AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಎಲ್ಲೆಲ್ಲಿ ನೋಡಲಿ ಬಂಗಾರ ಕಾಣುವೆ, ಇದು ಚಿನ್ನದ ಮನೆ

ಚಿನ್ನ ಎಂದರೆ ಮಹಿಳೆಯರ ಕಿವಿ ನೆಟ್ಟಗಾಗುತ್ತದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದ್ದೂ ಚಿನ್ನ ಖರೀದಿ ಮಾಡುವುದು ದೂರದ ಮಾತಾಗಿದೆ. ಆದರೆ ಇಲ್ಲೊಂದು ಮನೆಯ ತುಂಬಾ ಚಿನ್ನದ್ದೇ ರಾಶಿ. ಹೌದು, ಚಿನ್ನದಿಂದಲೇ ಅಲಂಕರಿಸಲ್ಪಟ್ಟ ಮನೆಯಿದು. ಈ ಮನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ನೀವೇನಾದ್ರು ಈ ಮನೆಯನ್ನು ನೋಡಿದ್ರೆ ಶಾಕ್ ಆಗೋದು ಪಕ್ಕಾ. ಹಾಗಾದ್ರೆ ಚಿನ್ನದ ಮನೆ ಇರುವುದು ಎಲ್ಲಿ, ಈ ಮನೆಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Video : ಎಲ್ಲೆಲ್ಲಿ ನೋಡಲಿ ಬಂಗಾರ ಕಾಣುವೆ, ಇದು ಚಿನ್ನದ ಮನೆ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on:Jun 30, 2025 | 2:57 PM

Share

ಇಂದೋರ್, ಜೂನ್ 30 : ಶ್ರೀಮಂತ ವ್ಯಕ್ತಿಗೆ ಮನೆ (house) ಕಟ್ಟೋದು, ದೊಡ್ಡ ವಿಷಯವೇ ಅಲ್ಲವೇ ಅಲ್ಲ. ಅದೇ ಮಧ್ಯಮ ವರ್ಗದ ಜನರಿಗೆ ತಮ್ಮದೇ ಸ್ವಂತ ಸೂರು ಕಟ್ಟಿಕೊಳ್ಳುವುದು ತಮ್ಮ ಜೀವಮಾನದ ಕನಸು. ಸ್ವಂತ ಮನೆಗಾಗಿ ರಾತ್ರಿ ಹಗಲೆನ್ನದೇ ಕಷ್ಟ ಪಡುವವರನ್ನು ನೋಡಿರಬಹುದು. ಆದ್ರೆ ಕೈಯಲ್ಲಿ ದುಡಿದ್ರೆ ಐಷಾರಾಮಿ ಮನೆ ಕಟ್ಟೋದು ದೊಡ್ಡ ವಿಷಯವಲ್ಲ ಬಿಡಿ. ಆದರೆ ಇದೀಗ ಇಂದೋರ್‌ನಲ್ಲಿ (Indore) ಚಿನ್ನದ ಮನೆಯೊಂದಿದೆ. ಮನೆಯೊಳಗೆ ಹೊಕ್ಕರೆ ಎಲ್ಲಿ ನೋಡಿದ್ದರಲ್ಲಿ ಚಿನ್ನ ಮಾತ್ರ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಚಿನ್ನದಿಂದ ಅಲಂಕರಿಸಿಲ್ಪಟ್ಟ ಮನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದ್ದು ನೆಟ್ಟಿಗರು ಈ ಮನೆ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

