ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಕಹಳೆ, ಕರ್ನಾಟಕದಲ್ಲಿಲ್ಲ ಭಾರತ್ ಬಂದ್​ಗೆ ಬೆಂಬಲ

ಬೆಂಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್​ಗೆ ಕರೆ ನೀಡಿವೆ. ದೇಶವ್ಯಾಪಿ ಮುಷ್ಕರಕ್ಕೆ ಕಹಳೆ ಮೊಳಗಿದ್ರೆ, ಜನರಲ್ಲಿ ಗೊಂದಲ ಹೆಚ್ಚಾಗಿದೆ. ದಿನನಿತ್ಯದ ವಸ್ತುಗಳಿಗೆ ಏನ್ಮಾಡೋದು..? ಬಂದ್ ಇರುತ್ತಾ..? ಇರಲ್ವಾ..? ಆಫೀಸ್‌ಗೆ ಹೇಗೆ ಹೋಗೋದಪ್ಪಾ ಅನ್ನೋ ಕನ್ಫ್ಯೂಷನ್ಸ್​
ಕಾಡ್ತಿವೆ. ಆದ್ರೆ, ಭಾರತ ಬಂದ್ ಇದ್ರೂ ಡೋಂಟ್ ವರಿ. ಎಲ್ರೂ ನಿರಾಳವಾಗಿರಿ.

‘ಭಾರತ್ ಬಂದ್’ ಇದ್ರೂ ಡೋಂಟ್ ವರಿ!
ಯೆಸ್.. ಕಾರ್ಮಿಕ ಸಂಘಟನೆಗಳು ಭಾರತ್ ಬಂದ್​ಗೆ ಕರೆ ಕೊಟ್ಟಿವೆ. ಆದ್ರೆ, ನೀವು ಟೆನ್ಷನ್ ಮಾಡ್ಕೊಳ್ಳೋ ಅಗತ್ಯವೇ ಇಲ್ಲ. ಯಾಕಂದ್ರೆ ರಾಜ್ಯದಲ್ಲಿ ಯಾವುದೇ ಸೇವೆಗೆ ಕೊರತೆ ಇಲ್ಲ. ಯಾವುದೇ ಎಫೆಕ್ಟ್ ಕೂಡ ಆಗಲ್ಲ. ಹಾಗಿದ್ರೆ, ಇಂದು ಏನೆಲ್ಲಾ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ಏನೆಲ್ಲಾ ಸಿಗುತ್ತೆ..?
ಇಂದು ಮುಷ್ಕರ ಇದ್ರೂ ಹಾಲು, ದಿನಸಿ, ಹಣ್ಣು ತರಕಾರಿ, ಪೇಪರ್ ನಿಮ್ಮ ಎಂದಿನಂತೆ ಸಿಗಲಿವೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ರಸ್ತೆಗಿಳಿಯಲಿದ್ದು ಯಾವುದೇ ಭಯ ಬೇಡ. ಇತ್ತ ಮೆಟ್ರೋ ರೈಲು ಕೂಡ ಎಂದಿನಂತೆ ಸಂಚರಿಸಲಿದ್ದು ಆಫೀಸ್​ಗೆ ಹೋಗೋರು ಟೆನ್ಷನ್ ಫ್ರೀಯಾಗಿ. ಜೊತೆಗೆ ತುರ್ತು ಸೇವೆಗಳಾದ ಆಸ್ಪತ್ರೆ, ಆ್ಯಂಬುಲೆನ್ಸ್, ಮೆಡಿಕಲ್ ಶಾಪ್​​ಗಳು ಕೂಡ ದಿನದ 24 ಗಂಟೆಯೂ ಓಪನ್ ಆಗಿರಲಿವೆ. ಮಾಲ್​ಗಳು ಓಪನ್ ಆಗಿದ್ರೆ, ಫಿಲ್ಮ್ ಛೇಂಬರ್ ತಟಸ್ಥವಾಗಿರೋದ್ರಿಂದ ಚಿತ್ರಪ್ರದರ್ಶನ ಎಂದಿನಂತೆ ಇರಲಿದೆ. ಓಲಾ, ಉಬರ್, ಟ್ಯಾಕ್ಸಿ ಚಾಲಕ & ಮಾಲೀಕರ ಸಂಘ ಬೆಂಬಲ ನೀಡದಿರೋದ್ರಿಂದ ಈ ಸೇವೆಗಳಿಗೆ ಯಾವುದೇ ಎಫೆಕ್ಟ್ ಆಗೋದಿಲ್ಲ. ಏರ್‌ಪೋರ್ಟ್ ಟ್ಯಾಕ್ಸಿಗಳು ಸಂಚಾರದಲ್ಲಿ ವ್ಯತ್ಯಯವಿಲ್ಲ.

ಸರ್ಕಾರಿ ಶಾಲಾ-ಕಾಲೇಜುಗಳಿಗೆ ಇಲ್ಲ ರಜೆ:
ಇತ್ತ ಕಾರ್ಮಿಕ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ರೆ, ರಾಜ್ಯ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಬೇಡಿ ಅಂತ ಜನರಿಗೆ ಸಂದೇಶ ರವಾನಿಸಿದೆ. ಅದ್ರಲ್ಲೂ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಖಾಸಗಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆಯಾಗಿಲ್ಲ. ಆದ್ರೆ ಪರಿಸ್ಥಿತಿ ನೋಡಿಕೊಂಡು ಶಾಲಾ ಆಡಳಿತ ಮಂಡಳಿಗಳೇ ತೀರ್ಮಾನ ಕೈಗೊಳ್ಳಬೇಕು ಅಂತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.

ಹೋಟೆಲ್​ಗಳು ಬಂದ್ ಆಗಲ್ಲ.. ಸಿಗುತ್ತೆ ಎಲ್ಲಾ ಫುಡ್:
ಇತ್ತ, ಕಾರ್ಮಿಕ ಸಂಘಟನೆ ಬಂದ್​ ಕರೆಗೆ ಹೋಟೆಲ್ ಮಾಲೀಕರ ಸಂಘ ಕೇವಲ ಬಾಹ್ಯ ಬೆಂಬಲ ನೀಡಿದೆ. ಹೀಗಾಗಿ ಎಲ್ಲಾ ಹೋಟೆಲ್​ಗಳು ಓಪನ್ ಆಗಿರಲಿದ್ದು, ಉಪಾಹಾರ, ಲಂಚ್​​ ಸೇರಿ ನಿಮಗಿಷ್ಟವಾದ ಆಹಾರ ಸವಿಯೋಕೆ ಯಾವುದೇ ಅಡ್ಡಿ ಇಲ್ಲ. ಒಟ್ನಲ್ಲಿ, ದೇಶವ್ಯಾಪಿ ಕರೆ ನೀಡಿರೋ ಬಂದ್​ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ನೀಡಿದೆ. ಇದ್ರಿಂದ ಭಾರತ್ ಬಂದ್ ಅಷ್ಟೊಂದು ಬಿಸಿಯಾಗೋದು ಡೌಟ್.

Related Posts :

Category:

error: Content is protected !!

This website uses cookies to ensure you get the best experience on our website. Learn more