Fact Check: ಋಷಿಕೇಶದಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಹೋಗುವ ಭಯಾನಕ ವಿಡಿಯೋದ ಸತ್ಯಾಂಶ ಏನು?

ಟಿವಿ9 ಕನ್ನಡ ಈ ವೈರಲ್ ಪೋಸ್ಟ್ ಬಗ್ಗೆ ತನಿಖೆ ನಡೆಸಿದ್ದು, ಇದು ನಕಲಿ ಎಂದು ಸಾಬೀತಾಗಿದೆ. ಋಷಿಕೇಶದಲ್ಲಿ ಅಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಈ ವಿಡಿಯೋವನ್ನು ಕೃತಕ ಬುದ್ದಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದ್ದೇವೆ.

Fact Check: ಋಷಿಕೇಶದಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಹೋಗುವ ಭಯಾನಕ ವಿಡಿಯೋದ ಸತ್ಯಾಂಶ ಏನು?
Bungee Jumping Fact Check

Updated on: May 25, 2025 | 7:52 PM

ಬೆಂಗಳೂರು (ಮೇ. 25): ಸಾಮಾಜಿಕ ಜಾಲತಾಣಗಳಲ್ಲಿ (Social Media) ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಇದ್ದಕ್ಕಿದ್ದಂತೆ ಮುರಿದು ಬೀಳುವುದನ್ನು ಕಾಣಬಹುದು. ಇದರೊಂದಿಗೆ, ಅದರ ಮೇಲೆ ನಿಂತಿದ್ದ ಜನರು ಕೂಡ ಕೆಳಗೆ ಬೀಳುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಅಪಘಾತ ಋಷಿಕೇಶದಲ್ಲಿ ಸಂಭವಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಋಷಿಕೇಶದಿಂದ ಭಯಾನಕ ವಿಡಿಯೋವೊಂದು ಬಂದಿದೆ, ಅದರಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಬಿದ್ದಿದೆ” ಎಂದು ಬರೆದುಕೊಂಡಿದ್ದಾರೆ.

”ಈ ಘಟನೆಯು ಭದ್ರತಾ ವ್ಯವಸ್ಥೆಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಭಾರತೀಯ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಪತನ?: ವೈರಲ್ ವಿಡಿಯೋದ ನಿಜಾಂಶ ಏನು?
ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದು ನಿಜವೇ?
ಭಾರತದ 553 ಡ್ರೋನ್​ಗಳನ್ನು ಹೊಡೆದುರುಳಿಸಿದೆಯೇ ಪಾಕಿಸ್ತಾನ?
ಭಟಿಂಡಾ ವಾಯುನೆಲೆಯನ್ನು ಪಾಕಿಸ್ತಾನ ನಾಶಪಡಿಸಿದೆಯೇ?: ಇಲ್ಲಿದೆ ನೋಡಿ ನಿಜಾಂಶ

 

ಟಿವಿ9 ಕನ್ನಡ ಈ ವೈರಲ್ ಪೋಸ್ಟ್ ಬಗ್ಗೆ ತನಿಖೆ ನಡೆಸಿದ್ದು, ಇದು ನಕಲಿ ಎಂದು ಸಾಬೀತಾಗಿದೆ. ಋಷಿಕೇಶದಲ್ಲಿ ಅಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಈ ವಿಡಿಯೋವನ್ನು ಕೃತಕ ಬುದ್ದಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದ್ದೇವೆ. ಸಾಕಷ್ಟು ಹುಡುಕಾಟದ ನಂತರ, ಕ್ವೇಕ್ ಸ್ಕೈಫಾಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಮಗೆ ಮೂಲ ವಿಡಿಯೋ ಸಿಕ್ಕಿತು. ಮೇ 3 ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯು ಇದನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ಹೇಳಿದೆ. ಮತ್ತು ಯಾರಿಗೂ ಹಾನಿಯಾಗಿಲ್ಲ ಎಂದು ಬರೆದುಕೊಂಡಿದೆ.

ಈ ಚಾನೆಲ್ ಅನ್ನು ಸ್ಕ್ಯಾನ್ ಮಾಡಿದಾಗ ಇದು ಸ್ವೀಡನ್‌ನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಅಪಘಾತದ ಬಗ್ಗೆ ಮಾಡಲಾದ ಹಲವಾರು AI- ರಚಿತ ವಿಡಿಯೋಗಳನ್ನು ನಾವು ಚಾನೆಲ್‌ನಲ್ಲಿ ಕಂಡುಕೊಂಡಿದ್ದೇವೆ.

