ಲಾಕ್​ಡೌನ್ ಇದ್ರೂ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿಲ್ಲ

ಬೆಂಗಳೂರು: ಕೊರೊನಾ ಕೇಸ್​ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ 7ದಿನ ಲಾಕ್​ಡೌನ್ ಘೋಷಿಸಲಾಗಿದೆ. ಹೀಗಾಗಿ ಜನ ಯಾರು ರಸ್ತೆಗಿಳಿಯಲ್ಲ ಎಂದು ಅಂದುಕೊಂಡಿದ್ದವರಿಗೆ ಶಾಕ್ ಆಗಿದೆ.

ಕಾರ್ಪೋರೇಶನ್ ಬಳಿ ವಾಹನಗಳ ಸಂಚಾರ ಹೆಚ್ಚಾದ ಹಿನ್ನೆಲೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಲಾಕ್​ಡೌನ್ ಇದ್ರೂ ವಾಹನಗಳ ಓಡಾಟಕ್ಕೆ ಇನ್ನೂ ಬ್ರೆಕ್ ಬಿದ್ದಿಲ್ಲ. ಒಂದು ಕಡೆ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಿಗ್ನಲ್ ಇಲ್ಲದೇ ಇರೋದ್ರಿಂದ ಕೆಲವು ವಾಹನಗಳು ಅಡ್ಡಾ ದಿಡ್ಡಿ ಸಂಚರಿಸುತ್ತಿವೆ.

ಖಾಕಿ‌ಯಿಂದ ಖಡಕ್ ವಾರ್ನಿಂಗ್:
ಆನಂದ್ ರಾವ್ ಸರ್ಕಲ್​ನಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಖಾಕಿ ಪಡೆ ಖಡಕ್ ವಾರ್ನಿಂಗ್ ನೀಡ್ತಿದೆ. ಪೊಲೀಸ್ ಸಿಬ್ಬಂದಿ ಪ್ರತಿಯೊಂದು ವೆಹಿಕಲ್ ತಪಾಸಣೆ ಮಾಡ್ತಿದ್ದಾರೆ. ಟ್ರಾಫಿಕ್ ಕಂಟ್ರೋಲ್ ಮಾಡೋಕೆ ಹರಸಾಹಸ ಪಡ್ತಿದ್ದಾರೆ.

Related Tags:

Related Posts :

Category:

error: Content is protected !!