ಜಲಮೂಲ ಸಂರಕ್ಷಣೆ ಜಾಗೃತಿ ಮೂಡಿಸಲು ‘ರಿವರ್ಸ್​​ ಆಫ್​ ಇಂಡಿಯಾ’ ಮ್ಯೂಸಿಕ್​ ವಿಡಿಯೋ ಬಿಡುಗಡೆ

ಐಐಟಿ ಮದ್ರಾಸ್​ನ ಹಳೆಯ ವಿದ್ಯಾರ್ಥಿ ಕನ್ನಿಕ್ಸ್ ಕಣ್ಣಿಕೇಶ್ವರನ್​ ರಚಿಸಿದ ಈ ಹಾಡಿನ ಸಾಹಿತ್ಯವು ಭಾರತದ 51 ನದಿಗಳ ಹೆಸರನ್ನು ಒಳಗೊಂಡಿದೆ.

ಜಲಮೂಲ ಸಂರಕ್ಷಣೆ ಜಾಗೃತಿ ಮೂಡಿಸಲು ‘ರಿವರ್ಸ್​​ ಆಫ್​ ಇಂಡಿಯಾ’ ಮ್ಯೂಸಿಕ್​ ವಿಡಿಯೋ ಬಿಡುಗಡೆ
ಸಾಂದರ್ಭಿಕ ಚಿತ್ರ


ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ(IIT) ಮದ್ರಾಸ್​ ಇತ್ತೀಚೆಗೆ ‘ರಿವರ್ಸ್​​ ಆಫ್​ ಇಂಡಿಯಾ’ ಎಂಬ ಮ್ಯುಸಿಕ್​ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದು ಜಲಮೂಲಗಳ ಕುರಿತಾದ ಒಂದು ಸುಂದರ ಗೀತೆಯಾಗಿದೆ. ಐಐಟಿ ಮದ್ರಾಸ್​ನ ಹಳೆಯ ವಿದ್ಯಾರ್ಥಿ ಕನ್ನಿಕ್ಸ್ ಕಣ್ಣಿಕೇಶ್ವರನ್​ ರಚಿಸಿದ ಈ ಹಾಡಿನ ಸಾಹಿತ್ಯವು ಭಾರತದ 51 ನದಿಗಳ ಹೆಸರನ್ನು ಒಳಗೊಂಡಿದೆ.

ಬಾಂಬೆ ಜಯಶ್ರೀ, ಕೌಶಿಕಿ ಚರ್ಕವರ್ತಿ, ರಿಷಿಕ್​ ದೇಸಿಕನ್​ ಮತ್ತು ಅಮೀರ್ತಾ ರಾಮನಾಥ್​ ಅವರು ಹಾಡಿದ ಈ ವಿಡಿಯೋವನ್ನು ಮದ್ರಾಸ್​ನ ಐಐಟಿ ಇಂಟರ್​ನ್ಯಾಷನಲ್​ ಸೆಂಟರ್​ ಫಾರ್​ ಕ್ಲೀನ್​ ವಾಟರ್​(ICCW) ಚಿತ್ರೀಕರಿಸಿದೆ.

ವಿಶ್ವ ಭೂ ದಿನಾಚರಣೆಯಂದು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದನ್ನು ಪ್ರತೀ ವರ್ಷ ಏಪ್ರಿಲ್​ 22ರಂದು ಅಚರಿಸಲಾಗುತ್ತದೆ. ICCW ಮತ್ತು IIT ಮದ್ರಾಸ್​ನ ಎರಡನೇ ವಾರ್ಷಿಕೋತ್ಸವವನ್ನೂ ಈ ದಿನ ಅಚರಿಸಲಾಗಿದೆ. ಕನ್ನಿಕ್ಸ್ ಕಣ್ಣಿಕೇಶ್ವರನ್ ಅವರ ಈ ಯೋಜನೆಯು ನೀರಿನ ಸಂಪನ್ಮೂಲಗಳನ್ನು ಮತ್ತು ಅವುಗಳನ್ನು ಸಂರಕ್ಷಿಸುವ ಮಹತ್ವದ ಕುರಿತಾಗಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನಗಳ ಹಿಡಿದಿದ್ದಾರೆ