Fact Check: ಭಾರತೀಯ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಪತನ?: ವೈರಲ್ ವಿಡಿಯೋದ ನಿಜಾಂಶ ಏನು?

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ದಿ ಕ್ಲಿಫ್ ಬರೆದಿರುವುದನ್ನು ನಾವು ನೋಡಿದ್ದೇವೆ. ಇದರ ಆಧಾರದ ಮೇಲೆ, ಗೂಗಲ್ ಓಪನ್ ಸರ್ಚ್ ಮಾಡಲಾಯಿತು. ನೇಪಾಳದಲ್ಲಿ ದಿ ಕ್ಲಿಪ್ ಎಂಬ ರೆಸಾರ್ಟ್ ಇದೆ ಎಂದು ನಮಗೆ ತಿಳಿದು ಬಂತು, ಅದು ಬಂಗೀ ಜಂಪಿಂಗ್ ಮತ್ತು ಸ್ವಿಂಗಿಂಗ್‌ಗೆ ಬಹಳ ಪ್ರಸಿದ್ಧವಾಗಿದೆ.

ನಾವು ಮತ್ತಷ್ಟು ತನಿಖೆ ನಡೆಸಿ ದಿ ಕ್ಲಿಫ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಪರಿಶೀಲಿಸಿದ್ದೇವೆ. ವೈರಲ್ ವಿಡಿಯೋದ ವೇದಿಕೆಯಲ್ಲಿ SWING ಎಂದು ಬರೆದಿರುವ ಅನೇಕ ವಿಡಿಯೋಗಳನ್ನು ನಾವು ಇಲ್ಲಿ ಕಂಡುಕೊಂಡಿದ್ದೇವೆ.

 

ಖಾಸಗಿ ವೆಬ್​ಸೈಟ್ ಒಂದು ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದ್ದು, ಇವರು ನೇಪಾಳದ ದಿ ಕ್ಲಿಫ್ ರೆಸಾರ್ಟ್ ಅನ್ನು ಸಹ ಸಂಪರ್ಕಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣುವ ಸ್ಥಳ ಅವರಿಗೆ ಸೇರಿದ್ದು ಎಂದು ಅವರು ಹೇಳಿದರು. ಆದರೆ, ಆ ವಿಡಿಯೋವನ್ನು AI ರಚಿಸಿಸಲಾಗಿದೆ ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಡೀಪ್‌ಫೇಕ್ ಅನಾಲಿಸಿಸ್ ಯೂನಿಟ್ (ಡಿಎಯು) ತಜ್ಞರ ತಂಡವು ನೀಡಿದ ಹೇಳಿಕೆ ಕೂಡ ನಮಗೆ ಸಿಕ್ಕಿದೆ. ವಿಡಿಯೋದಲ್ಲಿನ ಮಾನವ ಆಕೃತಿಗಳ ಮೇಲೆ ಕೇಂದ್ರೀಕರಿಸುವ ಕೀಫ್ರೇಮ್‌ಗಳನ್ನು WasitAI ಉಪಕರಣದೊಂದಿಗೆ ಪರಿಶೀಲಿಸಿದ್ದು, ಈ ದೃಶ್ಯಗಳನ್ನು AI ರಚಿಸಿದೆ ಅಥವಾ ಕುಶಲತೆಯಿಂದ ಬಳಸಿದೆ ಎಂದು ಫಲಿತಾಂಶಗಳು ಸೂಚಿಸುತ್ತವೆ. ಡಿಎಯು ತಂಡವು ವೈರಲ್ ವೀಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ವೈರಲ್ ವಿಡಿಯೋವನ್ನು AI ರಚಿಸಲಾಗಿದೆ ಎಂಬುದು ಅವರು ತೀರ್ಮಾನಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗಿರುವ ವಿಡಿಯೋ ನಕಲಿ ಎಂದು ಟಿವಿ9 ಕನ್ನಡ ತನಿಖೆಯಿಂದ ತಿಳಿದುಬಂದಿದೆ. ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ಋಷಿಕೇಶದಲ್ಲಿ ಅಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಇದು ಕೃತಕ ಬುದ್ದಿಮತ್ತೆ AI ಯಿಂದ ರಚಿಸಿದ ವಿಡಿಯೋ ಆಗಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