ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಿದೆ. ಏಪ್ರಿಲ್ 19 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ಮಾಹಿತಿ ನೀಡಲಾಗಿದ್ದು, ಮೇ 1ನೇ ತಾರೀಖಿನಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ವಿತರಿಸುವುದಾಗಿ ಸರ್ಕಾರ ತಿಳಿಸಿದೆ. ಸರ್ಕಾರದ ಈ ನಿಲುವಿಗೆ ಸಂಬಂಧಿಸಿದಂತೆ ಹಾಲು ಉತ್ಪನ್ನ ಸಂಸ್ಥೆ ಅಮೂಲ್ ವಿಶೇಷ ಡೂಡಲ್ ಒಂದನ್ನು ರಚಿಸಿದ್ದು, ಲಸಿಕೆ ಸ್ವೀಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ.
ಅಮೂಲ್ ಡೂಡಲ್ ವಿಶೇಷತೆ ಏನು? ಅಮೂಲ್ ತಯಾರಿಸಿರುವ ಡೂಡಲ್ನಲ್ಲಿ ಹಸಿರು ಬಣ್ಣದ ಮಾಸ್ಕ್ ಧರಿಸಿದ ಹುಡುಗಿಯೊಬ್ಬಳು 18+ ಎಂಬ ಬೋರ್ಡ್ ಹಿಡಿದುಕೊಂಡಿದ್ದು, ಆಕೆಯ ಪಕ್ಕ ಪಿಪಿಇ ಕಿಟ್ ಧರಿಸಿದ ನರ್ಸ್ ನಿಂತುಕೊಂಡಿದ್ದಾರೆ. ಪಕ್ಕದಲ್ಲಿ ಲಸಿಕೆ ಶೇಖರಿಸಿಡುವ ಬಾಕ್ಸ್ ಇದ್ದು, ಮೇಲೆ ಚಿತ್ರವೊಂದರಲ್ಲಿ ಲಸಿಕೆ ಬಾಟಲಿಯನ್ನು ತೋರಿಸಲಾಗಿದೆ. ಈ ಚಿತ್ರದ ಒಟ್ಟಾರೆ ಪರಿಕಲ್ಪನೆಯು ಆಸ್ಪತ್ರೆಯನ್ನು ನೆನಪಿಸುವಂತಿದ್ದು, ಮೇಲ್ಭಾದಲ್ಲಿ ನಿಮಗೆ ಹದಿನೆಂಟಾಗಿದ್ದರೆ, ಇನ್ನು ಕಾಯುವುದೇ ಬೇಕಿಲ್ಲ ಎಂದು ಬರೆಯಲಾಗಿದೆ. ಆಂಗ್ಲ ಭಾಷೆಯಲ್ಲಿ No Waiteen’ if you’re eighteen ಎಂದು ಪ್ರಾಸಬದ್ಧವಾದ ಸಾಲನ್ನು ನೀಡಲಾಗಿದೆ. ಜತೆಗೆ ಚಿತ್ರದ ಕೆಳಭಾಗದಲ್ಲಿ Amul Your shot of butter ಎಂಬ ಬರಹವೂ ಇದೆ.
ಅಮೂಲ್ ಹಾಕಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿಕೊಂಡಿದ್ದು, ಪೋಸ್ಟ್ ರಚಿಸಿದವರ ಕ್ರಿಯಾಶೀಲತೆಯನ್ನು ಕೊಂಡಾಡಿದ್ದಾರೆ. ಹೆಚ್ಚಿನವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅತಿ ಶೀಘ್ರದಲ್ಲಿ ಲಸಿಕೆ ಸ್ವೀಕರಿಸುವುದಾಗಿ ಹೇಳಿದ್ದಾರೆ. ಒಬ್ಬರಂತೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಆದಷ್ಟು ಬೇಗ ಸಾಕ್ಷಿಯಾಗಲಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
#Amul Topical: CoVid 19 vaccine for all above 18 to begin soon! pic.twitter.com/7uCAgtBJeN
— Amul.coop (@Amul_Coop) April 20, 2021
@Amul_Coop being always creative. And yes go get your shot if your are 18+ from 1st May. Lets kick out #Covid from our country. https://t.co/BKsYpsMqVW
— Dishant Khobragade (@d_i_s_h_a_n_t) April 21, 2021
#Amul Topical: CoVid 19 vaccine for all above 18 to begin soon! pic.twitter.com/7uCAgtBJeN
— Amul.coop (@Amul_Coop) April 20, 2021
ಇದನ್ನೂ ಓದಿ: Fuel Price Hike: ಇಂಧನ ಬೆಲೆ ಏರಿಕೆ ಬಗ್ಗೆ ಅಮೂಲ್ ಡೂಡಲ್, ನೆಟ್ಟಿಗರ ಶ್ಲಾಘನೆ
ನಿಮ್ಮಲ್ಲಿ ಕೊರೊನಾ ಸೋಂಕಿದೆ; ಹಾಗಾಗಿ ನನ್ನ ಕೈಲಾಸಕ್ಕೆ ನೀವ್ಯಾರೂ ಬರಬೇಡಿ ಎಂದು ಭಾರತೀಯರಿಗೆ ಹೇಳಿದ ನಿತ್ಯಾನಂದ!