@FollowAkshay1 ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇಂದೋರ್‌ನಲ್ಲಿ ಚಿನ್ನದಿಂದ ಅಲಂಕರಿಸಲ್ಪಟ್ಟ ಮನೆ, ಹೊರಗಿನ ಗೋಶಾಲೆ ಸಕಾರಾತ್ಮಕತೆ ಹಾಗೂ ದೈವಿಕ ಆಶೀರ್ವಾದ ಆಶೀರ್ವಾದವನ್ನು ತರುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಅಕ್ಷಯ್ ಅವರು ಈ ಮನೆಯ ಮಾಲೀಕರೊಂದಿಗೆ ಮಾತನಾಡಿ, ಹೊಸ ದುಬಾರಿ ಬೆಲೆಯ ಐಷಾರಾಮಿ ಮನೆಯನ್ನು ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮನೆಯ ಹೊರಗಡೆ ಗೋಶಾಲೆಯಿದ್ದು, ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಈ ಭವ್ಯ ಬಂಗಲೆಯೊಳಗೆ ಕಾಲಿಟ್ಟರೆ ಗೋಡೆಯ ತುಂಬೆಲ್ಲಾ ಚಿನ್ನವೇ ತುಂಬಿಹೋಗಿದೆ. ಚಿನ್ನವನ್ನು ಬಳಸಿ ಗೋಡೆಯ ತುಂಬೆಲ್ಲ ಆಕರ್ಷಕ ವಿನ್ಯಾಸವನ್ನು ಬರೆಯಲಾಗಿದೆ. ಇನ್ನು ಈ ಮನೆಯ ಸ್ವಿಚ್ ಬೋರ್ಡ್, ಮನೆಯ ಸಿಂಕ್ ಹಾಗೂ ವಿಗ್ರಹ ಕೂಡ ಚಿನ್ನದಿಂದಲೇ ಮಾಡಲಾಗಿರುವುದು ನೋಡಬಹುದು.

ಇದನ್ನೂ ಓದಿ
Image
ಏನ್ ಹಣೆಬರಹ ಅಂತೀರಾ, ರಜೆ ತಕೊಂಡ್ರು ನೆಮ್ಮದಿಯಾಗೋಕೆ ಬಿಡಲ್ಲ ಬಾಸ್
Image
ಚಲಿಸುವ ಬೈಕ್‌ನಲ್ಲೇ ಯುವಕ ಯುವತಿಯ ರೊಮ್ಯಾನ್ಸ್
Image
ಇಲ್ಲಿ ದಿನನಿತ್ಯ ಒದ್ದಾಟ, ಹೋರಾಟ : ಭಾರತೀಯ ಹೀಗೆನ್ನುತ್ತಿರುವುದು ಏಕೆ?
Image
ಈ ಬ್ರಿಟಿಷ್ ಪ್ರಜೆ ಧೈರ್ಯ ಮೆಚ್ಚಲೇಬೇಕು, ಪಾಕ್​​​ನಲ್ಲಿ ಭಾರತದ ಹಾವ

ಇದನ್ನೂ ಓದಿ :Video : ಮಕ್ಕಳಿಗೆ ಊಟ ಮಾಡಲು ತಾಯಂದಿರು ತರಬೇತಿ ನೀಡುವುದು ಹೀಗೆ, ಟೀಕೆಗೆ ಕಾರಣವಾಯ್ತು ಪೌಷ್ಟಿಕ ತಜ್ಞೆಯ ವಿಡಿಯೋ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜೂನ್ 29 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಚಿನ್ನದ ಮನೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಆದಾಯ ತೆರಿಗೆ ಪಾವತಿಗಳ ಬಗ್ಗೆ ವಿವರವನ್ನು ನೀಡುತ್ತೀರಾ ಎಂದಿದ್ದಾರೆ. ಮತ್ತೊಬ್ಬರು, ಕಳ್ಳ ಖದೀಮರು ಬರದಂತೆ ಯಾವ ರೀತಿ ಸೆಕ್ಯೂರಿಟಿ ವ್ಯವಸ್ಥೆಯಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ನಾವೇನಾದ್ರೂ ಇಂತಹ ಭವ್ಯ ಬಂಗಲೆಯಲ್ಲಿದ್ದರೆ ರಾತ್ರಿ ನಿದ್ದೆಯು ಬರುತ್ತಿಲ್ಲ ಕಾಣಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Mon, 30 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