ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ನಟ ಆಶಿಷ್ ವಿದ್ಯಾರ್ಥಿ. ಪ್ರಸ್ತುತ ಅವರು ಫುಡ್ ಬ್ಲಾಗರ್ ಆಗಿ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಆಹಾರದ ಜತೆಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿಯನ್ನು ತಿಳಿಯುವ ಅವರು ಅದನ್ನೆಲ್ಲವನ್ನೂ ಯುಟ್ಯೂಬ್ ಮೂಲಕ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ. ಆಶಿಷ್ ವಿದ್ಯಾರ್ಥಿ (Ashish Vidyarthi) ಅವರು ಕರ್ನಾಟಕ ಸೇರಿದಂತೆ ದೇಶಾದ ವಿವಿಧ ಮೂಲೆಗಳಿಗೆ ಪ್ರವಾಸ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆಹಾರದ ಕುರಿತ ಅವರ ವಿಡಿಯೋಗಳಂತೂ ನೋಡುಗರಿಗೆ ಬಾಯಲ್ಲಿ ನೀರೂರಿಸುತ್ತವೆ. ಇತ್ತೀಚೆಗೆ ಆಶಿಷ್ ವಿದ್ಯಾರ್ಥಿ ಹೊಸ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಬೆಂಗಳೂರಿನ (Bengaluru) ‘ಗೌಡರ ಮುದ್ದೆ ಮನೆ’ಯ ಊಟದ ಪರಿಚಯ ಮಾಡಿಕೊಟ್ಟಿದ್ದಾರೆ. ಮುದ್ದೆ ಹಾಗೂ ಮಟನ್ ಸವಿದಿರುವ ಆಶಿಷ್ ವಿದ್ಯಾರ್ಥಿಯವರಿಗೆ ಮತ್ತೋರ್ವ ಪ್ರಖ್ಯಾತ ಫುಡ್ ವಿ-ಲಾಗರ್ ಆಗಿರುವ ಕೃಪಾಲ್ ಅಮಾನ್ನ (Kripal Amanna) ಸಾಥ್ ನೀಡಿದ್ದಾರೆ.
ಬೆಂಗಳೂರಿನ ‘ಗೌಡರ ಮುದ್ದೆ ಮನೆ’ಗೆ ಭೇಟಿ ನೀಡಿರುವ ಕೃಪಾಲ್ ಹಾಗೂ ಆಶಿಶ್, ಅದರ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಆಹಾರದ ಕುರಿತ ವಿಡಿಯೋಗಳಿಂದ ದೇಶಾದ್ಯಂತ ಸುದ್ದಿಯಾಗಿರುವ ಆಶಿಶ್ ಹಾಗೂ ಕೃಪಾಲ್ ಸ್ವತಃ ತಮ್ಮೀರ್ವರ ಭೇಟಿಯ ಬಗ್ಗೆಯೂ ಬರೆದುಕೊಂಡಿದ್ದಾರೆ. ‘‘ಎರಡನೇ ಬಾರಿಗೆ ಕೃಪಾಲ್ ಅವರನ್ನು ಭೇಟಿಯಾಗುತ್ತಿದ್ದೇನೆ’’ ಎಂದು ಬರೆದುಕೊಂಡಿರುವ ಆಶಿಶ್ ವಿದ್ಯಾರ್ಥಿ, ‘‘ಇದಿನ್ನೂ ಹೆಚ್ಚಾಗಲಿದೆ. ಇದೀಗ ನಾವು ಗೌಡರ ಮುದ್ದೆ ಮನೆಗೆ ಭೇಟಿ ನೀಡಿದ್ದೇವೆ. ನಿಮಗೂ ವಿಡಿಯೋ ಇಷ್ಟವಾಗಬಹುದು’’ ಎಂದಿದ್ದಾರೆ.
ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿರುವ ಟ್ವೀಟ್:
STRICTLY NON-VEGETARIAN WITH ASHISH VIDYARTHI & @kripalamanna
A culinary storyteller by profession and a passionate human being by nature.
Today Me & Kripal, we drench ourselves in the Love of Gowda cuisine at Gowdara Mudde Mane.
Click to watch?
?https://t.co/IYHAC0diMv pic.twitter.com/VFZHUF3My7— Ashish Vidyarthi (@AshishVid) May 14, 2022
‘ಗೌಡರ ಮುದ್ದೆ ಮನೆ’ಯ ಪರಿಚಯ ಮಾಡಿಸಿರುವ ‘ಕೋಟಿಗೊಬ್ಬ’ ಖ್ಯಾತಿಯ ನಟ, ಫಾರ್ಮಸಿಸ್ಟ್ ಆಗಿದ್ದು, ಇದೀಗ ಹೋಟೆಲ್ ನಡೆಸುತ್ತಿರುವ ಮಾಲಿಕ ಚಂದ್ರಶೇಖರ್ ಅವರನ್ನು ಜನರಿಗೆ ಪರಿಚಯಿಸಿದ್ದಾರೆ. ಜತೆಗೆ ಅಲ್ಲಿನ ಊಟವನ್ನು ಸವಿಯುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದು, ಅದರ ಹಿಂದಿನ ಪಾಕ ಪ್ರವೀಣರನ್ನೂ ಪರಿಚಯಿಸಿದ್ದಾರೆ. ಆಶಿಶ್ ವಿದ್ಯಾರ್ಥಿ ಸವಿದ ಆಹಾರದಲ್ಲಿ ಏನೇನು ವಿಶೇಷವಿದೆ ಎಂಬ ಕುತೂಹಲ ನಿಮಗಿದ್ದರೆ ವಿಡಿಯೋ ಇಲ್ಲಿದೆ.
ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:
– Ashish Vidyarthi (@ashishvidyarthi) 18 Apr 2022
ಬಹುಭಾಷೆಗಳ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಆಶಿಶ್ ವಿದ್ಯಾರ್ಥಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹೊಸ ಹವ್ಯಾಸವು ಜನರನ್ನು ಭೇಟಿಯಾಗಲು, ಅವರನ್ನು ಅರ್ರತ ಮಾಡಿಕೊಳ್ಳುವ ವೇದಿಕೆ ಎನ್ನುವ ಆಶಿಶ್ ವಿದ್ಯಾರ್ಥಿ, ತಮ್ಮ ಅನುಭವಗಳನ್ನು ಯುಟ್ಯೂಬ್ ಮೂಲಕ ಜನರ ಮುಂದೆ ಪ್ರಸ್ತುತಪಡಿಸುತ್ತಾರೆ. ಸರಿಸುಮಾರು 8 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಅವರು ಹೊಂದಿದ್ದಾರೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Tue, 17 May 22