ಮೌಲ್ಯ ಕುಸಿದಿದೆ, ಆದರೆ, ಕರೆನ್ಸಿ ದುರ್ಬಲಗೊಂಡಿಲ್ಲ: ಎಸ್​ಬಿಐ ರಿಸರ್ಚ್

SBI Research report defends Rupee: ಡಾಲರ್ ಎದುರು ರುಪಾಯಿ ಮೌಲ್ಯ ಗುರುವಾರ ಒಂದು ಹಂತದಲ್ಲಿ 90.56ರವರೆಗೂ ಕುಸಿದಿದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ ರುಪಾಯಿ ಮೌಲ್ಯ ಅತಿಹೆಚ್ಚು ಕುಸಿದಿದೆಯದರೂ, ಕರೆನ್ಸಿ ದುರ್ಬಲಗೊಂಡಿಲ್ಲ. ಅತಿ ಕಡಿಮೆ ಪ್ರಕ್ಷುಬ್ದತೆಯ ಕರೆನ್ಸಿಗಳಲ್ಲಿ ರುಪಾಯಿಯೂ ಒಂದು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ

RBI declares these 3 as safest banks in India: ದೇಶದ ಮೂರು ಅಗ್ರಗಣ್ಯ ಬ್ಯಾಂಕುಗಳನ್ನು ಡೊಮೆಸ್ಟಿಕ್ ಸಿಸ್ಟಮಿಕಲಿ ಇಂಪಾರ್ಟೆಂಟ್ ಬ್ಯಾಂಕುಗಳೆಂದು ಆರ್​ಬಿಐ ವರ್ಗೀಕರಿಸಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳು ದೇಶದ ಅತ್ಯಂತ ಸುರಕ್ಷಿತ ಮತ್ತು ಅತಿ ಮುಖ್ಯ ಬ್ಯಾಂಕುಗಳೆನಿಸಿವೆ. ಈ ಮೂರು ಬ್ಯಾಂಕುಗಳಿಗೆ ಆರ್​​ಬಿಐ ವಿಶೇಷ ಮತ್ತು ಹೆಚ್ಚುವರಿ ಮಾರ್ಗಸೂಚಿ ನೀಡಿದೆ.

ಇಂದಿನಿಂದ ಆರ್​ಬಿಐ ಎಂಪಿಸಿ ಸಭೆ; ಡಿ. 5ಕ್ಕೆ ಪಾಲಿಸಿ ನಿರ್ಧಾರ ಪ್ರಕಟ; ಬಡ್ಡಿದರ ಮತ್ತಷ್ಟು ಇಳಿಯುತ್ತಾ?

RBI MPC meet from today: ಭಾರತೀಯ ರಿಸರ್ವ್ ಬ್ಯಾಂಕ್​ನ ಎಂಪಿಸಿ ಸಭೆ ಇಂದು ಡಿಸೆಂಬರ್ 3ರಿಂದ ಆರಂಭವಾಗಿದೆ. ಡಿ. 5ರಂದು ಸಭೆಯ ನಿರ್ಧಾರವನ್ನು ಆರ್​ಬಿಐ ಗವರ್ನರ್ ಪ್ರಕಟಿಸುತ್ತಾರೆ. ರಿಪೋದರ ಅಥವಾ ಬಡ್ಡಿದರವನ್ನು ಎಂಪಿಸಿ ಸಭೆಯಲ್ಲಿ ಪರಿಷ್ಕರಿಸಲು ನಿರ್ಧರಿಸಲಾಗುತ್ತದಾ ಎಂಬುದು ಕುತೂಹಲದ ಸಂಗತಿ. ಆರ್ಥಿಕತೆ, ಹಣದುಬ್ಬರ, ಬಾಹ್ಯ ವಾತಾವರಣ, ಹಣದ ಹರಿವು ಇತ್ಯಾದಿ ಹಲವು ಅಂಶಗಳನ್ನು ಎಂಪಿಸಿ ಸಭೆಯಲ್ಲಿ ಅವಲೋಕಿಸಲಾಗುತ್ತದೆ.

Bank Holidays: ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

Bank holidays list on 2025 December: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 18 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಒಂದು ಸಾರ್ವತ್ರಿಕ ರಜೆಯೂ ಸೇರಿದೆ. ಹಾಗೆಯೇ, ಆರು ಶನಿವಾರ ಮತ್ತು ಭಾನುವಾರದ ರಜೆಗಳಿವೆ. ಗೋವಾ ವಿಮೋಚನಾ ದಿನ ಹಾಗೂ ಕೆಲ ಪುಣ್ಯತಿಥಿಗಳು ಡಿಸೆಂಬರ್​ನಲ್ಲಿ ಇವೆ. ಕರ್ನಾಟಕದಲ್ಲಿ ಒಟ್ಟು 7 ದಿನ ಮಾತ್ರ ರಜೆ ಇರುವುದು.

ಬ್ಯಾಂಕುಗಳ ಇಂಟರ್ನೆಟ್ ಡೊಮೈನ್ ಬದಲಾಗಿದೆ ಗಮನಿಸಿ… ಡಾಟ್ ಕಾಮ್ ಇರಲ್ಲ, ಕೋ ಡಾಟ್ ಇನ್ ಕೂಡ ಇರಲ್ಲ

Know why banks in India change their website domain to bank.in: ಭಾರತದ ಬ್ಯಾಂಕುಗಳ ವೆಬ್​ಸೈಟ್​ಗಳ ಡೊಮೈನ್ ಅನ್ನು ಡಾಟ್ ಕಾಮ್, ಡಾಟ್ ಕೋ ಡಾಟ್ ಇನ್​ನಿಂದ ಡಾಟ್ ಬ್ಯಾಂಕ್ ಡಾಟ್ ಇನ್​ಗೆ ಬದಲಾಗಿದೆ. ಗ್ರಾಹಕರ ಸುರಕ್ಷತೆ ಮತ್ತು ವೆಬ್​ಸೈಟ್​​ನ ಭದ್ರತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ 31ರೊಳಗೆ ಬ್ಯಾಂಕುಗಳು ಡೊಮೈನ್ ಬದಲಿಸಬೇಕು ಎಂದು ಆರ್​​ಬಿಐ ಸೂಚಿಸಿತ್ತು.

ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್​ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

Karnataka Bank's Rs 1,00,000 crore fat finger error: ಕರ್ಣಾಟಕ ಬ್ಯಾಂಕ್ ಎರಡು ವರ್ಷದ ಹಿಂದೆ ತಪ್ಪಾದ ಅಕೌಂಟ್​ಗೆ ಒಂದು ಲಕ್ಷ ಕೋಟಿ ರೂ ಹಣವನ್ನು ವರ್ಗಾಯಿಸಿದ ಘಟನೆ ಬೆಳಕಿಗೆ ಬಂದಿದೆ. ನಿಷ್ಕ್ರಿಯ ಖಾತೆಗೆ ವರ್ಗಾವಣೆ ಆದ ಆ ಹಣವನ್ನು ರಿವರ್ಸ್ ಮಾಡಲು 3 ಗಂಟೆ ಬೇಕಾಯಿತು. ಈ ಪ್ರಮಾದವನ್ನು ಬ್ಯಾಂಕ್​ನ ಆಡಳಿತ ಮಂಡಳಿ ಗಮನಕ್ಕೆ ತರಲು 6 ತಿಂಗಳಾಯಿತು. ಈ ಆಂತರಿಕ ವ್ಯವಸ್ಥೆಯ ದೌರ್ಬಲ್ಯವು ಆರ್​ಬಿಐನ ದೃಷ್ಟಿ ನೆಡುವಂತೆ ಮಾಡಿದೆ.

ನೋಟಿನ ಮಳೆ ಸುರಿಸುತ್ತೇವೆಂದು ಜನರಿಗೆ ಉಂಡೆನಾಮ: ಬೆಂಗಳೂರಿನಲ್ಲಿ ಕಳ್ಳ ಸ್ವಾಮಿಗಳು ಸೇರಿ ಹತ್ತು ಆರೋಪಿಗಳ ಬಂಧನ

‘ಹಣದ ಮಳೆ’ ಆಮಿಷವೊಡ್ಡಿ ಅಮಾಯಕರನ್ನು ವಂಚಿಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರಿನ ಹಸೂರು ಗೇಟ್ ಪೊಲೀಸರು ಭೇದಿಸಿದ್ದಾರೆ. ನಕಲಿ ಸ್ವಾಮೀಜಿಗಳು 2000 ರೂ ನೋಟುಗಳ ಸೀರಿಯಲ್ ಸಂಖ್ಯೆಗಳನ್ನು ತಿರುಚಿ, ಡಬಲ್ ಹಣದ ಆಸೆಗೆ ಬಿದ್ದ ಗ್ರಾಹಕರಿಂದ ಅಸಲಿ ಹಣ ಪಡೆಯುತ್ತಿದ್ದರು. ಆರ್‌ಬಿಐ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೋಟ್ಯಂತರ ರೂ ಮೌಲ್ಯದ ನಕಲಿ ನೋಟು, ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆಧಾರ್​ನಿಂದ ಬ್ಯಾಂಕ್ ವಹಿವಾಟು ವರೆಗೆ: ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ

ನವೆಂಬರ್ ತಿಂಗಳು ಆರಂಭವಾಗಿದ್ದು, ಆಧಾರ್, ಬ್ಯಾಂಕಿಂಗ್, ಜಿಎಸ್‌ಟಿ ಮತ್ತು ಪಿಂಚಣಿಗೆ ಸಂಬಂಧಿಸಿದ 7 ಪ್ರಮುಖ ಹಣಕಾಸು ನಿಯಮಗಳು ಬದಲಾಗಿವೆ. ಮಕ್ಕಳ ಆಧಾರ್ ಅಪ್‌ಡೇಟ್ ಉಚಿತವಾಗಿದ್ದು, ಬ್ಯಾಂಕ್ ಖಾತೆಗಳಿಗೆ 4 ನಾಮಿನಿಗಳನ್ನು ಸೇರಿಸಬಹುದು. ಹೊಸ GST ಸ್ಲ್ಯಾಬ್‌ಗಳು ಜಾರಿಗೆ ಬಂದಿದ್ದು, ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಬದಲಾದ ನಿಯಮಗಳ ಮಾಹಿತಿ ಇಲ್ಲಿದೆ.

Karnataka Rajyotsava 2025: ಕನ್ನಡ ರಾಜ್ಯೋತ್ಸವ, ಕರ್ನಾಟಕದಲ್ಲಿ ಶನಿವಾರ ಬ್ಯಾಂಕ್ ರಜೆಯೇ?

Karnataka Rajyotsava 2025 and Bank Holiday: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕ್​ಗಳಿಗೆ ರಜೆ ಇರಲಿದೆ. ಆರ್​​ಬಿಐ ರಜೆ ವೇಳಾಪಟ್ಟಿ ಪ್ರಕಾರ ರಾಜ್ಯದಲ್ಲಿ ಯಾವೆಲ್ಲ ಬ್ಯಾಂಕ್​ಗಳು ರಜೆ ಇರಲಿವೆ ಎಂಬ ವಿವರ ಇಲ್ಲಿದೆ.